Mysore
34
scattered clouds

Social Media

ಗುರುವಾರ, 14 ಮೇ 2026
Light
Dark

ಓದುಗರ ಪತ್ರ: ಸೇತುವೆಗೆ ತಡೆಗೋಡೆ ನಿರ್ಮಿಸಿ

ಓದುಗರ ಪತ್ರ

ಮೈಸೂರು ಜಿಲ್ಲೆ, ಹೆಚ್.ಡಿ.ಕೋಟೆ ತಾಲ್ಲೂಕಿನ ಮಾದಾಪುರ ಹಾಗೂ ಚೆಕ್ಕೂರು ಗ್ರಾಮದ ಬಳಿ ಇರುವ ಕಬಿನಿ ಜಲಾಶಯದ ದೊಡ್ಡ ಸೇತುವೆಗೆ ತಡೆಗೋಡೆಯಾಗಿ ನಿರ್ಮಿಸಿದ್ದ ಸರಪಳಿಗಳು ಕಳಚಿ ಬಿದ್ದು ವರ್ಷಗಳೇ ಕಳೆದಿದ್ದರೂ ಹೊಸದಾಗಿ ಅಳವಡಿಸಲು ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿಲ್ಲ. ಸೇತುವೆಗೆ ಡಾಂಬರೀಕರಣ ಮಾಡಿದ್ದು, ರಾತ್ರಿ ವೇಳೆ ವೇಗವಾಗಿ ವಾಹನಗಳು ಬಂದರೆ ಆಕಸ್ಮಿಕವಾಗಿ ನದಿಗೆ ಬಿದ್ದು ಅಪಘಾತ ಸಂಭವಿಸುವ ಸಾಧ್ಯತೆಯಿರುತ್ತದೆ. ತಾಲ್ಲೂಕಿನ ಅಧಿಕಾರಿಗಳು ಹಾಗೂ ಜನಪ್ರತಿನಿಽಗಳು ಕೂಡಲೇ ಸೇತುವೆಗೆ ತಡೆಗೋಡೆ ನಿರ್ಮಿಸುವ ಮೂಲಕ ಅಪಘಾತಗಳಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾ.

Tags:
error: Content is protected !!