Mysore
23
overcast clouds
Light
Dark

ಆಂದೋಲನ ಪತ್ರಿಕೆಯ ಒಡನಾಡಿಗಳ ಒಡಲಾಳದ ಮಾತು – 4

‘ಆಂದೋಲನ’ ಪತ್ರಿಕೆ ಸಂಸ್ಥಾಪಕ ಸಂಪಾದಕ ರಾಜಶೇಖರ ಕೋಟಿ ಅವರು ಒಬ್ಬ ವ್ಯಕ್ತಿ ಏನನ್ನು ಸಾಧನೆ ಮಾಡಬಹುದು ಎನ್ನುವುದನ್ನು ಮಾಡಿ ಸಮಾಜಕ್ಕೆ ತೋರಿಸಿದ್ದಾರೆ. ಅಲ್ಲಿಂದ ಆರಂಭವಾಗಿ ಈತನಕ ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುವ ಮೂಲಕ ರಾಜಕೀಯವಾಗಿ ಶಕ್ತಿ ತುಂಬಿದ ಪತ್ರಿಕೆಯಾಗಿದೆ. ಕಾಯರ್ಕ್ರಮ ತುಂಬ ಚೆನ್ನಾಗಿ ನಡೆಯಿತು. ೫೦ ವರ್ಷ ತುಂಬಿದ ಪತ್ರಿಕೆಯು ನೂರು ವರ್ಷಗಳು ಪತ್ರಿಕೆಯಾಗಲೆಂದು ಹಾರೈಸುವೆ. -ಜಿ.ಟಿ.ದೇವೇಗೌಡ, ಶಾಸಕರು.

 

 

ಜನಪರ, ದಲಿತ, ರೈತರ ಪರವಾಗಿ ‘ಆಂದೋಲನ’ ಸದಾನಿಂತಿದೆ. ಶೋಷಿತ ಸಮುದಾಯಗಳ nಪರವಾಗಿ ‘ಆಂದೋಲನ’ ನಿಂತಿದೆ ಎನ್ನುವುದಕ್ಕಿಂತಲೂ ರಾಜಶೇಖರ ಕೋಟಿ ಅವರು ಬೆನ್ನಿಗೆ ನಿಂತಿದ್ದರಿಂದ ಹೋರಾಟಗಳಿಗೆ ಶಕ್ತಿ ತುಂಬಿತು. ಸಮಾಜದ ಬಗ್ಗೆ ಅವರಲ್ಲಿ ಮಿಡಿಯುತ್ತಿದ್ದ ತುಡಿತ ನಮ್ಮಂತಹವರಿಗೆ ಪ್ರೋತ್ಸಾಹ ನೀಡುವಂತೆ ಮಾಡಿತು. ಮುಂದಿನ ದಿನಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳುವಂತಾಗಲಿ. – ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವರು.

 

‘ಆಂದೋಲನ’ದಹೆಸರಿಗೆ ತಕ್ಕಂತೆ ಸಮಾಜಮುಖಿ ಹೋರಾಟಗಳಲ್ಲಿ ರಾಜಶೇಖರ ಕೋಟಿ ಅವರು ಭಾಗಿಯಾಗುತ್ತಿದ್ದರು. ಸಮಾರಂಭ ತುಂಬಾ ಚೆನ್ನಾಗಿ ನಡೆಯಿತು. ರಾಜಶೇಖರ ಕೋಟಿ ಅವರ ಜತೆ ಇದ್ದ ಸ್ನೇಹಿತರು, ಅಭಿ ಮಾನಿಗಳು, ಓದುಗರು ಪಾಲ್ಗೊಂಡಿದ್ದರು. ಒಂದು ರೀತಿಯಲ್ಲಿ ಓದುಗ ಅಭಿಮಾನಿಗಳು ‘ಆಂದೋಲನ’ಕ್ಕೆ ಹೊಸ ಶಕ್ತಿ ತುಂಬಿದ ರೀತಿಯಲ್ಲಿ ಕಾರ್ಯಕ್ರಮದಲ್ಲಿ ಕಾಣುವಂತೆ ಮಾಡಿಸಿತು. -ವಾಸು, ಮಾಜಿ ಶಾಸಕರು.

