Mysore
26
scattered clouds

Social Media

ಶನಿವಾರ, 28 ನವೆಂಬರ್ 2026
Light
Dark

ಗಾಂಧೀಜಿಯವರನ್ನು ಮತ್ತೊಮ್ಮೆ ಓದೋಣ..

ರವಿ ಕೋಟೆ, ಸಂಪಾದಕ 

ಗಾಂಧೀಜಿಯವರ ಬಗ್ಗೆ ಮಾತನಾಡುವವರು ಇಂದು ಬಹಳ ಮಂದಿ; ಅವರನ್ನು ಹೊಗಳುವವರೂ ಇದ್ದಾರೆ, ತೆಗಳುವವರೂ ಇದ್ದಾರೆ. ಆದರೆ, ಅವರ ಬದುಕು ಮತ್ತು ವಿಚಾರಗಳನ್ನು ಓದಿ, ಅರ್ಥ ಮಾಡಿಕೊಂಡು ಮಾತನಾಡುವವರ ಸಂಖ್ಯೆ ಎಷ್ಟು? ಗಾಂಧೀಜಿಯವರ ನಾಡಿನಲ್ಲಿಯೇ ಅವರ ಬಗ್ಗೆ ಸರಿಯಾದ ಅರಿವು ಇಲ್ಲದಿರುವುದು, ಅವರ ಕುರಿತು ಅಪಪ್ರಚಾರ ನಡೆಸುತ್ತಿರುವುದು ಮತ್ತು ಅವರನ್ನು ತಿಳಿಯದೆಯೇ ನಿಂದಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ನನ್ನನ್ನು ಹಲವು ಬಾರಿ ಯೋಚಿಸುವಂತೆ ಮಾಡಿದೆ. ಗಾಂಧೀಜಿಯವರನ್ನು ಇಂದಿನ ತಲೆಮಾರು ಮತ್ತೊಮ್ಮೆ ಓದಬೇಕು, ಅವರ ಬಗ್ಗೆ ತಿಳಿದುಕೊಳ್ಳ ಬೇಕು ಎಂದು ನನಗೆ ಅನಿಸಿದ್ದು ಇದೇ ಕಾರಣಕ್ಕೆ.

ಗಾಂಧೀಜಿಯವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಪ್ರಕಟವಾಗಿ ನೂರು ವರ್ಷ ಪೂರ್ಣಗೊಂಡ ಸಂದರ್ಭ ಇದಕ್ಕೆ ಒಂದು ಒಳ್ಳೆಯ ಅವಕಾಶವಾಯಿತು. ಈ ಸಂದರ್ಭವನ್ನು ಬಳಸಿಕೊಂಡು ಶಾಲಾ ಮಕ್ಕಳಿಗೆ ಗಾಂಧೀಜಿಯನ್ನು ಪರಿಚಯಿಸುವ ಮತ್ತು ಅವರ ಬಗ್ಗೆ ಓದಲು ಪ್ರೇರೇಪಿಸುವ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದೆವು. ಅದರ ಭಾಗವಾಗಿ ‘ಆಂದೋಲನ’ ವತಿಯಿಂದ ೫೭ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದ ೨೨೦ ಮಕ್ಕಳ ಪ್ರಬಂಧಗಳ ಆಯ್ದ ಭಾಗಗಳನ್ನು ‘ಗಾಂಧಿ ತಾತನ ಸನ್ನಿಧಿ ಯಲ್ಲಿ’ ಎಂಬ ಪುಸ್ತಕದಲ್ಲಿ ಪ್ರಕಟಿಸುತ್ತಿದ್ದೇವೆ.

ಈ ಯೋಜನೆಯನ್ನು ಆರಂಭಿಸುವಾಗ ಎಲ್ಲವೂ ಸುಲಭವಾಗಿ ನಡೆಯಲಿಲ್ಲ. ಪತ್ರಿಕೆಯೊಳಗೆಯೇ ಈ ಯೋಜನೆಯ ಬಗ್ಗೆ ಆರ್ಥಿಕ ದೃಷ್ಟಿಯಿಂದ ಆಕ್ಷೇಪ ವ್ಯಕ್ತವಾಯಿತು. ಇಷ್ಟು ದೊಡ್ಡ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳುವುದು ಪತ್ರಿಕೆಗೆ ಹೊರೆಯಾಗಬಹುದು ಎಂಬ ಆತಂಕವಿತ್ತು. ಆ ಆತಂಕವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆ. ಆದರೆ, ಪತ್ರಿಕೆಯ ಕೆಲಸ ಕೇವಲ ದಿನ ನಿತ್ಯದ ಸುದ್ದಿಗಳನ್ನು ಪ್ರಕಟಿಸುವುದಕ್ಕೆ ಮಾತ್ರ ಸೀಮಿತವಾಗಿರಬಾರದು.

