Mysore
19
broken clouds

Social Media

ಭಾನುವಾರ, 25 ಜನವರಿ 2026
Light
Dark

ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಯು.ಜಿ.ಸಿ ಮಾನ್ಯತೆ

ಬೆಂಗಳೂರು : ನೂತನ ಮಂಡ್ಯ ಕೃಷಿ ವಿಶ್ವವಿದ್ಯಾಲಯಕ್ಕೆ ಇದೀಗ ಮತ್ತೊಂದು ಹಿರಿಮೆ ದೊರೆತಿದೆ.

ಮಂಡ್ಯ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರ ಕಾಳಜಿ ಹಾಗು ಶ್ರಮದ ಹಿನ್ನಲೆ ಮಂಡ್ಯ ಕೃಷಿ ವಿಶ್ವ ವಿದ್ಯಾನಿಲಯ ಪ್ರಾರಂಭವಾದ ಕೆಲವೇ ದಿನಗಳಲ್ಲಿ ಯು.ಜಿ.ಸಿ ಮಾನ್ಯತೆ ದೊರಕಿರುವುದು ಮತ್ತೋಂದು ಹಿರಿಮೆಗೆ ಸಾಕ್ಷಿಯಾಗಿದೆ.

ಯು.ಜಿ.ಸಿ‌ ಅಧಿನಿಯಮದ ಪ್ರಕಾರ, ರಾಷ್ಟ್ರದಲ್ಲಿ ಯು.ಜಿ.ಸಿ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳ ಪಟ್ಟಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಮಂಡ್ಯವನ್ನು ಸಹ ಅಧಿಕೃತವಾಗಿ ಸೇರಿಸಿ ನವೆಂಬರ್ 18 ರಂದು ಯು.ಜಿ.ಸಿ ಯು ಅಧಿಸೂಚನೆ ಹೊರಡಿಸಿದೆ.

ಈ ಅಧಿಸೂಚನೆಯಂತೆ ಇನ್ನೂ ಮುಂದೆ ವಿಶ್ವವಿದ್ಯಾಲಯ ನೀಡಲಿರುವ ಕೃಷಿ ಆಧಾರಿತ ಪದವಿಗಳಿಗೆ ಯು.ಜಿ.ಸಿ ಮಾನ್ಯತೆ ನೀಡಿದಂತಾಗುತ್ತದೆ..

ಕೃಷಿ ವಿ.ವಿ ಮಂಡ್ಯವು ತನ್ನ ಎಲ್ಲಾ ಶೈಕ್ಷಣಿಕ, ಅಭಿವೃದ್ಧಿ, ಮಾನವ ಸಂಪನ್ಮೂಲ ಹಾಗೂ ಮೂಲಸೌಕರ್ಯಗಳ ನಿರ್ವಹಣೆಗೆ ಯು.ಜಿ.ಸಿಯ ಹಾಗೂ ICAR ನಿಯಮವಳಿ ಅನ್ವಯ ಹಾಗೂ ರಾಜ್ಯ ಸರ್ಕಾರದ ಅನುಮೋದನೆಯೊಂದಿಗೆ ತನ್ನ ಕಾರ್ಯವನ್ನು ನಿಭಾಯಿಸುವಂತಾಗುವುದು.

ಇದನ್ನೂ ಓದಿ:-ಅಧಿಕಾರ ಯಾರಿಗೂ ಶಾಶ್ವತವಲ್ಲ : ಚರ್ಚೆಗೆ ಗ್ರಾಸವಾದ ಡಿಕೆಶಿ ಮಾರ್ಮಿಕ ಮಾತು

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ಯು.ಜಿ.ಸಿ ಅಧಿಸೂಚನೆಯೂ ವೈಬ್ ಸೈಟ್ ಲಿಂಕ್ ನಲ್ಲಿ https://www.ugc.gov.in ಲಭ್ಯವಿದ್ದು ಸಾರ್ವಜನಿಕರು ಇದನ್ನು ಗಮನಿಸಬಹುದು.

ಈ ಅಧಿಸೂಚನೆಯಂತೆ ಕೃಷಿ ವಿ.ವಿಯು ತನ್ನ ವ್ಯಾಪ್ತಿಯಲ್ಲಿ ಮಾತ್ರ ತನ್ನ ಶೈಕ್ಷಣಿಕ ಕಾರ್ಯಕ್ರಮವನ್ನು ನಡೆಸಬೇಕಾಗುತ್ತದೆ. ಶೈಕ್ಷಣಿಕ ಹಾಗೂ ಯಾವುದೇ ದೂರಸಂಪರ್ಕ ಕಾರ್ಯಕ್ರಮಗಳನ್ನು ಪ್ರಾರಂಭಿಸಬೇಕಾದಾಗ ಯುಜಿಸಿಯ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಇದರಂತೆ ಕೃಷಿ ವಿವಿಯೂ ಮುಂದಿನ ದಿನಗಳಲ್ಲಿ ನ್ಯಾಕ್ ಅಕ್ರಿಡಿಟೇಶನ್ ಗೆ ಅರ್ಹವಾಗಿದ್ದು ಅದನ್ನು ಪಡೆದುಕೊಳ್ಳಬೇಕಾಗುತ್ತದೆ.

ಇನ್ನೂ ಆಡಳಿತಭವನ ನಿರ್ಮಾಣಕ್ಕೆ 70 ಕೋಟಿ ಹಣ ಬಿಡುಗಡೆಯಾಗಿದ್ದು, ಶೀಘ್ರದಲ್ಲೆ ಮಂಡ್ಯದ ವಿ.ಸಿ.ಫಾರಂ ನಲ್ಲಿ ಆಡಳಿತಭವನ ನಿರ್ಮಾಣಕ್ಕೆ ಚಾಲನೆ ಸಿಗಲಿದೆ.

ಮುಂದಿನ ಡಿಸೆಂಬರ್ 5 ರಿಂದ 7 ರವರೆಗೆ ಮೂರು ದಿನಗಳ ಕಾಲ ಮಂಡ್ಯ ಕೃಷಿ ವಿವಿಯ ವಿ‌.ಸಿ.ಫಾರಂನಲ್ಲಿ ಕೃಷಿ ಮೇಳ ನಡೆಯಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮೇಳವನ್ನು ಉದ್ಘಾಟಿಸಲಿದ್ದಾರೆ.

Tags:
error: Content is protected !!