ಕಾರ್ಯಕ್ರಮ ಬಹಳ ಚೆನ್ನಾಗಿತ್ತು. ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಹಳೆಯ ನೆನಪುಗಳಿಗೆ ನನ್ನನ್ನು ಕೊಂಡೊಯ್ಯಿತು. ನಾನು ಬಹಳ ಪ್ರೀತಿಸುವ ಪತ್ರಿಕೆ ‘ಆಂದೋಲನ’ ರಾಜಶೇಖರ ಕೋಟಿ ಅವರು ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದಾಗ ನನಗೆ ತೋರಿದ ಕಾಳಜಿ, ಪ್ರೀತಿಯನ್ನು ಇಂದಿಗೂ ಮರೆಯಲು ಸಾಧ್ಯವಿಲ್ಲ. ಕಾರ್ಯಕ್ರಮ ನನ್ನ ಕುಟುಂಬದ ಕಾರ್ಯಕ್ರಮವೆಂಬಂತೆ ಭಾಸವಾಯಿತು. -ಡಾ.ಪುಷ್ಪ ಅಮರನಾಥ್, ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷರು.

ಕಾರ್ಯಕ್ರಮ ತುಂಬ ಅಚ್ಚುಕಟ್ಟಾಗಿ, ಸೊಗಸಾಗಿ ನಡೆಯಿತು. ನಾನು ಮೈಸೂರಿಗೆ ಬಂದ ಕೆಲವು ದಿನಗಳಾದರೂ ‘ಆಂದೋಲನ’ದ ಪತ್ರಿಕೆ ಬಗ್ಗೆ ಕೇಳಿದ್ದೆ. ಕೆಲವೊಮ್ಮೆ ಓದಿದ್ದೆ. ಇಂದು ನಡೆದ ಕಾರ್ಯಕ್ರಮದಲ್ಲಿ ಅಸಂಖ್ಯಾತ ಓದುಗರನ್ನು ನೋಡಿದ್ದು ಅಚ್ಚರಿಯಾಯಿತು. ಪತ್ರಿಕೆಯು ನಿರಂತರವಾಗಿ ಮುಂದುವರಿದು ನೂರು ವರ್ಷ ತಲುಪಲೆಂದು ಕೋರುವೆ. -ಜಿ.ಟಿ.ದಿನೇಶ್ ಕುಮಾರ್, ಆಯುಕ್ತರು, ಮುಡಾ.

 

ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಬಂದು ಪತ್ರಿಕೋದ್ಯ ಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ ‘ಆಂದೋಲನ’ ದಿನಪತ್ರಿಕೆಯ ಸಂಸ್ಥಾಪಕ ಸಂಪಾದಕರಾದ ರಾಜಶೇಖರ ಕೋಟಿ ಅವರ ೭೫ನೇ ವರ್ಷದ ಸವಿ ನೆನಪು ಹಾಗೂ ಪತ್ರಿಕೆಯ ೫೦ನೇ ವರ್ಷದ ಕಾರ್ಯಕ್ರಮವು ಯಾವುದೋ ಕನ್ನಡ ಚಿತ್ರರಂಗದ ದೊಡ್ಡ ಬಜೆಟ್ನ ಚಿತ್ರ ತೆರೆ ಕಂಡಂತೆ ಭಾಸವಾಯಿತು. – ವಿಶ್ವನಾಥ್ ವಿ.ಸ್ವಾಮಿ, ವ್ಯವಸ್ಥಾಪಕ ನಿರ್ದೇಶಕರು, ಸುದ್ದಿಮೂಲ.