ಸಮಾಜದಲ್ಲಿ ಕೆಲವು ವಿಚಾರಗಳ ಬಗ್ಗೆ ಚರ್ಚೆ ಹುಟ್ಟು ಹಾಕುವುದು ಕೂಡ ಪತ್ರಿಕೆಯ ಜವಾಬ್ದಾರಿ ಎಂದು ಭಾವಿಸುತ್ತೇನೆ. ಈ ನಂಬಿಕೆಯ ಕಾರಣದಿಂದಲೇ ಈ ಯೋಜನೆ ಯನ್ನು ಕೈಬಿಡದೆ ಮುಂದುವರಿಸಲು ನಿರ್ಧರಿಸಿದೆವು.

ಈ ಅಭಿಯಾನಕ್ಕಾಗಿ ೨೨ ವಾರಗಳ ಕಾಲ ‘ಆಂದೋಲನ’ದಲ್ಲಿ ಒಂದಿಡೀ ಪುಟವನ್ನು ಮೀಸಲಿಟ್ಟಿದ್ದೆವು; ಪ್ರತಿ ವಾರ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳ ವಿವರಗಳು, ಗಾಂಧೀಜಿಯವರ ‘ನನ್ನ ಸತ್ಯಾನ್ವೇಷಣೆ’ ಪುಸ್ತಕದ ಆಯ್ದ ಭಾಗ ಹಾಗೂ ಗಾಂಧೀಜಿಯವರಿಂದ ಪ್ರೇರಿತರಾಗಿ ತಮ್ಮ ಜೀವನದಲ್ಲಿ ಬದಲಾವಣೆ ಮಾಡಿಕೊಂಡ ವ್ಯಕ್ತಿಗಳ ವಿವರಗಳನ್ನು ಪ್ರಕಟಿಸುತ್ತಿದ್ದೆವು. ಈ ಪುಟದಲ್ಲಿ ಜಾಹೀ ರಾತುಗಳನ್ನು ಪ್ರಕಟಿಸುವ ಅವಕಾಶವಿತ್ತು. ಆದರೆ, ನಾವು ಜಾಹೀ ರಾತುಗಳನ್ನು ಸ್ವೀಕರಿಸಲಿಲ್ಲ. ಇದಕ್ಕೆ ಕಾರಣ – ಜಾಹೀರಾತುಗಳಿಲ್ಲದೆ, ಓದುಗರ ಚಂದಾದಾರಿಕೆಯಿಂದ ಪತ್ರಿಕೆ ನಡೆಸಬೇಕು ಎಂಬುದು ಗಾಂಧೀಜಿಯವರ ಆಶಯವಾಗಿತ್ತು. ಪತ್ರಿಕೆ ಈ ಅಭಿಯಾನ ಶುರು ಮಾಡುವಾಗ ಗಾಂಧೀಜಿಯವರ ಹೆಸರಿನಲ್ಲಿ ನಡೆಸುವ ಈ ಅಭಿಯಾನವನ್ನು ವಾಣಿಜ್ಯ ಉದ್ದೇಶದಿಂದ ದೂರವಿಡಬೇಕು ಎಂದು ಸಲಹೆ ಕೊಟ್ಟ ‘ಆಂದೋಲನ’ ಬಳಗದ ಆತ್ಮೀಯರಾದ ಕಥೆಗಾರ ಅಬ್ದುಲ್ ರಶೀದ್ ಅವರಿಗೆ ಧನ್ಯವಾದಗಳು.

ಈ ಯೋಜನೆಗೆ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆನ್ನೆಲುಬಾಗಿ ನಿಂತಿತ್ತು. ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ.ಕೃಷ್ಣ ಅವರು ಮೊದಲ ದಿನದಿಂದಲೇ ಈ ಪ್ರಯತ್ನಕ್ಕೆ ಬೆಂಬಲವಾಗಿ ನಿಂತರು. ಅವರ ಸಹಕಾರ ಮತ್ತು ಪ್ರೋತ್ಸಾಹವಿಲ್ಲದೆ ಈ ಯೋಜನೆಯನ್ನು ಇಷ್ಟು ಪರಿಣಾಮಕಾರಿಯಾಗಿ ನಡೆಸುವುದು ಕಷ್ಟವಾಗುತ್ತಿತ್ತು. ಅವರಿಗೆ ನನ್ನ ಅನಂತ ಧನ್ಯವಾದಗಳು

ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲು ನಮಗೆ ತುಂಬು ಪ್ರೋತ್ಸಾಹ ನೀಡಿದ, ಅದರ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತು ಕಾರ್ಯಚಟುವಟಿಕೆಗಳಿಗೆ ಕೈಜೋಡಿಸಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರಿನ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಪ್ರೊ.ಜಿ.ಬಿ.ಶಿವರಾಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್. ನರೇಂದ್ರಕುಮಾರ್ ಹಾಗೂ ಗಾಂಧಿ ಸ್ಮಾರಕ ನಿಧಿಯ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಪತ್ರಿಕೆಯ ಸಹೋದ್ಯೋಗಿಗಳ ಬೆಂಬಲವೂ ಈ ಪ್ರಯತ್ನದಲ್ಲಿ ಬಹಳ ಮುಖ್ಯವಾಗಿತ್ತು. ರವಿಚಂದ್ರ ಚಿಕ್ಕೆಂಪಿಹುಂಡಿ ಸೇರಿದಂತೆ ಈ ಕೆಲಸ ಮುಂದುವರಿಯಲು ಹಲವರು ಕೈಜೋಡಿಸಿದರು. ಪತ್ರಿಕೆಯ ಹೊರಗಿನಿಂದಲೂ ಅನೇಕರು ಬೆಂಬಲ ನೀಡಿದರು. ಈ ಪ್ರಯತ್ನಕ್ಕೆ ನೆರವಾದ ಎಲ್ಲ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ನನ್ನ ವಂದನೆಗಳು.

ಈ ಪುಸ್ತಕದಲ್ಲಿ ಮಕ್ಕಳ ಪ್ರಬಂಧಗಳ ಆಯ್ದ ಭಾಗಗಳನ್ನು ಓದುವಾಗ ಗಾಂಧಿಜಿಯವರ ಕುರಿತ ಅವರ ತಿಳಿವಳಿಕೆ, ದೃಷ್ಟಿಕೋನ ಮತ್ತು ಆಲೋಚನೆಗಳು ನಮ್ಮ ಗಮನಕ್ಕೆ ಬಂದವು. ಮಕ್ಕಳು ಗಾಂಧಿಜಿಯವರ ಬಗ್ಗೆ ಏನು ಬರೆದಿದ್ದಾರೆ ಎನ್ನುವುದಕ್ಕಿಂತ, ಅವರನ್ನು ಓದಿ ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ಪ್ರಯತ್ನಿಸಿರುವುದು ನನಗೆ ಹೆಚ್ಚು ಮುಖ್ಯವೆನಿಸಿತು. ಈ ಬರಹಗಳಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕೆಂದಿಲ್ಲ. ಆದರೆ, ಪ್ರಶ್ನಿಸುವ ಮತ್ತು ತಿಳಿದುಕೊಳ್ಳುವ ಆಸಕ್ತಿ ಇರುವುದು ಮುಖ್ಯ. ಗಾಂಧಿಜಿಯವರ ಬದುಕು ಮತ್ತು ವಿಚಾರಗಳ ಬಗ್ಗೆ ಹೊಸ ತಲೆಮಾರಿನಲ್ಲಿ ಆಸಕ್ತಿ ಮೂಡಿದರೆ, ಈ ಪ್ರಯತ್ನದ ಉದ್ದೇಶ ಈಡೇರಿದಂತಾಗುತ್ತದೆ.

ಗಾಂಧಿಜಿಯವರನ್ನು ಒಂದು ಪ್ರತಿಮೆಯಾಗಿ ನೋಡುವುದಕ್ಕಿಂತ, ಅವರ ವಿಚಾರಗಳೊಂದಿಗೆ ಸಂವಾದ ನಡೆಸುವುದು ಇಂದಿನ ಅಗತ್ಯ. ಈ ಉದ್ದೇಶದಿಂದಲೇ ಕರ್ನಾಟಕ ಗಾಂಧಿ ಸ್ಮಾರಕ ನಿಧಿ , ‘ಆಂದೋಲನ’ ದಿನಪತ್ರಿಕೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನವೆಂಬರ್ ೨೮ ಮತ್ತು ೨೯ರಂದು ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.

ನವೆಂಬರ್ ೨೮ರಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ವಿಚಾರಗೋಷ್ಠಿ, ಸಂವಾದ ಮತ್ತು ಗಾಂಧಿಜಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ನವೆಂಬರ್ ೨೯ರಂದು ಗಾಂಧೀಜಿ ಕುರಿತ ಸಂವಾದ ಹಾಗೂ ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು, ಪತ್ರಕರ್ತರು, ಓದುಗರು ಸೇರಿದಂತೆ ಆಸಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ಆಹ್ವಾನಿಸುತ್ತೇವೆ. ಗಾಂಧಿಜಿಯವರನ್ನು ಮತ್ತೊಮ್ಮೆ ಓದೋಣ, ಅವರ ವಿಚಾರಗಳೊಂದಿಗೆ ಸಂವಾದ ನಡೆಸೋಣ.ಈ ಅಭಿಯಾನವನ್ನು ಕೈಗೆತ್ತಿಕೊಳ್ಳಲು ನಮಗೆ ತುಂಬು ಪ್ರೋತ್ಸಾಹ ನೀಡಿದ, ಅದರ ಪ್ರತಿಯೊಂದು ಹಂತದಲ್ಲೂ ಬೆಂಬಲವಾಗಿ ನಿಂತು ಕಾರ್ಯಚಟುವಟಿಕೆಗಳಿಗೆ ಕೈಜೋಡಿಸಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಬೆಂಗಳೂರಿನ ಕಾರ್ಯದರ್ಶಿ ಎಂ.ಸಿ.ನರೇಂದ್ರ, ಪ್ರೊ.ಜಿ.ಬಿ. ಶಿವರಾಜು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋ ತ್ರಿಯ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್. ನರೇಂದ್ರಕುಮಾರ್ ಹಾಗೂ ಗಾಂಧಿ ಸ್ಮಾರಕ ನಿಧಿಯ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಗಳು. ಪತ್ರಿಕೆಯ ಸಹೋದ್ಯೋಗಿಗಳ ಬೆಂಬಲವೂ ಈ ಪ್ರಯತ್ನದಲ್ಲಿ ಬಹಳ ಮುಖ್ಯವಾಗಿತ್ತು. ರವಿಚಂದ್ರ ಚಿಕ್ಕೆಂಪಿಹುಂಡಿ ಸೇರಿದಂತೆ ಈ ಕೆಲಸ ಮುಂದುವರಿಯಲು ಹಲವರು ಕೈಜೋಡಿಸಿದರು. ಪತ್ರಿಕೆಯ ಹೊರಗಿನಿಂದಲೂ ಅನೇಕರು ಬೆಂಬಲ ನೀಡಿದರು. ಈ ಪ್ರಯತ್ನಕ್ಕೆ ನೆರವಾದ ಎಲ್ಲ ಸಹೋದ್ಯೋಗಿಗಳು, ಸ್ನೇಹಿತರು ಮತ್ತು ಹಿತೈಷಿಗಳಿಗೆ ನನ್ನ ವಂದನೆಗಳು.

ಈ ಪುಸ್ತಕದಲ್ಲಿ ಮಕ್ಕಳ ಪ್ರಬಂಧಗಳ ಆಯ್ದ ಭಾಗಗಳನ್ನು ಓದುವಾಗ ಗಾಂಧಿಜಿಯವರ ಕುರಿತ ಅವರ ತಿಳಿವಳಿಕೆ, ದೃಷ್ಟಿಕೋನ ಮತ್ತು ಆಲೋಚನೆಗಳು ನಮ್ಮ ಗಮನಕ್ಕೆ ಬಂದವು. ಮಕ್ಕಳು ಗಾಂಧಿಜಿಯವರ ಬಗ್ಗೆ ಏನು ಬರೆದಿದ್ದಾರೆ ಎನ್ನುವುದಕ್ಕಿಂತ, ಅವರನ್ನು ಓದಿ ತಮ್ಮದೇ ಆದ ಅಭಿಪ್ರಾಯ ರೂಪಿಸಿಕೊಳ್ಳಲು ಪ್ರಯತ್ನಿಸಿರುವುದು ನನಗೆ ಹೆಚ್ಚು ಮುಖ್ಯವೆನಿಸಿತು. ಈ ಬರಹಗಳಲ್ಲಿ ಎಲ್ಲವೂ ಪರಿಪೂರ್ಣ ವಾಗಿರಬೇಕೆಂದಿಲ್ಲ. ಆದರೆ, ಪ್ರಶ್ನಿಸುವ ಮತ್ತು ತಿಳಿದುಕೊಳ್ಳುವ ಆಸಕ್ತಿ ಇರುವುದು ಮುಖ್ಯ. ಗಾಂಧಿಜಿಯವರ ಬದುಕು ಮತ್ತು ವಿಚಾರಗಳ ಬಗ್ಗೆ ಹೊಸ ತಲೆಮಾರಿನಲ್ಲಿ ಆಸಕ್ತಿ ಮೂಡಿದರೆ, ಈ ಪ್ರಯತ್ನದ ಉದ್ದೇಶ ಈಡೇರಿದಂತಾಗುತ್ತದೆ.

