ಮಂಜು ಕೋಟೆ
ಕೋಟೆ: ೧೫ ವರ್ಷಗಳ ನಂತರ ಸುಣ್ಣಬಣ್ಣ ಕಂಡ ಕಟ್ಟಡ; -ಲ ನೀಡಿದ ಸಮುದಾಯದ ಮುಖಂಡರ ಎಚ್ಚರಿಕೆ
ಎಚ್.ಡಿ.ಕೋಟೆ: ಪಟ್ಟಣದಲ್ಲಿರುವ ಬೃಹತ್ ಹೈಟೆಕ್ ಅಂಬೇಡ್ಕರ್ ಸಮುದಾಯ ಭವನ ಸಮುದಾ ಯದವರು ನೀಡಿದ ಎಚ್ಚರಿಕೆ ಪರಿಣಾಮ ೧೫ ವರ್ಷಗಳ ನಂತರ ಸುಣ್ಣ ಬಣ್ಣಗಳಿಂದ ಕಂಗೊಳಿ ಸುತ್ತಿದೆ. ಕೋಟೆ ಮೀಸಲು ಕ್ಷೇತ್ರವಾಗಿದ್ದರಿಂದ ಅಂದಿನ ಶಾಸಕರಾಗಿದ್ದ ಎನ್.ನಾಗರಾಜು ಅವರು ಪಟ್ಟಣದಲ್ಲಿ ಡಾ.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣವಾಗಬೇಕೆಂದು ೧ ಕೋಟಿ ರೂ. ವೆಚ್ಚದಲ್ಲಿ ೧೯೯೭ರಲ್ಲಿ ಅಂದಿನ ಮುಖ್ಯಮಂತ್ರಿ ಜೆ. ಎಚ್. ಪಟೇಲ್, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂಲಕ ಭವನ ನಿರ್ಮಾಣಕ್ಕೆ ಚಾಲನೆ ಕೊಡಿಸಿದ್ದರು.
ಅನೇಕ ಕಾರಣಗಳಿಂದ ಭವನ ನಿರ್ಮಾಣ ಕಾಮಗಾರಿ ಕುಂಟುತ್ತಾ ಸಾಗಿ, ಅನೇಕ ಹೋರಾಟಗಳು ನಡೆದು ೧೪ ವರ್ಷಗಳ ನಂತರ ೨೦೧೧ರಲ್ಲಿ ಶಾಸಕರಾಗಿದ್ದ ಬೀಚನಹಳ್ಳಿ ಚಿಕ್ಕಣ್ಣನವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ತಾಲ್ಲೂಕು ಮಟ್ಟದ ಪ್ರಪ್ರಥಮ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆಗೊಂಡಿತ್ತು.
ನಂತರ ಭವನ ಮತ್ತು ಅಂಬೇಡ್ಕರ್ ಪ್ರತಿಮೆ, ಕಲ್ಯಾಣ ಮಂಟಪ ಅಭಿವೃದ್ಧಿಗಾಗಿ ಸಂಸದರಾಗಿದ್ದ ಧ್ರುವನಾರಾಯಣ, ಶಾಸಕರಾದ ಚಿಕ್ಕಮಾದು, ಅನಿಲ್ ಚಿಕ್ಕಮಾದು ಅವರ ಅವಧಿಯಲ್ಲಿ ಕೋಟ್ಯಂ ತರ ರೂ. ವಿಶೇಷ ಅನುದಾನ ನೀಡಲಾಗಿದೆ. ಕಳೆದ ೧೫ ವರ್ಷಗಳಿಂದ ಜಾತ್ಯತೀತವಾಗಿ ಮತ್ತು ಪಕ್ಷಾತೀತವಾಗಿ ರಾಜಕೀಯ ಮತ್ತು ಖಾಸಗಿ ಕಾರ್ಯಕ್ರಮಗಳು ಪಟ್ಟಣದಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆಯುತ್ತಿವೆ. ಭವನದ ನಿರ್ವಹಣೆಯನ್ನು ಸಮಾಜ ಕಲ್ಯಾಣ ಇಲಾಖೆ ಮತ್ತು ಸಮಿತಿಯವರು ನಿರ್ವಹಿಸುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಸುಣ್ಣ ಬಣ್ಣ ಕಾಣದೆ ಮತ್ತು ಕಿಟಕಿ ಬಾಗಿಲುಗಳು ದುಸ್ಥಿತಿಗೆ ಒಳಗಾಗಿದ್ದು, ಅಂಬೇಡ್ಕರ್ ಭವನದ ಸ್ವರೂಪ ಕಳೆಗುಂದಿತ್ತು.
