ಬೆಂಗಳೂರು : ನೀರಾವರಿ ಇಲಾಖೆಯಲ್ಲಿ 400 ಜನರ ನೇಮಕಕ್ಕೆ ಅನುಮತಿ ನೀಡಿದ್ದು, 300 ಜನ ಅಸಿಸ್ಟೆಂಟ್ ಇಂಜಿನಿಯರ್, 100 ಜನ ಜ್ಯೂನಿಯರ್ ಇಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಚಿವ ಗೋವಿಂದ ಕಾರಜೋಳ ಅವರು ಹೇಳಿದರು.
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ ಅನೇಕ ವರ್ಷದಿಂದ ಅಸಿಸ್ಟೆಂಟ್ ಇಂಜಿನಿಯರ್, ಜ್ಯೂನಿಯರ್ ಇಂಜಿನಿಯರ್ ನೇಮಕ ಆಗಿಲ್ಲ. ಸಾವಿರ ಜನರ ಹುದ್ದೆ ನೇಮಕ ಆಗಬೇಕಿದೆ ಎಂದು ತಿಳಿಸಿದರು.
ವಿಳಂಬದ ಪರಿಣಾಮ ಕಾಮಗಾರಿ ವಿಳಂಭ ಆಗುತ್ತಿದೆ. ಮುಖ್ಯಮಂತ್ರಿ ಹಾಗೂ ಹಣಕಾಸು ಇಲಾಖೆ ಜೊತೆ ಮಾತನಾಡಿದ್ದೇನೆ. 400 ಜನರ ನೇಮಕಕ್ಕೆ ಅನುಮತಿ ನೀಡಿದ್ದಾರೆ. 300 ಜನ ಅಸಿಸ್ಟೆಂಟ್ ಇಂಜಿನಿಯರ್, ನೂರು ಜನ ಜ್ಯೂನಿಯರ್ ಇಂಜಿನಿಯರ್ ನೇಮಕ ಮಾಡಿಕೊಳ್ಳಲಾಗುವುದು. ಸಿವಿಲ್ ಇಂಜಿನಿಯರ್ ಗಳ ಕಾಂಟ್ರಾಕ್ಟ್ ನೇಮಕ ಮಾಡಿಕೊಳ್ತಿದ್ದೇವೆ.
ಹಣಕಾಸು ಇಲಾಖೆ ಒಪ್ಪಿಗೆ ಪಡೆದು ಅಧಿಸೂಚನೆ ಮಾಡಿಕೊಳ್ಳಬೇಕು.ಇದು ಕಾಂಟ್ರಾಕ್ಟ್ ನೇಮಕ .ಇದನ್ನು
ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು.ಮೆರಿಟ್ ಮತ್ತು ರೋಸ್ಟರ್ ಆಧಾರದ ಮೇಲೆ ನೇಮಕ ಮಾಡಲಾಗುವುದು ಎಂದರು. ಮಹದಾಯಿ ನೀರು ಹಂಚಿಕೆಯಲ್ಲಿ, ನಮ್ಮ ಪಾಲಿನ ನೀರನ್ನ ಪಡೆದೇ ಪಡೆಯುತ್ತೇವೆ ಎಂದ ಗೋವಿಂದ ಕಾರಜೋಳ ಅವರು ಹೇಳಿದರು.