ಮೈಸೂರಿನ ಹೃದಯ ಭಾಗದಲ್ಲಿರುವ ಅಶೋಕ ವೃತ್ತ (ಬಲ್ಲಾಳ್ ಸರ್ಕಲ್) ಮುಖಾಂತರವೇ ಮೈಸೂರಿನ ಬಹುತೇಕ ಸಾರ್ವಜನಿಕರು, ನೂರಾರು ವಾಹನಗಳವರು ಸಂಚರಿಸುತ್ತಾರೆ. ಈ ವೃತ್ತದ ಮಧ್ಯ ಭಾಗದಲ್ಲೇ ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ನಗರ ಪಾಲಿಕೆಯ ಆಯುಕ್ತರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ರಸ್ತೆಯಲ್ಲೇ ಓಡಾಡಿದರೂ, ಈ ಗುಂಡಿಗಳು ಇವರ ಕಣ್ಣಿಗೆ ಬಿದ್ದಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.
ಪಾಲಿಕೆ ಅಧಿಕಾರಿಗಳು ಮೈಸೂರಿನ ಎಲ್ಲ ಪ್ರಮುಖ ರಸ್ತೆಗಳಲ್ಲೂ ಇರುವ ಗುಂಡಿಗಳನ್ನು ಮುಚ್ಚುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಾಗಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