 

‘ಆಂದೋಲನ’ ಪತ್ರಿಕೆಯ ಅಭಿಮಾನಿಗಳು ಹಲವು ಕಡೆಗಳಿಂದ ಬಂದಿದ್ದರು, ಅತಿಥಿಗಳು ಅರ್ಥಪೂರ್ಣವಾಗಿ ಮಾತನಾಡಿದರು. ಪತ್ರಿಕೆ ಬೆಳವಣಿಗೆಯಲ್ಲಿ ಇದೊಂದು ಮಹತ್ವಪೂರ್ಣ ಕಾರ್ಯಕ್ರಮ. ನಾನು ಇದಕ್ಕಾಗಿಯೇ ಬೇರೆ ಕಾರ್ಯಕ್ರಮ ರದ್ದು ಮಾಡಿ ಬಂದಿದ್ದೆ. ರಾಜಶೇಖರ ಕೋಟಿ ಅವರ ಇಡೀ ಕುಟುಂಬ, ಪತ್ರಿಕೆಯ ಬಳಗದವರು ಸಂಭ್ರಮದಿಂದ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸಿದರು. – ಬಡಗಲಪುರ ನಾಗೇಂದ್ರ, ರೈತ ಮುಖಂಡರು

 

ಇಡೀ ಕಾರ್ಯಕ್ರಮ ಚೆನ್ನಾಗಿ ನಡೆಯಿತು. ನಾನು ಎಲ್ಲ ಕಡೆಗಳಲ್ಲಿಯೂ ಪಾಸಿಟಿವ್ ವೇವ್ ಕಂಡೆ. ಎಲ್ಲರ ಮುಖದಲ್ಲಿಯೂ ಜೋಶ್ ಇತ್ತು. ಇದು ನಮ್ಮದೇ ಕಾರ್ಯಕ್ರಮ ಎನ್ನುವ ರೀತಿ ಎಲ್ಲರೂ ಭಾಗಿಯಾಗಿದ್ದರು. ನನಗೆ ಒಳ್ಳೆಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಕ್ಕೆ ಖುಷಿ ಇದೆ. ಇಂದಿನ ಪತ್ರಿಕೋದ್ಯಮ ಯಾವ ದಿಕ್ಕಿನಲ್ಲಿಸಾಗುತ್ತಿದೆ. ಇಡೀ ‘ಆಂದೋಲನ’ ತಂಡ ಅಧಿಕಾರಿಗಳೊಂದಿಗೆ ಸಹಕರಿಸಿದರು. – ಬಗಾದಿ ಗೌತಮ್, ಜಿಲ್ಲಾಧಿಕಾರಿ

 

ಕಾರ್ಯಕ್ರಮವನ್ನುಅಚ್ಚುಕಟ್ಟಾಗಿ ವ್ಯವಸ್ಥೆಮಾಡಲಾಗಿತ್ತು. ಅದೇ ರೀತಿ ಅಲ್ಲಿ ಭಾಗಿ ಯಾಗಿದ್ದವರೂ ಇದ್ದರು. ಸಾಹಿತ್ಯ, ಪತ್ರಿಕೋದ್ಯಮ, ಚಿಂತಕರು, ವೇದಿಕೆ ಮೇಲೆ ಇದ್ದ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರು ಭಾಗವಹಿಸಿದ್ದರು. ಸಾಯಿನಾಥ್‌ವರು ಪ್ರಸ್ತುತ ಪತ್ರಿಕೋದ್ಯಮದ ಬಗ್ಗೆ ಮಾತನಾಡಿದ್ದು, ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ, ಶಿವರಾಜ್ ಕುಮಾರ್ ಅವರ ಮಾತುಗಳು ಪತ್ರಿಕೋದ್ಯಮದ ಇಂದಿನ ಸ್ಥಿತಿಯನ್ನು ಬಿಚ್ಚಿಡುವ ಪ್ರಯತ್ನ ಮಾಡಿದವು. – ಬಾದಲ್ ನಂಜುಂಡಸ್ವಾಮಿ, ಕಲಾವಿದರು

 

