Mysore
23
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಓದುಗರ ಪತ್ರ: ಆಹಾರ ಸರಬರಾಜಿಗೆ ಕಪ್ಪು ಪ್ಲಾಸ್ಟಿಕ್ ಡಬ್ಬಿಗಳನ್ನು ನಿಷೇಧಿಸಿ

dgp murder case

ನಗರ ಪ್ರದೇಶಗಳ ಹೋಟೆಲ್‌ಗಳಲ್ಲಿ ನೀಡಲಾಗುವ ಆಹಾರ ಪಾರ್ಸೆಲ್‌ಗಳು ಹಾಗೂ ಆನ್ ಲೈನ್ ಮೂಲಕ ಸರಬರಾಜಾಗುವ ಶೇ.೯೦ ಕ್ಕಿಂತ ಹೆಚ್ಚು ಆಹಾರ ಪದಾರ್ಥಗಳ ವಿತರಣೆಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಡಬ್ಬಿಗಳನ್ನೇ ಬಳಸಲಾಗುತ್ತಿದೆ. ಆದರೆ ಇವುಗಳಲ್ಲಿ ಇ-ತ್ಯಾಜ್ಯದ ವಿಷಕಾರಿ ರಾಸಾಯನಿಕಗಳು ಇರುವುದು ಸಂಶೋಧನೆಗಳಿಂದ ಸಾಬೀತಾಗಿದೆ. ಬಿಸಿ ಆಹಾರವನ್ನು ಇವುಗಳಲ್ಲಿ ಪ್ಯಾಕ್ ಮಾಡಿದಾಗ ಈ ಕ್ಯಾನ್ಸರ್‌ಕಾರಕ ರಾಸಾಯನಿಕಗಳು ಆಹಾರದೊಂದಿಗೆ ದೇಹವನ್ನು ಸೇರಿ ಹಾರ್ಮೋನ್ ಗಳಲ್ಲಿ ಏರುಪೇರು ಮತ್ತು ನರ ದೌರ್ಬಲ್ಯಕ್ಕೆ ಕಾರಣವಾಗುತ್ತವೆ.

ಪರಿಸರದ ದೃಷ್ಟಿಯಿಂದಲೂ ಇವು ಅತ್ಯಂತ ಅಪಾಯಕಾರಿ. ಕಪ್ಪು ಬಣ್ಣವು ಇನ್ರಾರೆಡ್ ಕಿರಣಗಳನ್ನು ಹೀರುವುದರಿಂದ ಶೇ.೯೦ರಷ್ಟು ಕಪ್ಪು ಪ್ಲಾಸ್ಟಿಕ್ ಮರುಬಳಕೆಯಾಗದೆ ಕಸದ ರಾಶಿಯನ್ನು ಸೇರುತ್ತಿದೆ. ಇದಕ್ಕೆ ಪರಿಹಾರವಾಗಿ ಸರ್ಕಾರವು ಆಹಾರ ಪ್ಯಾಕಿಂಗ್‌ನಲ್ಲಿ ಕಪ್ಪು ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಽಸಬೇಕು. ಹೋಟೆಲ್‌ಗಳು ಮತ್ತು ಗ್ರಾಹಕರು ಪರಿಸರಸ್ನೇಹಿ ಸ್ಟೀಲ್, ಗಾಜಿನ ಪಾತ್ರೆಗಳು ಅಥವಾ ಎಲೆಗಳನ್ನು ಕಪ್ಪು ಪ್ಲಾಸ್ಟಿಕ್ ಬೌಲ್‌ಗಳಿಗೆ ಪರ್ಯಾಯವಾಗಿ ಬಳಕೆ ಮಾಡುವುದು ಅಗತ್ಯ.

-ಡಾ.ಎಚ್. ಕೆ.ವಿಜಯಕುಮಾರ್, ಬೆಂಗಳೂರು

Tags:
error: Content is protected !!