ಮೈಸೂರಿನ ಡಿ.ಸುಬ್ಬಯ್ಯ ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ನಿಗಮಕ್ಕೆ ಸೇರಿದ ಜಂಕ್ಷನ್ ಬಾಕ್ಸ್ ಕವರ್ ಪ್ಲೇಟ್ ರಸ್ತೆ ಕಾಮಗಾರಿ ಸಂದರ್ಭದಲ್ಲಿ ಮುರಿದು ಹೋಗಿದೆ.
ಮಳೆ ಬಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಎಲೆಕ್ಟ್ರಿಕ್ ವೈರ್‌ಗೆ ನೀರು ತಗುಲಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಜಂಕ್ಷನ್ ಬಾಕ್ಸ್‌ಗೆ ಮುಚ್ಚಳ ಅಳವಡಿಸುವ ಮೂಲಕ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಬೇಕಾಗಿದೆ.
– ಶರತ್, ಮೈಸೂರು





