ಮೈಸೂರಿನ ಕುವೆಂಪು ನಗರದ ಆದಿಚುಂಚನಗಿರಿ ಮುಖ್ಯ ರಸ್ತೆಯ ಅಪೋಲೋ ಆಸ್ಪತ್ರೆ ಸರ್ಕಲ್ ಸೇರಿದಂತೆ ನಗರದ ಹಲವು ಸರ್ಕಲ್‌ಗಳಲ್ಲಿ ಹಗಲು, ರಾತ್ರಿ ವೇಳೆ ಮಳೆ ಬಂದಾಗಲೂ ಸಿಗ್ನಲ್ ಲೈಟ್‌ಗಳು ಆನ್ ಆಗಿರುತ್ತವೆ. ಇದರಿಂದಾಗಿ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಮಳೆಯಲ್ಲೇ ನಿಂತು ನೆನೆಯಬೇಕಾದ ಅನಿವಾರ್ಯತೆ ಇದೆ. ತಂತ್ರಜ್ಞಾನ ಇಷ್ಟೊಂದು ಮುಂದುವರಿದಿದ್ದರೂ, ಮಳೆ ಬಂದಾಗ ಸಿಗ್ನಲ್ ಲೈಟ್ಸ್ ಆಫ್ ಆಗುವಂತಹ ಸ್ವಯಂ ಚಾಲಿತ ವ್ಯವಸ್ಥೆಯನ್ನು ಇನ್ನೂ ಜಾರಿಗೊಳಿಸದಿರುವುದು ವಿಪರ್ಯಾಸ. ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿ ಮಳೆ ಬಂದಾಗ ಸಿಗ್ನಲ್ ಲೈಟ್‌ಗಳನ್ನು ಆಫ್ ಮಾಡುವ ಗೋಜಿಗೂ ಹೋಗುವುದಿಲ್ಲ, ಇದರಿಂದಾಗಿ ದ್ವಿಚಕ್ರ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆ ಬಂದಾಗ ಸಿಗ್ನಲ್ ಲೈಟ್‌ಗಳನ್ನು ಆಫ್ ಮಾಡಲು ಮೈಸೂರು ನಗರ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಬೇಕಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ ಮೈಸೂರು





