Mysore
22
overcast clouds

Social Media

ಭಾನುವಾರ, 24 ಮೇ 2026
Light
Dark

ರಸ್ತೆಯಲ್ಲಿ ನಿಂತಿದ್ದ ಕೊಳಚೆ ನೀರಿಗೆ ಮುಕ್ತಿ

ಎಚ್.ಡಿ.ಕೋಟೆ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೊಳಚೆ ನೀರು ಕೆರೆಯಂತೆ ನಿಂತಿದ್ದುದನ್ನು ಪುರಸಭೆಯ ಅಧಿ ಕಾರಿಗಳು ಮತ್ತು ಜನಪ್ರತಿನಿಧಿಗಳು ಕೊನೆಗೂ ತೆರವು ಗೊಳಿಸಿದ್ದಾರೆ.

ಕೋಟೆ ಮತ್ತು ಹ್ಯಾಂಡ್‌ಪೋಸ್ಟಿನ ಮುಖ್ಯರಸ್ತೆಯ ಪೆಟ್ರೋಲ್ ಬಂಕ್ ಸಮೀಪದ ಕೃಷ್ಣಪುರ ಮತ್ತು ಪೌರಕಾರ್ಮಿಕರ ಕಾಲೋನಿ, ತಾರಕ ನಾಲೆಯ ನೀರು ಮತ್ತು ಕೊಳಚೆ ನೀರು ಹರಿದುಬಂದು ಚರಂಡಿ ಸ್ವಚ್ಛಗೊಳ್ಳದೆ ಮುಖ್ಯರಸ್ತೆಯಲ್ಲೇ ಕೆರೆಯಂತೆ ನಿಂತು ಪ್ರಯಾಣಿಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗಿತ್ತು.

ಈ ಕುರಿತು ‘ಆಂದೋಲನ’ ದಿನಪತ್ರಿಕೆಯಲ್ಲಿ ‘ಕೆರೆ ಯಂತಾದ ಮುಖ್ಯ ರಸ್ತೆಗಳು; ಸಾರ್ವಜನಿಕರ ನರಕಯಾತನೆ’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತ ಪುರಸಭೆಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಚರಂಡಿಯನ್ನು ಸ್ವಚ್ಛ ಮಾಡಿ, ಕೆರೆಯಂತಾಗಿದ್ದ ಕೊಳಚೆ ನೀರನ್ನು ತೆರವುಗೊಳಿಸಿದ್ದಾರೆ.

Tags:
error: Content is protected !!