ಎಚ್. ಡಿ. ಕೋಟೆ ತಾಲ್ಲೂಕಿನ ಮಾದಾಪುರ ಗ್ರಾಮದಿಂದ ಹುಣಸೂರು ತಾಲ್ಲೂಕಿನ ಗದ್ದಿಗೆ ಗ್ರಾಮಕ್ಕೆ ಅಲ್ಲಿನ ದೇವಸ್ಥಾನಕ್ಕೆ ಹಾಗೂ ಇತರೆ ಕೆಲಸ ಕಾರ್ಯಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದು, ಸರಿಯಾದ ಬಸ್ ಸೌಲಭ್ಯವಿಲ್ಲದೆ ಪರದಾಡುವಂತಾಗಿದೆ.
ಮಾದಾಪರ ಗ್ರಾಮದಿಂದ ಗದ್ದಿಗೆಯು ಕೆಲವೇ ಕಿಮೀ ದೂರದಲ್ಲಿದ್ದು, ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳನ್ನು ಅಲ್ಲಿನ ಕೆಂಡಗಣ್ಣ ಸ್ವಾಮಿ ದೇವಸ್ಥಾನದಲ್ಲಿ ನಡೆಸುವುದು ವಾಡಿಕೆ. ಆದರೆ ಅಲ್ಲಿಗೆ ಮಾದಾಪುರದಿಂದ ಬಸ್ ವ್ಯವಸ್ಥೆ ಇಲ್ಲದಿರುವ ಪರಿಣಾಮ ಜನರು ಮಾದಾಪುರದಿಂದ ಎಚ್. ಡಿ. ಕೋಟೆಗೆ ಬಂದು ಅಲ್ಲಿಂದ ಗದ್ದಿಗೆಗೆ ಹೋಗಬೇಕಿದೆ. ಸದ್ಯ ಮೈಸೂರು-ಮಾದಾಪುರ- ಗದ್ದಿಗೆ ಮಾರ್ಗವಾಗಿ ಹಾಗೂ ಎಚ್. ಡಿ. ಕೋಟೆ-ಮಾದಾಪುರ-ಗದ್ದಿಗೆ ಮಾರ್ಗವಾಗಿ ಬಸ್ ಬಿಡುವಂತೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮೇಲಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ಮಾರ್ಗವಾಗಿ ಬೆಳಿಗ್ಗೆ ಮತ್ತು ಸಂಜೆ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್. ಡಿ. ಕೋಟೆ ತಾ