ಈ ಬಗ್ಗೆ ಆದಿ ಕರ್ನಾಟಕ ಮಹಾಸಭಾದ ನೂತನ ಆಡಳಿತ ಮಂಡಳಿಯವರು ಸಮಾಜ ಕಲ್ಯಾಣ ಇಲಾಖೆಗೆ ಭವನಕ್ಕೆ ಸುಣ್ಣ ಬಣ್ಣ ಬಳಿಸಿ, ದುರಸ್ತಿ ಮಾಡಿಸಲು ಮನವಿ ಸಲ್ಲಿಸಿದ್ದರು. ಆದರೆ, ಅನು ದಾನದ ಕೊರತೆಯ ಕಾರಣ ಹೇಳಿ ತಾಲ್ಲೂಕು ಆಡಳಿತ ಗಮನ ಹರಿಸಲಿಲ್ಲ.
ತಾಲ್ಲೂಕು ಆಡಳಿತ ನಡೆಸಿದ ಅಂಬೇಡ್ಕರ್ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷರಾದ ಹೈರಿಗೆ ಶಿವರಾಜ್ ಅವರು, ಪಟ್ಟಣದ ಅಂಬೇಡ್ಕರ್ ಭವನ ಸುಣ್ಣ ಬಣ್ಣವಿಲ್ಲದೆ ದುಸ್ಥಿತಿಗೆ ಬರುತ್ತಿದೆ. ಅಂಬೇಡ್ಕರ್ ಜಯಂತಿ ಒಳಗೆ ಎಲ್ಲ ಸರಿಯಾಗದಿದ್ದರೆ ನಮ್ಮ ಸಮುದಾಯದವರು ಜಯಂತಿಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಇಲಾಖೆಯವರು ನಿರ್ಮಿತಿ ಕೇಂದ್ರದ ಅಧಿಕಾರಿ ಸುಪ್ರೀತ್ ಮೂಲಕ ಸುಮಾರು ೫-೧೦ ಲಕ್ಷ ರೂ. ವೆಚ್ಚದಲ್ಲಿ ಭವನದ ಕಿಟಕಿಗಳು, ವಿದ್ಯುತ್ ದೀಪಗಳ ದುರಸ್ತಿ ಕಾರ್ಯ, ಸುಣ್ಣ ಬಣ್ಣ ವ್ಯವಸ್ಥೆ, ವೇದಿಕೆಯ ಅಭಿ ವೃದ್ಧಿ ಇನ್ನಿತರ ಕೆಲಸ ಕಾರ್ಯಗಳನ್ನು ನೆರವೇರಿಸಿ ಭವನಕ್ಕೆ ಉತ್ತಮ ಸ್ವರೂಪ ನೀಡಿದ್ದಾರೆ. ತಾಲ್ಲೂಕಿನಲ್ಲಿ ಮಹನೀಯರ ಹೆಸರುಗಳಲ್ಲಿ ನಿರ್ಮಾಣಗೊಳ್ಳುತ್ತಿರುವ ಪ್ರತಿಯೊಂದು ಭವನವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಅಪೂರ್ಣಗೊಂಡಿರುವ ಭವನಗಳನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರೆ ಮಹನೀಯರ ಹೆಸರಿಗೂ ಗೌರವ ದೊರೆತಂತಾಗಲಿದೆ ಎಂಬುದು ತಾಲ್ಲೂಕಿನ ಜನತೆಯ ಅನಿಸಿಕೆಯಾಗಿದೆ.
” ಪಟ್ಟಣದ ಡಾ.ಅಂಬೇಡ್ಕರ್ ಸಮುದಾಯ ಭವನದಲ್ಲಿ ಸುಣ್ಣ ಬಣ್ಣ ಮತ್ತು ಇತರ ದುರಸ್ತಿ ಕೆಲಸ ಕಾರ್ಯಗಳು ನಡೆದು ಈಗ ಉತ್ತಮ ಸ್ವರೂಪ ಬಂದಿದೆ. ಮಹನೀಯರ ಹೆಸರಿನ ಈ ಭವನವನ್ನು ಅಭಿವೃದ್ಧಿಪಡಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಕ್ರಮ ಕೈಗೊಂಡಿರಲಿಲ್ಲ. ಜಯಂತಿಯ ಪೂರ್ವಭಾವಿ ಸಭೆಯಲ್ಲಿ ನಾವು ತೆಗೆದುಕೊಂಡ ನಿರ್ಧಾರದಿಂದ ಭವನ ಅಭಿವೃದ್ಧಿಯತ್ತ ಸಾಗಿದೆ. ಮುಂದಿನ ತಿಂಗಳು ಸಮಾಜದ ವತಿಯಿಂದ ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತದೆ. ಅಂಬೇಡ್ಕರ್ ಅವರ ಮೊಮ್ಮಗ ಯಶ್ವಂತ್ ಅಂಬೇಡ್ಕರ್ ಹಾಗೂ ಜನಪ್ರತಿನಿಽಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.”
-ಹೈರಿಗೆ ಶಿವರಾಜ್, ಅಧ್ಯಕ್ಷರು, ಆದಿ ಕರ್ನಾಟಕ ಮಹಾಸಭಾ





