Mysore
29
broken clouds

Social Media

ಶುಕ್ರವಾರ, 08 ಮೇ 2026
Light
Dark

ಆಗ ಟೈಲರ್ ಕಾಲ, ಈಗ ಆನ್ ಲೈನ್ ಕಾಲ…

ಮಧುಕರ ಮಳವಳ್ಳಿ

(ಈ ಲೇಖನಕ್ಕೆ ಕೃತಕ ಬುದ್ಧಿಮತ್ತೆಯ ಚಿತ್ರ ಬಳಸಲಾಗಿದೆ)

ಹಬ್ಬಕ್ಕೆ ಯಾರಿಗೆ ತಾನೆ ಹೊಸ ಬಟ್ಟೆ ಇಷ್ಟ ಇಲ್ಲ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರ ತನಕ ಅದು ಸಂಭ್ರಮಕ್ಕೆ ಕಾರಣ.ಬಾಲ್ಯದಲ್ಲಿ ಬಟ್ಟೆ ಅಂಗಡಿಗೆ ಹೋಗಿ ನಮ್ಮ ಹಣಕಾಸಿನ ಅನುಕೂಲಕ್ಕೆ ತಕ್ಕಂತೆ ಬಟ್ಟೆ ತಂದು ಟೈಲರ್‌ಗೆ ಆಳತೆ ಕೊಟ್ಟು ‘ಹಬ್ಬಕ್ಕೆ ಎರಡು ದಿನ ಮೊದಲೆ ನೀಡುವಂತೆ’ ಹೇಳಿ ಬರುತ್ತಿದ್ದವು. ಆ ಟೈಲರ್ ರಾಗಪಾಡಿ ‘ಬಹಳ ಜನ ಹಬ್ಬಕ್ಕೆ ಬಟ್ಟೆ ಕೊಡು’ ಅಂತಾ ಹೇಳಿದಾರೆ. ‘ನೋಡುವಾ’ ಅನ್ನುತ್ತಿದ್ದ. ಆಗ ಅಪ್ಪ ‘ನನ್ ಅಂಗಿ ಚಡ್ಡಿ ಬೇಕಾದರೆ ಹಬ್ಬ ಅದ್‌ಮೇಲೆ ಕೊಡು. ಆದರೆ ನನ್ನ ಮಗ-ಮಗಳು ಬಟ್ಟೆನಾ ಹಬ್ಬದ ಮುಂಚೆನೆ ಕೊಡು’ ಎಂದು ಆಡ್ವಾನ್ಸ್ ಕೊಡುತ್ತಿದ್ದ.

ಆದರೆ ಕ್ರಮೇಣ ಕಾಲ ಚಕ್ರದ ಬದಲಾವಣೆಯಲ್ಲಿ ಕೊಂಗನಾಡಿನಿಂದ ಸ್ಕೂಟರ್ ಏರಿ ಬಂದ ವ್ಯಾಪಾರಿಗಳು ಹಬ್ಬ. ‘ವಾರ’ ಇರುವಾಗಲೇ ಮಕ್ಕಳ ಬಟ್ಟೆಗಳನ್ನು ರೆಡಿಮೇಡ್ ಅಂಗಿಗಳು, ಚಡ್ಡಿಗಳು, ಲಂಗ, ದಾವಣಿ, ಫ್ರಾಕ್ ಇತ್ಯಾದಿಗಳನ್ನು ಸಂತೆಯಲ್ಲಿ ಮಾರುತ್ತಿದ್ದರು. ಕ್ರಮೇಣ ಊರುಗಳಿಗೆ ಬರಲು ಆರಂಭಿಸಿದರು. ನಮಗೆ ಖುಷಿ, ಬೇಕಾದ ಬಣ್ಣ, ಆಳತೆಗೆ ಸರಿ ಹೊಂದುವ ಬಟ್ಟೆಗಳು ಆಗ ನಮ್ಮದಾಗುತ್ತಿತು. ಮತ್ತೆ ಹಬ್ಬಕ್ಕೆ ವಾರ ಮೊದಲೇ ಬಟ್ಟೆ ಮನೆಯ ಟ್ರಂಕ್ ಸೇರಿದ ಸಂತೋಷ ಬೇರೆ.

