ಮೈಸೂರು: ಬೆಂಗಳೂರಿನ ಸರ್ಜಾಪುರದಲ್ಲಿ ಶನಿವಾರ ಹಾಗೂ ಭಾನುವಾರ ನಡೆದ 10ನೇ ರಾಜ್ಯ ಪೆಂಕಾಕ್ ಸಿಲಾತ್ ಕ್ರೀಡಾಕೂಟದಲ್ಲಿ ಪೆಂಕಾಕ್ ಸಿಲಾತ್ ಕರಾಟೆ ಮಾದರಿ ಕ್ರೀಡಾಕೂಟ) ಪಾಲ್ಗೊಂಡಿದ್ದ ಮೈಸೂರಿನ ಸ್ಪರ್ಧಿಗಳು 12 ಪದಕಗಳನ್ನು ಗಳಿಸಿದ್ದಾರೆ. ಬಾಲಕರ ವಿಭಾಗದಲ್ಲಿ ಹರ್ಷ ಎರಡು ಚಿನ್ನದ ಪದಕ, ಸೂರಜ್, ಸಮರ್ಥ್, ರವಿ ತಲಾ ಒಂದು ಬೆಳ್ಳಿ ಪದಕ, ಎಸ್.ಶ್ರೀ ಕಂಚಿನ ಪದಕ, ಬಾಲಕಿಯರ ವಿಭಾಗದಲ್ಲಿ ತುಷಿಕಾ, ಶಾರದಾ, ರಾಘವಿ ತಲಾ ಎರಡು ಚಿನ್ನದ ಪದಕ, ಯಾದವಿ ಒಂದು ಚಿನ್ನದ ಪದಕ ಗೆದ್ದು ಖೇಲೋ ಇಂಡಿಯಾ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ. ತರಬೇತುದಾರರಾದ ಎಂ. ಎಲ್.ಮೋಹನ್ ರಾಜ್, ಸಿ.ಮಹದೇವ್, ಎನ್.ಯೋಗೇಶ್ ಹಾಜರಿದ್ದರು.