ರಾಜಶೇಖರ ಕೋಟಿ ಅವರು ನಡೆದು ಬಂದ ದಾರಿ, ಅವರ ಜೀವನದ ಬಗ್ಗೆ ಒಳ್ಳೆಯ ಮಾಹಿತಿ ಸಿಕ್ಕಿತು, ಸಿಎಂ ಬಸವರಾಜ ಬೊಮ್ಮಾಯಿ ಅವರು ಚೆನ್ನಾಗಿ ಮಾತನಾಡಿದರು. ಸಿದ್ದರಾಮಯ್ಯ ಅವರು ಇಂದಿನ ಮಾಧ್ಯಮಗಳ ಕಾರ್ಯ ಚಟು ವಟಿಕೆಗಳ ಬಗ್ಗೆ ಚೆನ್ನಾಗಿ ವಿಶ್ಲೇಷಣೆ ಮಾಡಿದರು. ಇದರ ಬಗ್ಗೆಯೇ ನಾನು ಪ.ಮಲ್ಲೇಶ್ ರವರು ಚರ್ಚೆ ಮಾಡಿದೆವು. ಕೋಟಿರವರು ಕಟ್ಟಿದ ಬಳಗ ಇಂದು ಭಾಗಿಯಾಗಿತ್ತು. -ಬಿ.ಎಂ.ರಾಮು, ಜಿಪಂ ಮಾಜಿ ಅಧ್ಯಕ್ಷರು, ಮೈಸೂರು

ಕಾರ್ಯಕ್ರಮ ತುಂಬಾ ಒಳ್ಳೆಯ ರೀತಿಯಲ್ಲಿ ನಡೆಯಿತು. ರಾಜಶೇಖರ ಕೋಟಿಯವರು ಕಟ್ಟಿ ಬೆಳೆಸಿದ ‘ಆಂದೋಲನ’ ಪತ್ರಿಕೆಯ ಕನಸುಗಳನ್ನು ಪತ್ರಿಕೆಯ ಬಳಗ ಸಾಕಾರಗೊಳಿಸಲು ಶ್ರಮಿಸಿರುವುದು ಕಾರ್ಯಕ್ರಮದಲ್ಲಿ ಕಂಡುಬಂತು. ಕಳೆದ ೫೦ ವರ್ಷಗಳಿಂದ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ‘ಆಂದೋಲನ’ ಬೆಳೆದು ಬಂದಿದೆ ಎಂಬುದಕ್ಕೆ ಕಾರ್ಯಕ್ರಮಕ್ಕೆ ಬಂದ ಗಣ್ಯರೇ ಸಾಕ್ಷಿ. ಒಟ್ಟಾರೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. -ಎಚ್.ವಿ.ರಾಜೀವ್, ಮುಡಾ ಅಧ್ಯಕ್ಷರು.

ಎಲ್ಲರೂ ಒಟ್ಟಾಗಿ ಸೇರಿ ಕಾರ್ಯಕ್ರಮವನ್ನು ನಡೆಸಿದರೆ ಅಂತಹ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂಬುದಕ್ಕೆ ‘ಆಂದೋಲನ’ ೫೦ನೇ ವರ್ಷಾಚರಣೆಯೇ ಉದಾಹರಣೆಯಾಗಬಲ್ಲದು. ಕಾರ್ಯಕ್ರಮದ ಮೂಲಕ ಪತ್ರಿಕೆಯ ಧ್ಯೇೋಂದ್ದೇಶಗಳು ಪ್ರಕಟವಾದವು. ೫೦ ವರ್ಷ ಸಾರ್ಥಕ ಪಯಣ ಪೂರೈಸಿರುವ ‘ಆಂದೋಲನ’ ಪತ್ರಿಕೆ ಮುಂದಿನ ದಿನಗಳಲ್ಲಿ ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ. -ಲಕ್ಷ್ಮೀಕಾಂತರೆಡ್ಡಿ, ನಗರಪಾಲಿಕೆ ಆಯುಕ್ತರು.

