ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಶಿವಕುಮಾರ ಅವರನು ರವಿಕೋಟಿ ಮತ್ತು ಶೀತಲ ಕೋಟಿ ಅವರು ಸ್ವಾಗತಿಸಿದ ಕ್ಷಣ
ಪೂರ್ಣಿಮಾ ಪ್ರಸಾದ ಅವರನ್ನು ವ್ಯವಸ್ಥಾಪಕ ಸಂಪಾದಕರಾದ ರಶ್ಮಿ ಕೋಟಿ ಅವರು ಸ್ವಾಗತಿಸಿದರು.
ಸಮಾರಂಭಕ್ಕೆ ಆಗಮಿಸಿದ್ದ ಪ.ಮಲ್ಲೇಶ್, ಹೊಸಕೋಟೆ ಬಸವರಾಜು, ಜನಾರ್ಧನ್ ಜನ್ನಿ ಅವರನ್ನು ರವಿಕೋಟಿ ಸ್ವಾಗತಿಸಿದರು. ಶೀತಲ್ ಕೋಟಿ, ಶ್ರೀಧರ್ ಭಟ್ ಅವರು ಜೊತೆಗಿದ್ದರು
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಜೊತೆಯಾಗಿ ತಮ್ಮ ಆಸನಗಳಿಗೆ ಮರಳಿದ ಕ್ಷಣ
ಶಿವರಾಜಕುಮಾರ್ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರು ಪರಸ್ಪರ ಕುಶಲೋಪರಿ ವಿಚಾರಿಸಿದ ಸಂದರ್ಭ
೧೧೪ ಪುಟಗಳ ಮುದ್ರಣದ ಹಿಂದಿದೆ ತಂಡದ ಪರಿಶ್ರಮ. ‘ಆಂದೋಲನ ೫೦ರ ಸಾರ್ಥಕ ಪಯಣ’ದ ೧೧೪ ವಿಶೇಷ ಸಂಚಿಕೆಯನ್ನು ಸತತ ೨ ದಿನಗಳ ಕಾಲ ಹಗಲುರಾತ್ರಿ ಶ್ರಮವಹಿಸಿ ಮುದ್ರಣ ಮಾಡುವಲ್ಲಿ ಮುದ್ರಣ ವಿಭಾಗದ ಸಿಬ್ಬಂದಿಯ ಅವಿರತ ಶ್ರಮ ಅಡಗಿದೆ. ತಿಂಗಳುಗಟ್ಟಲೆ ಪುಟಗಳನ್ನು ವಿನ್ಯಾಸ ಮಾಡಿದ್ದನ್ನು ಬರೋಬ್ಬರಿ ಎರಡು ದಿನಗಳ ಕಾಲ ಹಗಲುರಾತ್ರಿ ಕಷ್ಟಪಟ್ಟು ಮುದ್ರಿಸಿದವರು ಈ ಚಿತ್ರದಲ್ಲಿದ್ದಾರೆ. ಮಹದೇವ್, ಜಗನ್ನಾಥ್, ಮೋಹನ್ಕುಮಾರ್, ದೇವಾನಂದ್, ಉಚ್ರಂಗಪ್ಪ, ಆನಂದ್, ಮಾದೇಶ್, ಪ್ರಭುದೇವಸ್ವಾಮಿ, ವಿಷ್ಣು, ಜೀವನ್, ಸೂರ್ಯನಾರಾಯಣ್ ಅವರ ಶ್ರಮ ಸ್ಮರಣೀಯ. ಅದೇ ರೀತಿ ಈ ತಂಡಕ್ಕೆ ಪೂರಕವಾಗಿ ಹಗಲುರಾತ್ರಿ ದುಡಿದ ಮಹದೇವಸ್ವಾಮಿ, ಮಂಜೇಶ್, ಮಹೇಶ್, ಮೊಹಮ್ಮದ್ ಶಾರೀಖ್ ಅವರೊಟ್ಟಿಗೆ ತಾತ್ಕಲಿಕವಾಗಿ ೩೦ ಮಂದಿ ಕೈಜೋಡಿಸಿ ಸಹೃದಯಿ ಓದುಗರಿಗೆ ಬುಧವಾರ ಬೆಳಿಗ್ಗೆ ಸರಿಯಾದ ಸಮಯಕ್ಕೆ ಪತ್ರಿಕೆ ತಲುಪಿಸಿದ್ದಾರೆ
ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ, ಮಹಾಲಕ್ಷ್ಮಿ ಸ್ವೀಟ್ಸ್ ಮಾಲೀಕ ಶಿವಕುಮಾರ್, ಎ.ಪಿ.ನಾಗೇಶ್, ರಾಜಾ ಶೈಲೇಶ್ ಚಂದ್ರಗುಪ್ತ, ಡಾ.ಕೆ.ಮಹದೇವ್ ಮುಂತಾದವರು ಪಾಲ್ಗೊಂಡಿದ್ದರು
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಿವರಾಜಕುಮಾರ್ ಅವರು ಆಂದೋಲನ ಸೆಲ್ಫಿ ಪಾಯಿಂಟ್ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡರು.