ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪನವರು ತಾವು ಬರೆಯುತ್ತಿದ್ದ ಕಾದಂಬರಿಯ ವಸ್ತುವಿನ ಸಂಪೂರ್ಣ ವಾಸ್ತವ ಸಂಗತಿಯನ್ನು ತಿಳಿದು ಬರೆಯುತ್ತಿದ್ದರು. ಅವರು ‘ಆವರಣ’ ಕಾದಂಬರಿಯನ್ನು ಬರೆಯುವ ಮುನ್ನಸಾಹಿತಿ ಬಾನು ಮುಷ್ತಾಕ್‌ರವರ ಮನೆಯಲ್ಲಿ ತಂಗಿದ್ದು, ಧರ್ಮದ ಆಚಾರ ವಿಚಾರ ಹಾಗೂ ಧಾರ್ಮಿಕ ಆಚರಣೆಗಳ ಬಗ್ಗೆ ಆಳವಾದ ಅಧ್ಯಯನ ಮಾಡಿರುವುದಾಗಿ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಇದನ್ನೂ ಓದಿ:-ಓದುಗರ ಪತ್ರ: ಆಟೋ ಬಾಡಿಗೆ ಹೆಚ್ಚು ವಸೂಲಿಗೆ ಕಡಿವಾಣ ಹಾಕಿ
ಇದೊಂದು ರೀತಿಯಲ್ಲಿ ‘ಭಾವ ಭಯ’ ಮೀರಿದ ಬಾಂಧವ್ಯ. ಇದು ಬಾನು ಮುಷ್ತಾಕ್‌ರವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ಅಲ್ಲದೇ ಮುಷ್ತಾಕ್‌ರವರ ಸಂಬಂಧಿಕರ ಜೊತೆಯಲ್ಲೇ ಹೋಗಿ,ಖಬರಸ್ಥಾನ, ಮಸೀದಿಗಳಿಗೆ ಭೇಟಿ ನೀಡಿ ಅವರಿಂದ ಸಂಪೂರ್ಣ ಮಾಹಿತಿ ಸಂಗ್ರಹಿಸಿರುವ ಎಸ್.ಎಲ್. ಭೈರಪ್ಪನವರ ಧೈರ್ಯವನ್ನು ಮೆಚ್ಚಲೇಬೇಕು. ಈ ರೀತಿ ವಾಸ್ತವವನ್ನೂ ಅರಿತು ಬರೆಯುತ್ತಿದ್ದ ಎಸ್. ಎಲ್. ಭೈರಪ್ಪನವರಿಗೆ ಲಕ್ಷಾಂತರ ಮಂದಿ ಓದುಗರು ಇದ್ದುದು ಸಹಜವೇ ಆಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾನು ಮುಷ್ತಾಕ್ ರವರ ಧೈರ್ಯ ಮತ್ತು ಭೈರಪ್ಪನವರಿಗೆ ನೀಡಿದ ಆತಿಥ್ಯ ಎಂದಿಗೂ ಮಾಸದ ಸಂಗತಿ, ಹೃದಯದ ಹಣತೆ ಎಂದರೆ ಇದೇ ಅಲ್ಲವೇ ?
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





