Light
Dark

ಆಂದೋಲನದ ಹೆಜ್ಜೆ ಗುರುತು…

1972

ಸಮಾಜವಾದಿ ಸಿದ್ಧಾಂತಗಳಿಗೆ ಆಕರ್ಷಿತರಾಗಿದ್ದ ರಾಜಶೇಖರ ಕೋಟಿ ಅವರು ಧಾರವಾಡದಲ್ಲಿ ಅದೋಲನ ವಾರಪತ್ರಿಕೆಯಾಗಿ ಪ್ರಾರಂಭಿಸಲಾಯಿತು. ಕಲಾವಿದ ಕೆ.ಬಿ.ಕೆ. (ಕೆ.ಬಿ.ಕುಲಕರ್ಣಿ) ‘ಆಂದೋಲನ’ದ ಮಾಸ್ಟ್ ಹೆಡ್‌ನ ವಿನ್ಯಾಸ ರೂಪಿಸಿಕೊಟ್ಟವರು. 1972ರಲ್ಲಿ ರೂಪಿಸಿದ್ದ ಆ ವಿನ್ಯಾಸ ಈಗಲೂ ಇದೆ.

1973

ಪಿ.ಲಂಕೇಶ್ ಅವರು “ಬ್ರಾಹಣರೊಂದಿಗೆ ಸಂಭಾಷಣೆ’ ಎಂಬ ಲೇಖನ ಮಾಲೆಯನ್ನು ಬರೆದಿದ್ದರು. ಅದು ರಾಜ್ಯದ ಗಮನವನು ಸೆಳೆದಿತ್ತು.

1974

ಸಮಾಜವಾದಿ ಹೋರಾಟ ಹಾಗೂ ಜೆಪಿ ಚಳವಳಿಗಳ ಅಂಗವಾಗಿ ಪತ್ರಿಕೆ ಮೈಸೂರಿಗೆ ಸ್ಥಳಾಂತರಗೊಂಡು ಇಲ್ಲೇ ತಳವೂರಿತು. ದೇವನೂರ ಮಹಾದೇವ ಹಾಗೂ ಇತರ ಸ್ನೇಹಿತರ ನೆರವಿನಿಂದ ಪತ್ರಿಕೆಗಾಗಿ ಚಿಕ್ಕ ಮುದ್ರಣಾಲಯ ವ್ಯವಸ್ಥೆ ಮಾಡಿಕೊಂಡರು.

1975

ಜೂನ್,1975- ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದರು. ಹೆಚ್ಚು ಕಡಿಮೆ ಎಲ್ಲ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳೂ ಸ್ಥಗಿತಗೊಂಡವು. ಈ ಸಂಕ್ರಮಣದ ಕಾಲದಲ್ಲಿ ಅಂದೋಲನ ವಾರ ಪತ್ರಿಕೆಯಾಗಿ ತನ ಅವತಾರ ಮುಗಿಸಿತ್ತು. ಆದರೆ ಸಂಜೆ ದಿನಪತ್ರಿಕೆಯಾಗಿ ಹೊಸ ಅವತಾರದಲ್ಲಿ ಎದ್ದು ನಿಂತಿತು.

1980

1980ರ ಅಂತ್ಯದಲ್ಲಿ ಒಂತಿಕೊಪ್ಪಲಿನ ಅನುಪಮ ಮುದ್ರಣಾಲಯಕ್ಕೆ ಸ್ಥಳಾಂತರಗೊಂಡ ಆಂದೋಲನ ಸಿಂಗಲ್ ಡೆಮ್ಮಿ ಅಳತೆಯಲ್ಲಿ ಎರಡು ಪುಟಗಳಲ್ಲಿ ಮುದ್ರಣ ಪ್ರಾರಂಭಿಸಿತು.

1983

1983ರಲ್ಲಿ ಬಿ.ಬಿ. ಗಾರ್ಡನ್ ರಸ್ತೆಯ ಮನೆಯೊಂದರ ಕಾರ್ ಶೆಡ್ ಪತ್ರಿಕೆಯ ಕಾರ್ಯಾಲಯವಾಯಿತು. ಇಲ್ಲಿ ಸಂಪಾದಕೀಯ ಹಾಗೂ ಮೊಳೆ ಜೋಡಿಸುವ ವಿಭಾಗಗಳು ಮಾತ್ರ ಇದ್ದವು. ಉಳಿದಂತೆ ಮುದಣ ಕಾರ್ಯ ಸಮೀಪದ ಬಸವೇಶ್ವರ ರಸ್ತೆಯಲ್ಲಿದ್ದ ಹಿರಿಯ ಪತ್ರಕರ್ತ ಎಸ್. ಪಟ್ಟಾಭಿರಾಮನ್ ಅವರ ಮಾಲೀಕತ್ವದ ನವಧ್ವನಿ ಪತ್ರಿಕೆ ಮುದ್ರಣಾಲಯದಲ್ಲಿ ನಡೆಯತೊಡಗಿತು.

1984

ಹಳ್ಳಿಗಳ್ಳಿಗಳಲ್ಲೂ ವಿತರಕರನ್ನು ನೇಮಿಸಿ ಅಂದಿನ ಅವಿಭಜಿತ ಮೈಸೂರು ಜಿಲ್ಲೆಯ (ಈಗಿನ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳು) ಎಲ್ಲ ತಾಲ್ಲೂಕು ಕೇಂದ್ರಗಳಲ್ಲದೆ ಹಳ್ಳಿಗಳ್ಳಿಗಳಿಗೂ ಪತ್ರಿಕೆಯನ್ನು ತಲುಪಿಸುವ ಪ್ರಯತ್ನ ನಡೆಯಿತು.

1987

ಪತ್ರಿಕೆ ಕಾರ್ಯಾಲಯವು ರಾಮಾನುಜ ರಸ್ತೆಯ 7 ನೇ ಕ್ರಾಸಿನ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

1988

ಆಫ್‌ ಸೆಟ್ ಮುದ್ರಣಯಂತ್ರವನ್ನೂ ತನ್ನದಾಗಿಸಿಕೊಂಡು ಪತ್ರಿಕೆ ನನ್ನ ಸ್ವರೂಪದಲ್ಲೂ ಬದಲಾವಣೆ ಮೂಡಿಸಿತು. ಎರಡು ಪುಟಗಳಿದ್ದ ಪತ್ರಿಕೆ ನಾಲ್ಕು ಪುಟಗಳಿಗೆ ಹಿಗ್ಗಿತು.

1989

ಬಹುವರ್ಣದಲ್ಲಿ ಏಕಕಾಲಕ್ಕೆ ಎಂಟು ಪುಟಗಳನ್ನು ಮುದ್ರಿಸಬಲ್ಲ ಅತ್ಯಾಧುನಿಕ ಯಂತ್ರ ಸ್ಥಾಪನೆಗೊಂಡಿತು. ಅದರ ಅಗತ್ಯಕ್ಕನುಗುಣವಾಗಿ ಕಂಪ್ಯೂಟರ್ ಗಳು ಬಂದವು. ಆವರೆಗೂ ಪತ್ರಿಕೆಯ ಜೀವನಾಡಿ ಗಳಾಗಿದ್ದ ಅಚ್ಚುಮೊಳೆಗಳ ಸ್ಥಾನವನ್ನು ಕಂಪ್ಯೂಟರ್ ಗಳು ಆವರಿಸಿಕೊಂಡವು.

1991

ಭಾನುವಾರದ ಸಾಪ್ತಾಹಿಕ ‘ಹಾಡುಪಾಡು’ ಹಾಗೂ ಶುಕ್ರವಾರದ ಸಿನಿಮಾ ಪುರವಣಿ ‘ಚಿತ್ರಮಂಜರಿ ಜನ್ಮ ತಳೆದವು.

1994

ಮಂಡ್ಯ ಆವೃತ್ತಿ ಪ್ರಾರಂಭ, ಕೊಡಗು ಆವೃತ್ತಿಯನ್ನೂ ಪ್ರಾರಂಭಿಸಲಾಯಿತು, ಚಾಮರಾಜನಗರ ಕಚೇರಿ ಪ್ರಾರಂಭ.

1999

ಸುಸಜ್ಜಿತವಾದ 12 ಪುಟಗಳನ್ನು ಒಮ್ಮೆಲೇ ಮುದ್ರಿಸಬಹುದಾದ ಪ್ರೆಸ್ ಯಂತ್ರವನ್ನು ಹೊಂದಿ ವಿಶಾಲವಾದ ಕಟ್ಟಡಕ್ಕೆ ಮುದ್ರಣಾಲಯ ಸ್ಥಳಾಂತರಗೊಂಡಿತು. ಬಣ್ಣದ ಮುಖಪುಟದೊಂದಿಗೆ 12 ಪುಟಗಳ ಆಕರ್ಷಕ ವಿನ್ಯಾಸದೊಂದಿಗೆ ಮುದ್ರಣವಾಗಲು ಪ್ರಾರಂಭವಾಯಿತು.

2000

ಪತ್ರಿಕೆಯ ಪ್ರಸಾರ ಸಂಖ್ಯೆ 80,000 ದಾಟ ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ (ಎಬಿಸಿ) ನಿಂದ ಮನ್ನಣೆ ಪಡೆಯಿತು. ರಾಜ್ಯ ಮಟ್ಟದ ಪತ್ರಿಕೆಗಳಿಗಷ್ಟೇ ಸೀಮಿತವಾಗಿದ್ದ ಎಬಿಸಿ ಪ್ರಮಾಣ ಪತ್ರವನ್ನು ಪಡೆದ ಮೊದಲ ಪ್ರಾದೇಶಿಕ ಪತ್ರಿಕೆ ಎಂಬ ದಾಖಲೆಯೂ “ಆಂದೋಲನ’ ದ್ದಾಯಿತು.

2014

ಮೂರು ಟವರ್‌ಗಳನ್ನು ಹೊಂದಿದ ಸಿಟಿ ಲೈನ್ ಯಂತ್ರವನ್ನು ಹೊಂದಿ ಮತ್ತಷ್ಟು ಆಕರ್ಷಕ ವಿನ್ಯಾಸದೊಂದಿಗೆ ಮೂಡಿಬರ ಲಾರಂಭಿಸಿತು.

2018

ಕೇವಲ ರಾಜ್ಯ ಮಟ್ಟದ ಪತ್ರಿಕೆಗಳಿಗೆ ಮಾತ್ರವೇ ಸೀಮಿತವಾಗಿದ್ದ ಪ್ಲಾಪ್ ವಿಶೇಷ ಮಟಗಳ ಪರಿಕಲ್ಪನೆಯನ್ನು ಪ್ರಾದೇಶಿಕ ಪತ್ರಿಕೆಯಾಗಿ ‘ಆಂದೋಲನ’ವೇ ಮೊದಲ ಬಾರಿಗೆ ಹೊರತಂದಿದ್ದು ಹೆಮ್ಮೆಯ ಸಂಗತಿ

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