Mysore
22
overcast clouds

Social Media

ಮಂಗಳವಾರ, 03 ಡಿಸೆಂಬರ್ 2024
Light
Dark

ಚುಂಚನಕಟ್ಟೆಯಲ್ಲಿ ಜಲಪಾತ್ಸೋವಕ್ಕೆ ಸಕಲ ಸಿದ್ಧತೆ

ನ.30ರಂದದು ನಡೆಯಲಿರುವ ಕಾರ್ಯಕ್ರಮ; ಆಕರ್ಷಿಸಲಿದೆ ವಿದ್ಯುತ್‌ ದೀಪಾಲಂಕಾರ

ಭೇರ್ಯ ಮಹೇಶ್
ಕೆ. ಆರ್. ನಗರ: ಕೆ. ಆರ್. ನಗರ ವಿಧಾನಸಭಾ ಕ್ಷೇತ್ರದ ಪ್ರವಾಸಿ ತಾಣವಾದ ಚುಂಚನಕಟ್ಟೆಯ ಕಾವೇರಿ ನದಿಯ ಜಲಪಾತೋತ್ಸವಕ್ಕೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ.

ಕಳೆದ ವರ್ಷ ಬರದಿಂದ ತತ್ತರಿಸಿದ್ದ ಭತ್ತದನಾಡು ಕೆ. ಆರ್. ನಗರ ಮತ್ತು ಸಾಲಿಗ್ರಾಮ ಅವಳಿ ತಾಲ್ಲೂಕುಗಳಲ್ಲಿ ಜೀವನದಿ ಕಾವೇರಿ ನೀರಿಲ್ಲದೆ ಸೊರಗಿತ್ತು. ಹಾಗಾಗಿ ಚುಂಚನಕಟ್ಟೆ ಯಲ್ಲಿ ಹರಿಯುವ ಕಾವೇರಿ ನದಿಯ ಧನುಷ್ಕೋಟಿ ಜಲಪಾತ ಮೈದುಂಬಿ ಧುಮ್ಮಿಕ್ಕಲಿಲ್ಲ. ಬರದಿಂದ ರೈತರು ತತ್ತರಿಸಿದ್ದರು. ಹೀಗಾಗಿ ಕಾವೇರಿ ಜಲಪಾತೋತ್ಸವವನ್ನು ಮೊಟಕು ಗೊಳಿಸಲಾಗಿತ್ತು.

ಈ ಬಾರಿ ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗಿ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಕೊಡಗಿನಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಕಾವೇರಿ ನದಿ ಮೈದುಂಬಿ ಹರಿಯುತ್ತಿದೆ. ಕೃಷ್ಣರಾಜಸಾಗರ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತ ಕೆ. ಆರ್. ನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಯ ಕಾವೇರಿ ನದಿಯ ಧನುಷ್ಕೋಟಿಯ ಜಲಪಾ ತೋತ್ಸವಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ.

ಈಗಾಗಲೇ ಶಾಸಕ ಡಿ. ರವಿಶಂಕರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಕೂಡ ನಡೆದಿದೆ. ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಚರ್ಚಿಸಿದ್ದು, ನ. ೩೦ರಂದು ಜಲ ಪಾತೋತ್ಸವಕ್ಕೆ ಚಾಲನೆ ದೊರೆಯಲಿದೆ.

ಎರಡು ದಿನಗಳ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಧನುಷ್ಕೋಟಿ ಜಲಪಾತಕ್ಕೆ ವಿವಿಧ ಬಗೆಯ ಲೇಸರ್ ಲೈಟಿಂಗ್ ವ್ಯವಸ್ಥೆ ಹಾಗೂ ಜಲಪಾತದಿಂದ ಧುಮ್ಮಿಕ್ಕುವ ನೀರಿಗೆ ಲೇಸರ್ ಲೈಟ್ ಅಳವಡಿಸಿ ನೋಡುಗರ ಕಣ್ಮನ ಸೆಳೆಯುವಂತೆ ಮಾಡಲಾಗುತ್ತದೆ.

ಅಲ್ಲದೆ, ಶ್ರೀರಾಮ ದೇವಾಲಯ, ಬಸವ ವೃತ್ತ, ಕಾವೇರಿ ನದಿಯ ಸೇತುವೆ ಮತ್ತಿತರ ಕಡೆಗಳಲ್ಲಿ ವಿದ್ಯುತ್ ದೀಪಾಲಂಕಾರವನ್ನು ವಿಭಿನ್ನ ರೀತಿಯಲ್ಲಿ ಮಾಡಲು ಸಿದ್ಧತೆ ನಡೆದಿದೆ. ಈ ಬಾರಿಯ ವಿದ್ಯುತ್ ದೀಪಾಲಂಕಾರ ಆಗಮಿಸುವ ಜನರನ್ನು ಆಕರ್ಷಿಸಲಿದೆ ಎಂದು ಶಾಸಕರು ತಿಳಿಸಿದ್ದಾರೆ.

ಬೃಹತ್ ವೇದಿಕೆ ನಿರ್ಮಾಣ: ಶ್ರೀರಾಮ ದೇವಸ್ಥಾನದ ಹಿಂಭಾಗದಲ್ಲಿ ಬೃಹತ್ ವೇದಿಕೆ ನಿರ್ಮಾಣದ ಜೊತೆಗೆ ಎಲ್. ಇ. ಡಿ. ದೊಡ್ಡ ಪರದೆ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಎರಡು ದಿನಗಳ ಕಾಲ ನಡೆಯುವ ಸಾಂಸ್ಕ ತಿಕ ಕಾರ್ಯಕ್ರಮಗಳಲ್ಲಿ ಅನೇಕ ಖ್ಯಾತ ಗಾಯಕರು ಹಾಗೂ ಚಿತ್ರನಟರು ಆಗಮಿಸಿ ಕಾರ್ಯಕ್ರಮ ನೀಡಲಿದ್ದಾರೆ. ಜೊತೆಗೆ ಹಾಸ್ಯ ರಸ ದೌತಣವನ್ನು ನೀಡಲು ಖ್ಯಾತ ಹಾಸ್ಯ ನಟರು ಆಗಮಿಸುವ ನಿರೀಕ್ಷೆ ಇದೆ.

ವರ್ಷದ ನಂತರ ನಡೆಯಲಿರುವ ಜಲಪಾತೋತ್ಸವ ಶಾಸಕ ಡಿ. ರವಿಶಂಕರ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಹಲವು ಸಚಿವರು, ಶಾಸಕರು ಪಾಲ್ಗೊಳ್ಳಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಜಲಪಾತೋತ್ಸವ ಕಾರ್ಯಕ್ರಮಕ್ಕೆ ಚುಂಚನಕಟ್ಟೆಗೆ ಆಗಮಿಸುವ ನಿರೀಕ್ಷೆಯಿದೆ.

Tags: