ನಾಡಹಬ್ಬ ದಸರಾ ಉದ್ಘಾಟನೆಗೆ ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರನ್ನು ರಾಜ್ಯ ಸರ್ಕಾರ ಆಹ್ವಾನಿಸಿರುವುದನ್ನು ಪ್ರತಿಪಕ್ಷಗಳು ಖಂಡಿಸಿರುವುದು ಸರಿಯಲ್ಲ. ರಾಜಕೀಯ ನಾಯಕರು ನಾಡಹಬ್ಬ ದಸರಾ ಉದ್ಘಾಟನೆ ವಿಚಾರದಲ್ಲಿ ಧರ್ಮವನ್ನು ಬೆರೆಸಿ ಧಾರ್ಮಿಕ ವೈಷಮ್ಯಕ್ಕೆ ಕಾರಣವಾಗಿರುವುದು ವಿಷಾದಕರ ಸಂಗತಿ.
ದೇಶದಲ್ಲಿ ನಿರುದ್ಯೋಗ, ಬಡತನ, ಹಸಿವು, ಬೆಲೆ ಏರಿಕೆ, ಸಾಮಾಜಿಕ ಅಸಮಾನತೆ, ವೇತನ ತಾರತಮ್ಯ, ಇಂತಹ ವಿಷಯಗಳ ಬಗ್ಗೆ ಹೆಚ್ಚು ಒತ್ತುಕೊಟ್ಟು ಸಮಸ್ಯೆ ಪರಿಹಾರದ ಬಗ್ಗೆ ಜನ ಪ್ರತಿನಿಧಿಗಳು ಚರ್ಚಿಸಿ ಪರಿಹಾರ ಹುಡುಕಬೇಕೇ ಹೊರತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಬಾರದು. ಇನ್ನಾದರೂ ಜನಪ್ರತಿನಿಧಿಗಳು ಮತ್ತು ಜನರು ಸರ್ವ ಧರ್ಮ ಸಹಬಾಳ್ವೆಯಿಂದ ವರ್ತಿಸಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚು ಒತ್ತು ಕೊಡಬೇಕಾಗಿದೆ.
-ರಾಜು ಹೊಸವೀಡುಹುಂಡಿ, ಮೈಸೂರು ತಾ





