ಮೈಸೂರು: ಸಂವಿಧಾನ ದಿನಾಚರಣೆಯಂದು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಡಾ. ಶ್ರೀನಿಧಿ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಜಾನಪದ ಲೋಕದಲ್ಲಿ ಮಂತ್ರಮಾಂಗಲ್ಯ ಪದ್ಧತಿಯಲ್ಲಿ ಸರಳವಾಗಿ ವಿವಾಹ ನೆರವೇರಿದೆ. ನವದಂಪತಿಯ ಸರಳತೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ದಿವಂಗತ ಮಾಜಿ ಸಂಸದ ಆರ್. ಧ್ರುವನಾರಾಯಣ ಅವರ ಪುತ್ರರಾದ ದರ್ಶನ್ ಅವರ ಆರತಕ್ಷತೆ ಹಾಗೂ ಬೀಗರ ಔತಣಕೂಟ ನವೆಂಬರ್ 29ರಂದು ಚಾಮರಾಜನಗರ ಜಿಲ್ಲೆಯ ಹೆಗ್ಗವಾಡಿಯಲ್ಲಿ ನಡೆಯಲಿದೆ.




