1908ರ ಮಾರ್ಚ್ 28ರಂದು ಅಂದಿನ ಸರ್ಕಾರ ಗೆಜೆಟ್ ಪ್ರಕಟಣೆ ಹೊರಡಿಸಿ ನಂಜನಗೂಡನ್ನು ‘ಟೌನ್’ ಎಂದು ಕರೆದು, ಇಲ್ಲಿ ೧೫ ಸ ದಸ್ಯರ ಪುರಸಭೆಯ ವ್ಯವಸ್ಥೆಯನ್ನು ಜಾರಿಗೊಳಿಸಿತು. ಆಗಿನ ಕಾಲಕ್ಕೆ ಈ ಊರಿನಲ್ಲಿದ್ದ ಅನೇಕ ಗಣ್ಯ ವ್ಯಕ್ತಿಗಳು ಇದರ ಸದಸ್ಯರಾಗಿ ಎಲ್ಲ ಕಾಲಕ್ಕೂ ಆದರ್ಶವೆನ್ನಿಸುವ ರೀತಿಯಲ್ಲಿ ಸೇವೆ ಸಲ್ಲಿಸಿ ದಾರೆ. ಮೊದಲು ದಳವಾಯಿ ಕಟ್ಟಡ ದಲ್ಲಿಯೇ ಪುರಸಭೆಯ ಕಾರ್ಯಾಲಯ ಇತ್ತು. ಈಗಿನ ನಗರಸಭೆಯ ಕಟ್ಟಡವನ್ನು ಉ ದ್ಘಾಟಿಸಿ ದವರು ಮೈಸೂರಿನ ಮಹಾರಾಜರಾದ ಶ್ರೀ ಜಯಚಾಮ ರಾಜೇಂದ್ರ ಒಡೆಯರ್ ಅವರು. ಆದರೆ, ಆ ಸಮಯದಲ್ಲಿ ನಂಜನಗೂಡಿನಲ್ಲಿ ಕಾಲರಾ ಇದ್ದುದರಿಂದ ಮಹಾರಾಜರಿಗೆ ಆತಿಥ್ಯ ನೀಡುವ ಬಗ್ಗೆ ಸ್ವಲ್ಪ ಸಮಸ್ಯೆ ಉಂಟಾಯಿತು. ಕಡೆಗೆ, ಉದ್ಘಾಟನೆ ನಡೆ ದ ನಂತರ ಮಹಾರಾಜರಿಗೆ ಬೇಗೂರಿನ ಪ್ರವಾಸಿಮಂದಿರ ದಲ್ಲಿ ಭೋಜನಕ್ಕೆ ಏರ್ಪಾಡು ಮಾಡಲಾಗಿತ್ತು. ೧೯೦೦ರ ವೇಳೆಗೆ ನಂಜನಗೂಡಿನಲ್ಲಿ ಜ್ಯೂಯರ್ ವಾಟರ್ ಫಿಲ್ಟರ್ ವ್ಯವಸ್ಥೆ ಮೂಲಕ ಶು ದ್ಧ ನೀರನ್ನು ಪೂರೈಸಲಾಗುತ್ತಿತ್ತು. ಆಗಿನ ಕಾಲಕ್ಕೆ ಇಡೀ ರಾಜ್ಯದಲ್ಲಿ ಬೆಂಗಳೂರು, ಮೈಸೂರು ಬಿಟ್ಟರೆ ಈ ಊರಿನಲ್ಲಿಯೇ ಅಂತಹ ಏರ್ಪಾಡು ಇದ್ದದ್ದು. ಹಳೆಯ ಬಸ್ ಸ್ಟ್ಯಾಂಡ್ ಮತ್ತು ಟೌನ್ ಟೆನ್ನಿಸ್ ಕ್ಲಬ್ ಇರುವ ಜಾಗದಲ್ಲಿ ಇದಕ್ಕೆ ಏರ್ಪಾಡು ಮಾಡಲಾಗಿತ್ತು.
- ಮುಖಪುಟ
- ಮೈಸೂರು
- ಜಿಲ್ಲೆಗಳು
- ರಾಜ್ಯ
- ದೇಶ- ವಿದೇಶ
- ರಾಜಕೀಯ
- ಅಪರಾಧ
- ಮಹಿಳೆ
- ಕೃಷಿ
- ವಿಜ್ಞಾನ ತಂತ್ರಜ್ಞಾನ
- ಕ್ರೀಡೆ
- ವಾಣಿಜ್ಯ
- ಚಿತ್ರಸಂತೆ
- ವಿಶೇಷ
- ಆಂದೋಲನ ಪುರವಣಿ
- ಎಡಿಟೋರಿಯಲ್
- ಆಂದೋಲನ 50
- ಜಾಹೀರಾತು
- Cricket
Subscribe to Updates
Get the latest creative news from FooBar about art, design and business.