Mysore
30
clear sky

Social Media

ಶುಕ್ರವಾರ, 07 ಫೆಬ್ರವರಿ 2025
Light
Dark

ಪ್ರಾಚೀನ ಕಾಲದ ತಾಳೆಗರಿಗಳಿಗೆ ಗ್ರಂಥ ರೂಪ

ಕೆ. ಬಿ. ರಮೇಶ ನಾಯಕ
ಮೈಸೂರು: ಪುರಾತನ ಕಾಲದ ತಾಳೆಗರಿಗಳಲ್ಲಿ ಋಷಿಗಳು ಹಾಗೂ ವಿದ್ವಾಂಸರ ಜ್ಞಾನ ಭಂಡಾರವೇ ಅಡಕವಾಗಿದೆ. ಇಂತಹ ತಾಳೆಗರಿಯಲ್ಲಿರುವ ಅಪರೂಪದ ವಿಚಾರಗಳನ್ನು ಗ್ರಂಥ ರೂಪದಲ್ಲಿ ಹೊರತರಲು ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚ್ಯ ವಿದ್ಯಾ ಸಂಶೋಧನಾಲಯ (ಒಆರ್‌ಐ) ಉದ್ದೇಶಿಸಿದ್ದು, ಈ ಹೊತ್ತಗೆಗಳು ಶೀಘ್ರವೇ ಸಂಶೋಧಕರು, ವಿದ್ಯಾರ್ಥಿಗಳ ಕೈ ಸೇರುವ ನಿರೀಕ್ಷೆ ಇದೆ.

೧೩೩ ವರ್ಷಗಳ ಇತಿಹಾಸ ಇರುವ ಪ್ರಾಚ್ಯ ವಿದ್ಯಾ ಸಂಶೋಧನಾಲಯದಲ್ಲಿ ಕೌಟಿಲ್ಯನ ಅರ್ಥಶಾಸದಿಂದ ಹಿಡಿದು, ಗಜಶಾಸ, ರಸ ಕೌಮುದಿ ಸೇರಿದಂತೆ ಹಲವು ಹಸ್ತಪ್ರತಿ ಹಾಗೂ ತಾಳೆಗರಿಗಳ ಸಂಗ್ರಹವಿದೆ. ಸಂಸ್ಕೃತ, ಕನ್ನಡ, ದೇವನಾಗರಿ, ನಂದಿನಾಗರಿ, ಬ್ರಾಹ್ಮಿ, ತಿಗಳಾರಿ, ತಮಿಳು, ತೆಲುಗು ಭಾಷೆಯ ಹಸ್ತಪ್ರತಿಗಳನ್ನು ಇಲ್ಲಿ ಕಾಣಬಹುದು.

ಕಳೆದ ಕೆಲವು ವರ್ಷಗಳ ಹಿಂದೆ ಒಆರ್‌ಐನಲ್ಲಿರುವ ಶತಮಾನಗಳ ಲಿಪಿಗೆ ಡಿಜಿಟಲ್ ಸ್ಪರ್ಶ ನೀಡುವ ಕಾರ್ಯಕ್ಕೆ ದಿ ಮಿಥಿಕ್ ಸೊಸೈಟಿ ಚಾಲನೆ ನೀಡಿತ್ತು. ಇದೀಗ ಪ್ರಾಚ್ಯ ವಿದ್ಯಾ ಸಂಗ್ರಹಾಲಯವು ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಾಳೆಗರಿಗಳಿಗೆ ಗ್ರಂಥ ರೂಪ ನೀಡಲು ಮುಂದಾಗಿದೆ. ಈಗಾಗಲೇ ಈ ಕಾರ್ಯ ಶುರು ವಾಗಿದ್ದು, ಶೀಘ್ರದಲ್ಲೇ ಎಂಟು ಹೊಸ ಪುಸ್ತಕಗಳು ಹೊರ ಬರುತ್ತಿವೆ. ಜತೆಗೆ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ‘ಗ್ರಹನಿಽ’ ಸೇರಿದಂತೆ ಒಟ್ಟು ೧೮ ಪುಸ್ತಕಗಳು ಪುನರ್ ಮುದ್ರಣ ಕಾಣುತ್ತಿವೆ. ಶಂಕರಾಚಾರ್ಯರ ‘ಸೌಂದರ್ಯ ಲಹರಿ’, ಕೌಟಿಲ್ಯನ ‘ಅರ್ಥಶಾಸ’ ಈಗಾಗಲೇ ಪುಸ್ತಕ ರೂಪ ಪಡೆದಿವೆ.

