ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ!
ಜಪಾನನು ಹಿಂದಿಕ್ಕಿ ಜಗದಲಿ
ನಾಲ್ಕನೆಯ ಅತಿದೊಡ್ಡ
ಆರ್ಥಿಕತೆಯಾಗಲಿದೆಯಂತೆ ಭಾರತ!
ಸಂತಸದ ಸುದ್ದಿ ಎನ್ನೋಣವೇ!
ಕೆಲ ಸಿರಿವಂತರ ಖಜಾನೆಗೆ
ಹಣದ ಹೊಳೆ ಹರಿದರೆ
ಶ್ರಮಜೀವಿಗಳ ಬಾಳು ಬೆಳಗುವುದೇ?
ಆಗುವುದೆ ದೇಶ ಶ್ರೀಮಂತ!
ರೂಪುಗೊಳ್ಳಬೇಕು,
ಶ್ರಮಕೇಂದ್ರಿತ
ಬಡವಕೇಂದ್ರಿತ ಆರ್ಥಿಕ ನೀತಿ!
ಆಗ ಹಸನಾಗಬಹುದು ಬಡವನ ಬಾಳು
ಬಡವನುದ್ಧಾರವೇ ದೇಶೋದ್ಧಾರ!
ಅದುವೇ ಜನತಂತ್ರದ ಮೂಲಮಂತ್ರ
ಅಳಿಯಲಿ ಅಸಮಾನತೆ ಚಿಗುರಲಿ ಸಮಾನತೆ!
-ಸಿ.ಪಿ.ಸಿದ್ಧಾಶ್ರಮ, ವಿಜಯನಗರ, ಮೈಸೂರು





