ಬಳಸಿದ ಅಡುಗೆ ಎಣ್ಣೆಯನ್ನು ಸರಕಾರವೇ ಸಂಗ್ರಹಿಸಿ ಜೈವಿಕ ಇಂಧನವಾಗಿ (ಬಯೋಡೀಸೆಲ) ಪರಿವರ್ತಿಸುವ ಯೋಜನೆ ಪ್ರಶಂಸನೀಯ. ಪುನರಾವರ್ತಿತ ಎಣ್ಣೆ ಬಳಕೆಯಿಂದ ಹೊರಹೊಮ್ಮುವ ರಾಸಾಯನಿಕಗಳು ಕ್ಯಾನ್ಸರ್ನಂತಹ ಗಂಭೀರ ಕಾಯಿಲೆಗಳಿಗೆ ಕಾರಣವಾಗುತ್ತಿರುವುದು ಕಳವಳಕಾರಿ. ಈ ಯೋಜನೆಯು ಯಶಸ್ವಿಯಾಗಲು ಕೇವಲ ಹೋಟೆಲ್ಗಳು ಮಾತ್ರವಲ್ಲದೆ ಬೀದಿಬದಿ ವ್ಯಾಪಾರಿಗಳು ಮತ್ತು ಗೃಹಿಣಿಯರಿಗೂ ಅರಿವು ಮೂಡಿಸುವುದು ಅತ್ಯಗತ್ಯ. ಪ್ರತಿಯೊಂದು ಪ್ರದೇಶದಲ್ಲಿಯೂ ಎಣ್ಣೆ ಸಂಗ್ರಹಣಾ ಕೇಂದ್ರಗಳನ್ನು ತೆರೆದು ಸಾರ್ವಜನಿಕರಿಗೆ ಸೂಕ್ತ ಪ್ರೋತ್ಸಾಹಧನ ನೀಡಿದರೆ ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ಭಾಗವಹಿಸುತ್ತಾರೆ. ಕಟ್ಟುನಿಟ್ಟಿನ ತಪಾಸಣೆ ಮತ್ತು ವ್ಯಾಪಕ ಜಗೃತಿ ಅಭಿಯಾನದಿಂದ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ.
-ಡಾ.ಎಚ್.ಕೆ. ವಿಜಯಕುಮಾರ್, ಬೆಂಗಳೂರು