ಹೇಗೆ ಪುಸ್ತಕ? : ತಾಳೆಗರಿಗಳಲ್ಲಿ ಅನೇಕ ವಿಚಾರಗಳು ದಾಖಲಾಗಿದ್ದು, ಸಂಸ್ಕೃತ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳ ಲಿಪಿಯಲ್ಲಿ ಇರುತ್ತವೆ. ಇದನ್ನು ಮೊದ ಲಿಗೆ ಲಿಪ್ಯಂತರ ಮಾಡಬೇಕು. ಬಳಿಕ ಸಂಶೋಽಸಿ, ದೋಷಗಳನ್ನು ತಿದ್ದಿದ ನಂತರ ಪುಸ್ತಕ ರೂಪದಲ್ಲಿ ತರ ಬೇಕಾಗುತ್ತದೆ. ಪ್ರಸ್ತುತ ಮೊದಲ ಹಂತದಲ್ಲಿ ಹೊರ ಬರುತ್ತಿರುವ ಎಂಟು ಪುಸ್ತಕಗಳು ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿವೆ. ಮೈಸೂರು ವಿವಿ ಅನುದಾನ ನೀಡಿ ಸಹಕರಿಸಿದೆ. ಶೃಂಗೇರಿ ಮಠವೂ ಕೈ ಜೋಡಿಸಿದೆ.

ಇದರ ಜೊತೆಗೆ ಕೇಂದ್ರೀಯ ಸಂಸ್ಕೃತ ವಿವಿ ಸಹಯೋಗದಲ್ಲಿ ‘ಅಷ್ಟಾದಶಿ’ ಯೋಜನೆಯಡಿ ಎರಡು ಬೃಹತ್ ಗ್ರಂಥಗಳ ರಚನಾ ಕಾರ್ಯವೂ ಭರದಿಂದ ಸಾಗುತ್ತಿದೆ. ಇಂಡಿಯನ್ ನಾಲೆಡ್ಜ್ ಸಿಸ್ಟಂ (ಐಕೆಎಸ್) ಅಡಿಯಲ್ಲಿ ೧೩ ಲಕ್ಷ ರೂ. ಅನುದಾನ ಮಂಜೂರಾಗಿದ್ದು, ‘೪ ಗ್ರಂಥಗಳು’ ಪ್ರಕಟಣೆ ಆಗಬೇಕಿದೆ.

ಮಿಥಿಕ್ ಸೊಸೈಟಿಯಿಂದ ೪೦ ಲಕ್ಷ ರೂ. ಧನಸಹಾಯ: ಮಿಥಿಕ್ ಸೊಸೈಟಿ ವತಿಯಿಂದ ‘ಶಿಥಪ್ಪನಿಧಿ’ ಪುಸ್ತಕವು ಐದು ಸಂಪುಟಗಳಲ್ಲಿ ಹೊರ ಬರಲಿದ್ದು, ಇದಕ್ಕೆ ೪೦ ಲಕ್ಷ ರೂ. ಸಹಾಯಧನ ನೀಡುತ್ತಿದೆ. ಪ್ರಸ್ತುತ ಮೊದಲ ಹಂತದಲ್ಲಿ ಮುದ್ರಣವಾಗಿರುವ ಎಂಟು ಪುಸ್ತಕಗಳನ್ನು -. ೧೨ರಂದು ನಡೆಯಲಿರುವ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಡಾ. ಡಿ. ಪಿ. ಮಧುಸೂದನಾಚಾರ್ಯ ತಿಳಿಸಿದ್ದಾರೆ.

ತಾಳೆಗರಿಗಳಿಗೆ ಗ್ರಂಥ ರೂಪ ನೀಡಲಾಗುತ್ತಿದ್ದು, ಶೀಘ್ರವೇ ಬಿಡುಗಡೆಯಾಗಲಿವೆ. ಪ್ರಾಚ್ಯ ವಿದ್ಯಾ ಸಂಶೋಧನಾಲಯ ವನ್ನು ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ವಿವಿಧ ಕಡೆಯಿಂದ ಅನುದಾನ ಸಿಗುತ್ತಿದೆ. ಶೃಂಗೇರಿ ಮಠದಿಂದಲೂ ಸಹಾಯಧನ ಲಭಿಸುತ್ತಿದೆ. – ಪ್ರೊ. ಎನ್. ಕೆ. ಲೋಕನಾಥ್, ಕುಲಪತಿ, ಮೈವಿವಿ

ಯಾವೆಲ್ಲಾ ಪುಸ್ತಕಗಳು
೧. ಪ್ರಾಚ್ಯವಿದ್ಯಾ ತರಂಗಿಣಿ
೨. ಮಾಧವಸ್ತವರಾಜ ಟೀಕಾ
೩. ವಿಷ್ಣುಸಹಸ್ರನಾಮನಿರುಕ್ತಿ ವ್ಯಾಖ್ಯೆ
೪. ತತ್ತ್ವಚಿಂತಾಮಣಿ ಟೀಕಾ
೫. ಸಂಖ್ಯಾರತ್ನ ಕೋಶಃ
೬. ವಿಷ್ಣುಸ್ತುತಿ ಟೀಕಾ
೭. ಶಬ್ಧ ಕೌಸ್ತುಭ

 

 

Tags: