ಓ ನನ್ನ ಒಲವಿನ ‘ಆಂದೋಲನ’
ಓ ನನ್ನ ಒಲವಿನ
ಬೆಳಗಿನ ಆಂದೋಲನ,
ನೋಡ ನೋಡುತ್ತಲೇ ನಿನಗೆ ಈಗ
ತುಂಬಿತು ಬರೋಬ್ಬರಿ ವರ್ಷ ೫೩
ಅದಕ್ಕೆ ನಿನಗೀಗ ಹುಟ್ಟುಹಬ್ಬ
ನನಗೂ ಕಲಿಸಿಕೊಟ್ಟೆಯಲ್ಲ..
ಕಟ್ಟುವುದ ಪುಟ್ಟ ಪುಟ್ಟ ಕಬ್ಬ !
ಎನಿತು ಬಣ್ಣಿಸಲಿ ನಿನ್ನ ಹಾಡು-ಪಾಡು…
ಮೈಸೂರಿನಲ್ಲಿ ಮಲ್ಲಿಗೆಯಂತೆ ಅರಳಿದ
ನಿನ್ನ ವೃತ್ತಿ ಪ್ರೀತಿ..
ದಿನೇ ದಿನೇ ಬೆಳೆದೆ ಮಂಡ್ಯ, ಹಾಸನ,
ಕೊಡಗು ಚಾ. ನಗರ…ಆವೃತ್ತಿಯಾಗಿ!
ದನಿ ಇಲ್ಲದವರಿಗೆ ದನಿಯಾದೆ
ನಿಲ್ದಾಣದಿ ನಿಂತವರಿಗೆ ನೆರಳಾದೆ
ಅಯ್ಯೋ ಎಂದವರಿಗೆ ಆಸರೆಯಾದೆ
ಒಂದೇ ಎರಡೇ..!
ನಿನ್ನ ಸಾರ್ಥಕ ಪಯಣಕ್ಕೆ
ನನ್ನ ಕೋಟಿ ಕೋಟಿ ನಮನ
ಹೇಳು,ನಿನ್ನ ಎಳೆಯ ಗೆಳೆಯ
ನಾನೇನು ಮಾಡಬಲ್ಲೆ ?
ನಿತ್ಯ ಮರೆಯದೆ ನಿನ್ನ ಓದಬಲ್ಲೆ !
– ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು





