Mysore
31
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ಪ್ರಭಾವಶಾಲಿ ಅಮಲ್ದಾರರಾಗಿದ್ದ ನರಸಣ್ಣ

ನಂಜನಗೂಡಿನ ರಾಷ್ಟ್ರಪತಿ ರಸ್ತೆಯಲ್ಲಿರುವ ನಾರಾಯಣರಾಯರ ಅಗ್ರಹಾರದ ಪಕ್ಕದಲ್ಲಿಯೇ ನರಸಣ್ಣನವರ ಅಗ್ರಹಾರ ಇದೆ. ಇಲ್ಲಿ ಅಮಲ್ದಾರರಾಗಿದ್ದ ನರಸಣ್ಣನವರು ಮೈಸೂರು ರಾಜ್ಯದ ಅತ್ಯಂತ ಪ್ರಭಾವಶಾಲಿ ಅಮಲ್ದಾರರಲ್ಲಿ ಒಬ್ಬರಾಗಿದ್ದರು. ಈ ಊರಿನ ದೇವಸ್ಥಾನದಲ್ಲಿ ಶಿವಕೂಟ ಪ್ರಾರಂಭ ಮಾಡಿಸಿದವರು ಇವರೇ. ಇದಕ್ಕಾಗಿ ನೂರಾರು ಎಕರೆ ಜಮೀನನ್ನು ಜನರಿಂದ ದಾನ ಪಡೆದು ಶಿವಕೂಟದ ವ್ಯವಸ್ಥೆ ಮಾಡಿದರು. ನಂಜನಗೂಡಿನ ದೇವಸ್ಥಾನದಲ್ಲಿ ಪ್ರತಿ ಹುಣ್ಣಿಮೆಯ ದಿನವೂ ನಡೆಯುತ್ತಿದ್ದ ವಿಶೇಷ ಪೂಜೆಯೊಂದಿಗೆ ರಥೋತ್ಸವ ನಡೆಯಬೇಕೆಂಬ ಕಟ್ಟಳೆಯನ್ನು ಜಾರಿಗೆ ತಂದ ಇವರು ಅದಕ್ಕಾಗಿ ಒಂದು ತೇರನ್ನು ಮಾಡಿಸಿಕೊಟ್ಟರು.

ಆಗಿನ ಕಾಲದಲ್ಲಿ ಅಮಲ್ದಾರರೇ ಸರ್ಕಾರದ ಎಲ್ಲ ಅಂಗಗಳ ಮುಖ್ಯಸ್ಥರಾಗಿ ಇರುತ್ತಿದ್ದರು ಶ್ರೀಕಂಠೇಶ್ವರ ದೇವಾಲಯದ ಆಡಳಿತದ ಮೇಲ್ವಿಚಾರಣೆಯೂ ಅವರದ್ದೇ ಆಗಿತ್ತು. ದೇವಾಲಯದ ಆಡಳಿತದಲ್ಲಿ ಪೂಜೆ ಪುನಸ್ಕಾರಗಳಲ್ಲಿ ಅನೇಕ ಮಾರ್ಪಾಡುಗಳನ್ನು ಮಾಡಿ ಶಿಸ್ತು ಬದ್ಧವಾದ ವಾತಾವರಣವನ್ನು ನಿರ್ಮಿಸಿದರು. ಅಮಲ್ದಾರರಾಗಿ ತಾವು ಹೋದ ಕಡೆಯೆಲ್ಲ ವಾಸಕ್ಕಾಗಿ ಕಟ್ಟಿಸಿದ ಮನೆಯನ್ನು ಅಲ್ಲಿಂದ ವರ್ಗವಾಗಿ ಬೇರೆಡೆಗೆ ಹೋಗುವ ಸಮಯದಲ್ಲಿ ಶ್ರೋತ್ರಿಯರಾದ ಬ್ರಾಹ್ಮಣರಿಗೆ ದಾನವಾಗಿ ಕೊಟ್ಟು ಬಿಡುತ್ತಿದ್ದರಂತೆ. ನಂಜನಗೂಡು ಈಗಿರುವ ನರಸಣ್ಣನವರ ಅಗ್ರಹಾರವನ್ನು ಕಟ್ಟಿಸಿದವರು ಇವರಾಗಿದ್ದರು. ಇಲ್ಲಿ ಪುರಸಭಾಧ್ಯಕ್ಷರಾಗಿದ್ದ ಇ ಆರ್ ಶಂಕರ್ ಅವರ ಇವರ ಮೊಮ್ಮಕ್ಕಳು ಆಗಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