ನಂಜನಗೂಡು ತಾಲ್ಲೂಕಿನಲ್ಲಿ ವಿವಿಧ ಪ್ರ ದರ್ಶಕ ಕಲೆಗಳು ಪ್ರಸಿ ದ್ಧವಾಗಿದ್ದು, ಮೈಸೂರು ದಸರಾ ಮಹೋತ್ಸ ದ ಜಂಬೂಸವಾರಿಯಲ್ಲಿ ಕೂಡ ಹಲವು ಕಲಾವಿದರು ವಿವಿಧ ಕಲೆಗಳನ್ನು ಪ್ರ ದರ್ಶಿಸಿದ್ದಾರೆ. ಉದಾಹರಣೆಗೆ ತಾಲ್ಲೂಕಿನ ಹೆಡತಲೆ ಗ್ರಾಮ ದಲ್ಲಿ ವೀರನಮಕ್ಕಳ ಕುಣಿತ, ಬಯಲಾಟ, ಕೋಲಾಟ, ಬೀಸು ಕಂಸಾಳೆ ನೃತ್ಯ, ನಂದಿಧ್ವಜ ಕುಣಿತ ಮುಂತಾದ ಪ್ರ ದರ್ಶನ ಕಲೆಗಳು ಸಾಕಷ್ಟು ಜನ್ರ೨ಯತೆ ಗಳಿಸಿವೆ. ಹಿಂದೆ ಈ ಊರಿನಲ್ಲಿ ಸುಗ್ಗಿಯ ಕಾಲ ದಲ್ಲಿ ತಪ೩ ದೇ, ರಾತ್ರಿ ಬೆಳಗೂ ಬಯಲಾಟ ನಡೆಯುತ್ತಿತ್ತಂತೆ. ಇಂದು ಅವುಗಳ ಸ್ಥಾನವನ್ನು ಎರಡು, ಮೂರು ಗಂಟೆಗಳಲ್ಲಿ ಮುಗಿಯುವ ಸಾಮಾಜಿಕ ನಾಟಕಗಳು ಆಕ್ರಮಿಸಿಕೊಂಡಿವೆ. ಹಿಂದಿನ ಬಯಲಾಟದ ಪದಗಳಲ್ಲಿ ಕೆಲವನ್ನು ಮಹಿಳೆಯರೂ ಸೇರಿದಂತೆ ಕೆಲವರು ಮಾತ್ರ ಹಾಡುತ್ತಾರೆ.
ಜಾನಪದ ಕಲೆ ಕೋಲಾಟದಲ್ಲಿಯೂ ಈ ಗ್ರಾಮದವರು ನೈಪುಣ್ಯವನ್ನು ಸಾಣಿಸಿ ದರು. ಇದಲ್ಲದೆ, ಹಸೆಹಾಡು, ಆರತಿ ಹಾಡು, ಬೀರಪದ, ಸೋಬಾನೆ ಹಾಡುಗಳು, ನಂಜುಂಡೇಶ್ವರ, ಮಲೆಮಹದೇಶ್ವರ, ಬಿಳಿಗಿರಿ ರಂಗಪ್ಪ, ಬಾಲನಾಗಮ್ಮ, ಬಸವಣ್ಣ, ಅಕ್ಕಮಹಾದೇವಿ ಮುಂತಾದವರ ಕಥೆ ಹೇಳುವ ಹಾಡುಗಳು ಮೊದಲಾಗಿ ಅನೇಕ ಬಗೆಯ ಜಾನಪ ದ ಗೀತೆಗಳ ಸರಕು ಇಲ್ಲಿನ ಜನರಲ್ಲಿವೆ.