ಗಾಂಧಿಜಿಯವರನ್ನು ಒಂದು ಪ್ರತಿಮೆಯಾಗಿ ನೋಡುವುದಕ್ಕಿಂತ, ಅವರ ವಿಚಾರಗಳೊಂದಿಗೆ ಸಂವಾದ ನಡೆಸುವುದು ಇಂದಿನ ಅಗತ್ಯ. ಈ ಉದ್ದೇಶದಿಂದಲೇ ಕರ್ನಾಟಕ ಗಾಂಧಿ ಸ್ಮಾರಕ ನಿಧಿ , ‘ಆಂದೋಲನ’ ದಿನಪತ್ರಿಕೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಗಾಂಧಿ ಅಧ್ಯಯನ ಕೇಂದ್ರದ ಸಂಯುಕ್ತಾಶ್ರಯದಲ್ಲಿ ನವೆಂಬರ್ ೨೮ ಮತ್ತು ೨೯ರಂದು ಮೈಸೂರಿನ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ‘ವರ್ತಮಾನದ ಕಣ್ಣಲ್ಲಿ ಸತ್ಯಾನ್ವೇಷಕ ಗಾಂಧಿ’ ಎಂಬ ಎರಡು ದಿನಗಳ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ.

ನವೆಂಬರ್ ೨೮ರಂದು ಬೆಳಿಗ್ಗೆ ೧೦ ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದ್ದು, ವಿಚಾರಗೋಷ್ಠಿ, ಸಂವಾದ ಮತ್ತು ಗಾಂಧಿಜಿ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಲಿದೆ. ನವೆಂಬರ್ ೨೯ರಂದು ಗಾಂಧಿಜಿ ಕುರಿತ ಸಂವಾದ ಹಾಗೂ ಸಮಾರೋಪ ಕಾರ್ಯಕ್ರಮಗಳು ನಡೆಯಲಿವೆ. ವಿದ್ಯಾರ್ಥಿಗಳು, ಅಧ್ಯಾಪಕರು, ಸಂಶೋಧಕರು, ಪತ್ರಕರ್ತರು, ಓದುಗರು ಸೇರಿದಂತೆ ಆಸಕ್ತರೆಲ್ಲರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ಆಹ್ವಾನಿಸುತ್ತೇವೆ. ಗಾಂಧಿಜಿಯವರನ್ನು ಮತ್ತೊಮ್ಮೆ ಓದೋಣ, ಅವರ ವಿಚಾರಗಳೊಂದಿಗೆ ಸಂವಾದ ನಡೆಸೋಣ.

” ಗಾಂಧೀಜಿಯವರ ಆತ್ಮಕಥೆ ‘ನನ್ನ ಸತ್ಯಾನ್ವೇಷಣೆ’ ಪ್ರಕಟವಾಗಿ ನೂರು ವರ್ಷ ಪೂರ್ಣಗೊಂಡ ಸಂದರ್ಭ ಇದಕ್ಕೆ ಒಂದು ಒಳ್ಳೆಯ ಅವಕಾಶವಾಯಿತು. ಈ ಸಂದರ್ಭವನ್ನು ಬಳಸಿಕೊಂಡು ಶಾಲಾ ಮಕ್ಕಳಿಗೆ ಗಾಂಧೀಜಿಯನ್ನು ಪರಿಚಯಿಸುವ ಮತ್ತು ಅವರ ಬಗ್ಗೆ ಓದಲು ಪ್ರೇರೇಪಿ ಸುವ ಪ್ರಯತ್ನ ಮಾಡಬೇಕೆಂದು ನಿರ್ಧರಿಸಿದೆವು. ಅದರ ಭಾಗವಾಗಿ ‘ಆಂದೋಲನ’ ವತಿಯಿಂದ ೫೭ ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಯಿತು.”

 

 

 

Tags:
error: Content is protected !!