Mysore
21
overcast clouds
Light
Dark

ಓದುಗರ ಪತ್ರ: ಲೂಟಿ, ದರೋಡೆ ಮತ್ತು ಕಳ್ಳತನ ಕಲಿಸಲು ಶಾಲೆ!

ಮಧ್ಯ ಪ್ರದೇಶದಲ್ಲಿ ಕಳ್ಳತನ, ದರೋಡೆ ಮತ್ತು ಲೂಟಿಗಳನ್ನು ಹೇಗೆ ಮಾಡುವುದು ಎಂಬುದನ್ನು ಕಲಿಸಲು ಒಂದು ಶಾಲೆ ಇದ್ದು, ಅಲ್ಲಿ ಆರು ತಿಂಗಳ ಕೋರ್ಸ್ ಪಡೆಯಲು 50,000 ರೂ.ಗಳಿಂದ 3 ಲಕ್ಷ ರೂ.ಗಳವರೆಗೆ ಶುಲ್ಕ ಪಾವತಿಸಬೇಕು ಎಂಬ ಸುದ್ದಿ ಕೇಳಿ ನಿಜಕ್ಕೂ ಆಶ್ಚರ್ಯವಾಯಿತು.

ವರ್ಷಗಳ ಹಿಂದೆ ಜಾರ್ಖಂಡ್‌ನ ಗ್ರಾಮವೊಂದರಲ್ಲಿ ಸೈಬರ್ ಕ್ರೈಮ್ ಮಾಡುವುದು ಹೇಗೆ ಎಂಬುದನ್ನು ಕಲಿಸಲಾಗುತ್ತಿದೆ ಎಂಬ ಸುದ್ದಿ ಕೇಳಿ ಗಾಬರಿಗೊಂಡಿದ್ದೆವು. ಈಗ ಕಳ್ಳತನ, ದರೋಡೆಯಂತಹ ದುಷ್ಕೃತ್ಯಗಳನ್ನು ಕಲಿಸಲೂ ಶಾಲೆ ಇದೆ ಎಂಬುದನ್ನು ಕೇಳಿ ನಮ್ಮ ಸಮಾಜ ದಿಕ್ಕು ತಪ್ಪುತ್ತಿದೆಯೇನೋ ಅನಿಸುತ್ತದೆ. ಕಳ್ಳತನ, ದರೋಡೆಗಳಂತಹ ದುಷ್ಕೃತ್ಯಗಳು ಯಾವುದೇ ಗುರುಗಳ ಸಹಾಯವಿಲ್ಲದೆ ಕಲಿಯುವ ಕೃತ್ಯಗಳು ಎಂಬ ಭಾವನೆ ಈಗ ದೂರಾಗಿದೆ. ನೋವಿನ ಸಂಗತಿ ಎಂದರೆ ಇಂಥ ಶಾಲೆಗಳಿಗೂ ತಮ್ಮ ಮಕ್ಕಳನ್ನು ಕಳುಹಿಸುವ ಪೋಷಕರಿದ್ದಾರೆ ಎಂಬುದು. ಇಂತಹ ಶಾಲೆಗಳು, ಕೃತ್ಯಗಳನ್ನು ಕಲಿಸುವವರು ಹೆಚ್ಚಾದಷ್ಟೂ ಸಮಾಜ ದಿಕ್ಕುತಪ್ಪುತ್ತದೆ. ಆದ್ದರಿಂದ ಸರ್ಕಾರ ಇಂತಹ ಬೆಳವಣಿಗೆಗೆ ಕಡಿವಾಣ ಹಾಕಬೇಕು.

-ರಮಾನಂದ ಶರ್ಮಾ, ಜೆ.ಪಿ.ನಗರ, ಬೆಂಗಳೂರು.