Mysore
29
scattered clouds

Social Media

ಶುಕ್ರವಾರ, 15 ಮೇ 2026
Light
Dark

ಅರಣ್ಯ ಸಿಬ್ಬಂದಿಗೆ ಇಲಾಖೆಯಿಂದ ಬೇಕಿದೆ ಪ್ರೋತ್ಸಾಹ

ಮಹೇಂದ್ರ ಹಸಗೂಲಿ
ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ವಲಯದ ಕೆಲವೆಡೆ ಹುಲಿ ದಾಳಿಯಿಂದ ಅರಣ್ಯ ಇಲಾಖೆಯ ಕೆಲವು ಸಿಬ್ಬಂದಿ ಗಾಯಗೊಂಡಿದ್ದರು. ಹುಲಿ ದಾಳಿಯಿಂದ ಪಾರಾಗಿ ಬಂದ ಉದಾಹರಣೆಗಳೂ ಸಾಕಷ್ಟಿವೆ. ಆದರೆ ಅವರ ಹೋರಾಟ ಮತ್ತು ಕಾರ್ಯವೈಖರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂಬ ಬೇಸರ ಪರಿಸರ ಪ್ರೇಮಿಗಳಿಂದ ವ್ಯಕ್ತವಾಗಿದೆ.

ಹುಲಿ ಹಾಗೂ ಆನೆ ಸೆರೆ ಕಾರ್ಯಾಚರಣೆಯಲ್ಲಿ ಮೇಲಧಿಕಾರಿಗಳು ಮಾರ್ಗದರ್ಶನ ನೀಡಬಹುದು. ಆದರೆ ಹುಲಿ ಸೆರೆ ಹಿಡಿಯುವಾಗ ಹೋರಾಡುವವರು ಕೆಳ ಹಂತದ ನೌಕರರು.

ಅನೇಕ ಬಾರಿ ಹುಲಿ ದಾಳಿ ನಡೆಸಿ ಅವರನ್ನು ಗಾಯಗೊಳಿಸಿದೆ. ಅವರಿಗೆ ಅರಣ್ಯ ಇಲಾಖೆ ಆಸ್ಪತ್ರೆಯ ಖರ್ಚು ಭರಿಸಿದ್ದನ್ನು ಬಿಟ್ಟರೆ ಅವರಿಗೆ ನಗದು ಬಹುಮಾನ ಗಳಂತಹ ಉತ್ತೇಜನ ನೀಡುವ ಕೆಲಸವನ್ನು ಮೇಲಧಿಕಾರಿಗಳು ಮಾಡುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.

ಅರಣ್ಯ ಇಲಾಖೆಯಲ್ಲಿ ಬೀಟ್ ಫಾರೆಸ್ಟ್ ಗಾರ್ಡ್‌ಗಳಾದ ರಾಮು, ಬಾವೇಗೌಡ ಮತ್ತಿತರರು ಹುಲಿ ಸೆರೆ ಕಾರ್ಯಾ ಚರಣೆಯಲ್ಲಿ ಭಾಗಿಯಾಗಿ ಗಾಯಗೊಂಡಿದ್ದರು. ಆದರೆ ಅವರಿಗೆ ಸನ್ಮಾನ, ಇರಲಿ ೩ ತಿಂಗಳಿಂದ ಇಲಾಖೆಯಿಂದ ಸಂಬಳವನ್ನೂ ನೀಡಿಲ್ಲ ಎನ್ನಲಾಗಿದೆ. ಇದರಿಂದ ಜೀವನ ನಿರ್ವಹಣೆ ಹೇಗೆ ಎಂಬುದು ಕೆಲ ಗಾರ್ಡ್‌ಗಳ ನೋವಿನ ನುಡಿಯಾಗಿದೆ.

ಹುಲಿ, ಚಿರತೆ, ಆನೆ ಸೆರೆ ಕಾರ್ಯಾಚರಣೆಯಲ್ಲಿ ಪ್ರಾಣ ಪಣಕ್ಕಿಟ್ಟು ಭಾಗಿಯಾದ ನೌಕರರಿಗೆ ಉತ್ತೇಜನ ಅಗತ್ಯ ಹುಲಿ ಸೆರೆ ಸಂದರ್ಭದಲ್ಲಿ ಹೆಚ್ಚಿನ ಜನ ಸೇರಿಸಿ, ೧೪೪ನೇ ಸೆಕ್ಷನ್ ಹಾಕಿದರೂ ಕೂಗಾಡಿ ಹುಲಿ ಬಳಿ ಓಡಿ ಬಂದಾಗ ಹುಲಿಯಿಂದ ನಮ್ಮ ಗಾರ್ಡ್‌ಗೆ ಗಾಯವಾಗಿದೆ. ಅವರಿಗೆ ಸಂಬಳವಾಗಿಲ್ಲ ಎಂಬ ವಿಚಾರದ ಕುರಿತು ಪರಿಶೀಲನೆ ಮಾಡುತ್ತೇನೆ. ನಮ್ಮ ಇಲಾಖೆ ಸಿಬ್ಬಂದಿಗಳ ಸಮಸ್ಯೆಗೆ ನಾವು ಸ್ಪಂದಿಸುತ್ತೇವೆ. ಸಿಬ್ಬಂದಿಗಳ ಜೊತೆ ಸದಾ ಇರುತ್ತೇವೆ.
ಪ್ರಭಾಕರನ್, ಸಿಎಫ್, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ

ಕಳ್ಳಬೇಟೆಗಾರರ ಮೇಲೆ ನಿಗಾ ಇಡುವುದು, ಕಾಡಿಗೆ ಬೆಂಕಿ ಹಾಕುವ ಕಿಡಿಗೇಡಿಗಳ ಬಗ್ಗೆ ನಿಗಾ ಇಡುವುದು, ಆನೆ, ಹುಲಿ ಸೆರೆಯ ಸಂದರ್ಭದಲ್ಲಿ ಜೀವ ಪಣಕ್ಕಿಟ್ಟು ಹೋರಾಡುವ ವಾಚರ್, ಗಾರ್ಡ್‌ಗಳಿಗೆ ಅರಣ್ಯ ಇಲಾಖೆ ಪ್ರೊತ್ಸಾಹ ನೀಡಬೇಕು. ಸರಿಯಾದ ಸಮಯಕ್ಕೆ ಸಂಬಳ ನೀಡಬೇಕು. ನಗದು ಸನ್ಮಾನ ಮುಂತಾದ ಪ್ರೋತ್ಸಾಹ ನೀಡಬೇಕು. ಆಗ ಅವರಿಗೆ ಕೆಲಸ ಮಾಡಲು ಚೈತನ್ಯ ದೊರೆಯುತ್ತದೆ. ಅನಿಲ್, ಹಂಗಳ ಗ್ರಾಮ

Tags:
error: Content is protected !!