Mysore
32
scattered clouds

Social Media

ಮಂಗಳವಾರ, 14 ಏಪ್ರಿಲ 2026
Light
Dark

ಓದುಗರ ಪತ್ರ: ಸಾರ್ವಜನಿಕರ ಧ್ವನಿಯಾದ ‘ಆಂದೋಲನ’

ಓದುಗರ ಪತ್ರ

ಮೈಸೂರಿನ ಕುವೆಂಪುನಗರದ ಡಾ.ಶಿವಕುಮಾರ ಸ್ವಾಮೀಜಿ ವೃತ್ತದ ಬಳಿ ಇರುವ ರಾಷ್ಟ್ರ ಕವಿ ಕುವೆಂಪು ಅವರ ಪ್ರತಿಮೆಗೆ ಬೆಳಕಿನ ವ್ಯವಸ್ಥೆ ಇಲ್ಲದೆ ಪ್ರತಿಮೆ ಕತ್ತಲಲ್ಲಿ ಮುಳುಗಿರುವ ಬಗ್ಗೆ ಕಳೆದ ಡಿ.೩೧ರಂದು ‘ಆಂದೋಲನ’ ದಿನಪತ್ರಿಕೆಯ ಓದುಗರ ಪತ್ರಗಳು ವಿಭಾಗದಲ್ಲಿ ‘ವಿದ್ಯುತ್ ದೀಪ ಅಳವಡಿಸಿ’ ಎಂಬ ಶೀರ್ಷಕೆಯಡಿ ಪತ್ರವೊಂದು ಪ್ರಕಟಗೊಂಡಿತ್ತು.

ಎಲ್ಲೆಡೆ ಕನ್ನಡದ ಕಂಪನ್ನು ಪಸರಿಸಿದ ಕುವೆಂಪುರಂತಹ ಮಹಾನ್ ವ್ಯಕ್ತಿಯ ಪ್ರತಿಮೆಯನ್ನು ಸ್ಥಾಪಿಸಿ ಅಲ್ಲಿ ಬೆಳಕಿನ ವ್ಯವಸ್ಥೆ ಮಾಡದೆ ಕತ್ತಲಲ್ಲಿರುವಂತೆ ಮಾಡಿದ್ದು, ಅವರಿಗೆ ಅಗೌರವ ಸೂಚಿಸಿದಂತಾಗಿತ್ತು. ಆದ್ದರಿಂದ ಕುವೆಂಪುರವರ ಪ್ರತಿಮೆ ಇರುವ ಆವರಣವನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪದ ವ್ಯವಸ್ಥೆ ಕಲ್ಪಿಸುವಂತೆ ಕೋರಲಾಗಿತ್ತು.ಓದುಗರ ಪತ್ರ ಪ್ರಕಟಗೊಂಡ ಬಳಿಕ ಎಚ್ಚೆತ್ತುಕೊಂಡ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕುವೆಂಪುರವರ ಪ್ರತಿಮೆಗೆ ವಿದ್ಯುತ್ ದೀಪದ ವ್ಯವಸ್ಥೆಯನ್ನು ಕಲ್ಪಿಸಿ ದ್ದಾರೆ. ಪತ್ರವನ್ನು ಪ್ರಕಟಿಸಿದ ‘ಆಂದೋಲನ’ ಪತ್ರಿಕೆಗೆ ಧನ್ಯವಾದಗಳು.

 -ಎಂ.ಎಸ್.ಉಷಾ ಪ್ರಕಾಶ್, ಎಸ್‌ಬಿಎಂ ಕಾಲೋನಿ, ಮೈಸೂರು.

Tags:
error: Content is protected !!