ಗೆಳೆಯರಿಗೆ ಹೇಳಿ ಖುಷಿ ಪಡುತ್ತಿದ್ದವು. ಯಾಕೆಂದರೆ ಟೈಲರ್ ಬಟ್ಟೆ ಕೊಟ್ಟರೆ ಹಬ್ಬದ ದಿನ ಕೊಡುತ್ತಾನೆ ಎಂಬ ನಂಬಿಕೆಯಿಲ್ಲ. ಎಷ್ಟೋ ಬಾರಿ ಹಬ್ಬದ ದಿನ ಸ್ನಾನ, ಊಟ, ತಿಂಡಿ ಇಲ್ಲದೆಯೇ, ಅವನು ಅಂಗಡಿ ಬಳಿ ನಿಂತು ಬಟ್ಟೆ ಹೊಲಿಸಿ ಬಂದ ಉದಾಹರಣೆ ಇದೆ.

ಸ್ಕೂಟರ್ ಏರಿ ಬರುವವರ ಜೊತೆಗೆ ಅವ್ವಂದಿರು ಚೌಕಾಸಿ ಮಾಡಿ ಬಟ್ಟೆ ಕೊಡಿಸುತ್ತಾ. ಇಡೀ ಊರಿನ ಮಕ್ಕಳು ಹೊಸಬಟ್ಟೆಯ ಸಂತೋಷದಲ್ಲಿ ಇರುವಂತೆ ಮಾಡುತ್ತಿದ್ದರು.

ಆದರೆ ಈಗ ಆನ್‌ಲೈನ್ ಶಾಪಿಂಗ್ ಇದೆ. ಅದು ಉಳ್ಳವರಿಗೆ. ನಮಗೆ ಅಂತಲೇ ಅಂದು ಊರಿಗೆ ಬಂದು ವ್ಯಾಪಾರ ಮಾಡುತ್ತಾ ಇದ್ದವರು ಈಗ ಬದಲಾಗಿದ್ದಾರೆ. ಊರಿನ ಯಾವುದಾದರೂ ಛತ್ರ, ಸಮುದಾದ ಭವನದಲ್ಲಿ ಅಂಗಡಿ ತೆರೆಯುತ್ತಾರೆ. ಅದನ್ನು ತಿಂಗಳ ಬಾಡಿಗೆಗೆ ಪಡೆದು. ಎಲ್ಲರಿಗೂ ತಿಳಿಯುವಂತೆ ಆಟೋದಲ್ಲಿ ಪ್ರಚಾರ ಕೂಡ ಮಾಡುತ್ತಾರೆ. ಮತ್ತೆ ಬೆಲೆ ಬಗ್ಗೆ ಕೂಡ ತಿಳಿಸುತ್ತಾರೆ. ಒಂದು ಕೊಂಡರೆ ಮತ್ತೊಂದು ಫ್ರೀ’ಎಂಬ ಘೋಷಣೆ ಇರುತ್ತದೆ. ಆಳತೆ, ಬಣ್ಣ, ನವೀನ ವಿನ್ಯಾಸಗಳಿಗೆ ಮನ ಸೋತ ಜನ ಇದೇ ನಮ್ಮ ಪಾಲಿಗೆ ಮಾಲ್ ಎಂದು ಭಾವಿಸುತ್ತಾರೆ. ಈ ತಾತ್ಕಾಲಿಕ ಅಂಗಡಿಗಳಿಗೆ ಮುಗಿಬೀಳುತ್ತಾರೆ.

ಆ ಅಂಗಡಿಯ ಮಾಲಿಕರನ್ನು ಮಾತನಾಡಿಸಿದಾಗ. ನಮ್ಮ ತಂದೆ ಜೊತೆ ನಾನು ಬಾಲ್ಯದಿಂದಲೂ ವ್ಯಾಪಾರ ಮಾಡಲು ಬರುತ್ತಾಯಿದ್ದೆ. ಈಗ ಕಾಲ ಬದಲಾಗಿದೆ. ನಾವು ಇಂತಹ ಕಡೆ ಅಂಗಡಿ ಮಾಡುತ್ತೀವಿ. ಲಾಭ -ನಷ್ಟ ಎಂದರೆ. ಹುಸಿ ನಗೆ ಬೀರುತ್ತಾ, ‘ಕಲಿತ ಕಸಬು . ಸಾವಿರ ರೂಪಾಯಿಗೆ ವ್ಯಾಪಾರ ಮಾಡಿ ೫೦೦ ರೂ.ಗೆ ಕೂಪನ್’ ಎಂದ.

” ಈಗ ಆನ್‌ಲೈನ್ ಶಾಪಿಂಗ್ ಇದೆ. ಅದು ಉಳ್ಳವರಿಗೆ. ನಮಗೆ ಅಂತಲೇ ಅಂದು ಊರಿಗೆ ಬಂದು ವ್ಯಾಪಾರ ಮಾಡುತ್ತಾ ಇದ್ದವರು ಈಗ ಬದಲಾಗಿದ್ದಾರೆ.”

 

 

Tags:
error: Content is protected !!