‘ಆಂದೋಲನ- ೫೦ರ ಸಾರ್ಥಕ ಪಯಣ’ಕ್ಕೆ ಸಾಕ್ಷಿಯಾಗಲು ಆಗಮಿಸಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಕಾಗಲವಾಡಿ ಎಂ.ಶಿವಣ್ಣ ಅವರನ್ನು ರವಿ ಕೋಟಿ ಅವರನ್ನು ಬರಮಾಡಿಕೊಂಡರು. ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಅನಿಲ್ ಚಿಕ್ಕಮಾದು, ರಶ್ಮಿ ಕೋಟಿ, ಶೀತಲ್ ಕೋಟಿ, ಮಂಜು ಕೋಟೆ, ಉತ್ತನಹಳ್ಳಿ ಮಹದೇವ್, ಎಚ್.ಎಸ್.ದಿನೇಶ್ ಕುಮಾರ್ ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.
ಕಾರ್ಯಕ್ರಮಕ್ಕೆ ಆಗಮಿಸಿದ ಹಿರಿಯ ಪತ್ರಕರ್ತ ಕಮಲ್ ಗೋಪಿನಾಥ್ ಮತ್ತು ಅವರ ಪತ್ನಿ ಗೀತಾ ಅವರನ್ನು ರವಿ ಕೋಟಿ ಆತ್ಮೀಯವಾಗಿ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಬಾ.ನಾ.ಸುಬ್ರಹ್ಮಣ್ಯ, ‘ಆಂದೋಲನ’ ಕಚೇರಿ ಸಿಬ್ಬಂದಿ ಸುನಿಲ್ ಕುಮಾರ್ ಮುಂತಾದವರನ್ನು ಚಿತ್ರದಲ್ಲಿ ಕಾಣಬಹುದು.
‘ಆಂದೋಲನ’ದ ಹಾದಿಯ ಹಾಡುಪಾಡು ಸಾಕ್ಷ್ಯಚಿತ್ರದಲ್ಲಿ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರು ದೂರದರ್ಶನ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಚಿತ್ರವನ್ನು ಪ್ರದರ್ಶಿಸಿದ ಕ್ಷಣ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಪಿ.ಸಾಯಿನಾಥ್ ಅವರ ಮಾತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿವಿಗೊಟ್ಟರು
ನಟ ಶಿವರಾಜ್ ಕುಮಾರ್ ಕಾರ್ಯನಿಮಿತ್ತ ಕಾರ್ಯಕ್ರಮದಿಂದ ನಿರ್ಗಮಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ತೆರಳಿ ಮಾತನಾಡಿದರು.