‘ಆಂದೋಲನ’ ದಿನಪತ್ರಿಕೆಯ ೫೦ನೇ ವಾರ್ಷಿಕೋತ್ಸವ ಅಚ್ಚುಕಟ್ಟಾಗಿ ಮೂಡಿಬಂತು. ರಾಜಶೇಖರ ಕೋಟಿ ಅವರನ್ನು ನಾನು ಹತ್ತಿರದಿಂದ ಕಂಡಿದ್ದೇನೆ. ಅವರ ಬದ್ಧತೆ, ಪ್ರಾಮಾಣಿಕತೆ ಬಗ್ಗೆ ಎಷ್ಟು ಹೇಳಿದರೂ ಸಾಲದು. ಕಾರ್ಯಕ್ರಮದಲ್ಲಿ ಅವರ ಬಗ್ಗೆ ತಿಳಿಸಿಕೊಟ್ಟಿದ್ದುದು ಅರ್ಥಪೂರ್ಣವಾಗಿತ್ತು. ನಿರೀಕ್ಷೆಗೂ ಮೀರಿ ಕಾರ್ಯಕ್ರಮ ಯಶಸ್ವಿಯಾಗಿದ್ದು, ರಾಜಶೇಖರ ಕೋಟಿ ಅವರಿಗೆ ಸಂದ ಗೌರವ ಎಂದೇ ನನ್ನ ಭಾವನೆ. – ಸುನಂದಾ ಪಾಲನೇತ್ರ. ಮಹಾಪೌರರು.

‘ಆಂದೋಲನ’ ಪತ್ರಿಕೆಯ ೫೦ನೇ ವರ್ಷಾಚರಣೆ ನಿಜಕ್ಕೂ ಅವಿಸ್ಮರಣೀಯ. ರವಿ ಕೋಟಿ, ರಶ್ಮಿ ಕೋಟಿ ಹಾಗೂ ‘ಆಂದೋಲನ’ ಬಳಗದವರ ಪರಿಶ್ರಮದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಕಾರ್ಯಕ್ರದ ಅಚ್ಚುಕಟ್ಟುತನ ನಿಜಕ್ಕೂ ಮೆಚ್ಚುವಂತಹುದು. ಇಂತಹ ಜನ ಮೆಚ್ಚುವ ಕಾರ್ಯಕ್ರಮಗಳು ನಡೆಯುವುದು ಅಪರೂಪ. ಕಾರ್ಯಕ್ರಮಕ್ಕೆ ಬಂದ ಓದುಗರು ಪತ್ರಿಕೆಯ ಜನಪ್ರಿಯತೆಗೆ ಸಾಕ್ಷಿಯಾಗಿತ್ತು. -ಎಂ.ಶಿವಣ್ಣ, ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷರು.

‘ಆಂದೋಲನ’ ದಿನಪತ್ರಿಕೆಯ ೫೦ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅನೇಕ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿಕೊಟ್ಟಿದ್ದು ಅರ್ಥಪೂರ್ಣವಾಗಿತ್ತು. ಪತ್ರಿಕೆಯು ೫೦ ವರ್ಷ ನಡೆದುಬಂದ ದಾರಿಯ ಬಗ್ಗೆ ಬಹಳ ಚೆನ್ನಾಗಿ ಸಾಕ್ಷ ್ಯ ಚಿತ್ರದ ಮೂಲಕ ತಿಳಿಸಿಕೊಟ್ಟಿದ್ದು ಅರ್ಥಪೂರ್ಣವಾಗಿತ್ತು. ಇದರಲ್ಲಿ ‘ಆಂದೋಲನ’ ಸಂಪಾದಕರು ಹಾಗೂ ಬಳಗದ ಶ್ರಮ ಎದ್ದು ಕಾಣುತ್ತಿತ್ತು. ಪತ್ರಿಕೆಯ ಬೆಳವಣಿಗೆ ಹೀಗೆಯೇ ಮುಂದುವರಿಯಲಿ. -ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತರು

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