ರಹಿತ ಪಾವತಿ ವ್ಯವಸ್ಥೆ ಮಾಡಿ ಮೈಸೂರು ನಗರ ಪಾಲಿಕೆ ವತಿಯಿಂದ ನಗರದ ಹಲವು ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ (ಆರ್‌ಒ ಪ್ಲಾಂಟ್)ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ೫ ರೂಪಾಯಿಯ ಹೊಸ ನಾಣ್ಯವನ್ನು ಹಾಕಿದಾಗ ಮಾತ್ರ ಸಾರ್ವಜನಿಕರು ನೀರು ಪಡೆಯ ಬಹುದಾಗಿದೆ. ಬಹುತೇಕ ಸಾರ್ವಜನಿಕರು ೫ ರೂಪಾಯಿ ನಾಣ್ಯಕ್ಕಾಗಿ ರಸ್ತೆಯಲ್ಲಿ ಓಡಾಡುವ ಜನರನ್ನು, ಇಲ್ಲ ಅಕ್ಕ- ಪಕ್ಕದ ಅಂಗಡಿಗಳಿಗೆ ಹೋಗಿ ನಾಣ್ಯ ಪಡೆಯುವ ಪರಿಸ್ಥಿತಿ ಇದೆ. ಸಾಮಾನ್ಯವಾಗಿ, ಎಲ್ಲರ ಮನೆಯಲ್ಲೂ ಹಿರಿಯ ನಾಗರಿಕರೇ ನೀರು ತೆಗೆದುಕೊಂಡು ಬರುವ ಪರಿಸ್ಥಿತಿ ಇದೆ. ೫ ರೂಪಾಯಿ ನಾಣ್ಯಕ್ಕಾಗಿ ಬೇರೆಯವರನ್ನು ಕೇಳುವುದು ಅವರಿಗೆ ಒಂದು ರೀತಿಯಲ್ಲಿ ಮುಜುಗರವೂ ಆಗಬಹುದು. ತಂತ್ರಜ್ಞಾನ ಇಷ್ಟು ಮುಂದುವರಿದಿದ್ದರೂ ಮೈಸೂರು ನಗರ ಪಾಲಿಕೆಯವರು, ಇನ್ನೂ ಓಬಿರಾಯನ ಕಾಲದಲ್ಲೇ ಇದ್ದಾರೆ. ನಾಣ್ಯದ ವ್ಯವಸ್ಥೆಯ ಬದಲಾಗಿ ಫೋನ್ ಪೇ ಅಥವಾ ಗೂಗಲ್ ಪೇ ಅಥವಾ ಕಾರ್ಡ್ ಸ್ವೈಪಿಂಗ್ ವ್ಯವಸ್ಥೆ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, ನಗರ ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
-ಬೂಕನಕೆರೆ ವಿಜೇಂದ್ರ, ಕುವೆಂಪು ನಗರ ಮೈಸೂರು





