Mysore
17
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಓದುಗರ ಪತ್ರ: ಸಾರ್ಥಕ ಪಯಣ!

ಓದುಗರ ಪತ್ರ

ಸಾರ್ಥಕ ಪಯಣ!

ಐವತ್ತೆರಡು ಸಂವತ್ಸರವ ಪೂರೈಸಿ
ಐವತ್ಮೂರರತ್ತ ಮುಖಮಾಡಿರುವ
ನಿನ್ನ ಪಯಣ ಸಾರ್ಥಕ ‘ಆಂದೋಲನ’!
ಹಲ ಬಗೆಯ ಸಮಸ್ಯೆ ಸವಾಲುಗಳ ನಡುವೆ
ಬರಿಗೈಯಲ್ಲಿ ನಿನ್ನ ಜತನ ಮಾಡಿದರು ಕೋಟಿ!
ಅಗ್ನಿದಿವ್ಯದಲಿ ಗೆದ್ದು ಬೀಗಿದೆ ನೀನು!
ಪತ್ರಿಕಾರಂಗಕೆ ಮಾದರಿಯಾದರು ಕೋಟಿ
ಜನಪರ ಚಳವಳಿ ಹೋರಾಟಗಳ ಬೆಂಬಲಿಸಿ
ನೊಂದವರ ದನಿಯಾದೆ!
ಸತ್ಯ ನ್ಯಾಯದ ಹಾದಿಯಲಿ ಸಾಗಿ
ಪತ್ರಿಕಾ ಧರ್ಮವನು ಬೆಳಗಿಸಿದೆ!
ರೂಪಿಸಿದೆ ಹೊಸ ಲೇಖಕರ
ನಿನ್ನ ಪಯಣ ಸಾಗಲಿ ಶತಮಾನದತ್ತ!
ನಿನಗಿದೋ ಪ್ರೀತಿಯ ಶುಭಕಾಮನೆ

– ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ, ಮೈಸೂರು

Tags:
error: Content is protected !!