Mysore
23
overcast clouds

Social Media

ಬುಧವಾರ, 20 ಮೇ 2026
Light
Dark

ಓದುಗರ ಪತ್ರ: ಪಶ್ಚಿಮ ಬಂಗಾಳದಲ್ಲಿ ಬದಲಾವಣೆಯ ಪರ್ವ

ಓದುಗರ ಪತ್ರ

ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಶ್ಚಿಮ ಬಂಗಾಳ ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು ೨೯೪ ಸ್ಥಾನಗಳ ಪೈಕಿ ೨೦೮ಸ್ಥಾನಗಳನ್ನು ಗೆಲ್ಲುವ ಮೂಲಕ ತೃಣಮೂಲ ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕಿ ಮಮತಾ ಬ್ಯಾನರ್ಜಿ ಅವರ ೧೫ ವರ್ಷಗಳ ಆಡಳಿತವನ್ನು ಅಂತ್ಯಗೊಳಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ ೮೧ ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ.

ಸುಮಾರು ೩ ದಶಕಗಳ ಕಾಲ ಬಂಗಾಳದಲ್ಲಿ ಅಧಿಕಾರ ನಡೆಸಿದ್ದ ಎಡ ಪಕ್ಷಗಳು ಗಳಿಸಿರುವ ಸ್ಥಾನ ಕೇವಲ ೨ ಮಾತ್ರ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕಮಲವನ್ನು ಅರಳಿಸುವ ದೃಢ ಸಂಕಲ್ಪ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಹೂಡಿದ್ದ ಚುನಾವಣಾ ತಂತ್ರಗಳು ಯಶಸ್ವಿಯಾಗಿವೆ. ಪ್ರಧಾನಿ ಮೋದಿಯವರು ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ೧೮ಕ್ಕೂ ಹೆಚ್ಚು ಬಾರಿ ಚುನಾವಣಾ ಪ್ರಚಾರ ನಡೆಸಿ, ಮತದಾರರನ್ನು ಸೂಜಿಗಲ್ಲಿನಂತೆ ಆಕರ್ಷಿಸಿದ್ದು ಪಕ್ಷದ ಅಭೂತಪೂರ್ವ ಗೆಲುವಿಗೆ ನೆರವಾಗಿದೆ. ಅದೂ ಅಲ್ಲದೇ, ಟಿಎಂಸಿಯ ಭದ್ರಕೋಟೆಯಾಗಿದ್ದ ಮಹಿಳೆಯರನ್ನು ಆಕರ್ಷಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಪಶ್ಚಿಮ ಬಂಗಾಳದಲ್ಲಿ ದೊರೆತಿರುವ ಈ ಅಭೂತಪೂರ್ವ ಜನಾದೇಶವನ್ನು ಪಕ್ಷ ಉತ್ತಮ ರೀತಿಯಲ್ಲಿ ಬಳಸಿಕೊಂಡು, ಭ್ರಷ್ಟಾಚಾರ ರಹಿತ ಹಾಗೂ ಜನಪರ ಆಡಳಿತವನ್ನು ನೀಡಲಿ.

 -ಕೆ.ವಿ.ವಾಸು, ವಿವೇಕಾನಂದ ನಗರ, ಮೈಸೂರು

 

Tags:
error: Content is protected !!