Mysore
28
overcast clouds

Social Media

ಬುಧವಾರ, 17 ಜೂನ್ 2026
Light
Dark

ಅರಣ್ಯಾಧಿಕಾರಿ ಕಚೇರಿಯಲ್ಲಿ ಆದಿವಾಸಿ ವ್ಯಕ್ತಿ ಸಾವು : ವಿಚಾರಣೆ ವೇಳೆ ಹೊಡೆದು ಕೊಂದ ಅರೋಪ

ಮೈಸೂರು : ಹೆಚ್‌ ಡಿ ಕೋಟೆಯ ಅರಣ್ಯಾಧಿಕಾರಿ ಕಚೇರಿಯಲ್ಲಿ ಆದಿವಾಸಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಜೇನುಕುರುಬ ಸಮುದಾಯಕ್ಕೆ ಸೇರಿದ ಕರಿಯಪ್ಪ ಎಂಬ ವ್ಯಕ್ತಿಯೇ ಸಾವಿಗೀಡಾದವರು.ಇವರು ಜಿಂಕೆ ಮಾಂಸವನ್ನು ಮಾರಾಟ ಮಾಡಿದರೆಂದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದರೆ ಈತ ಬಂಧನಕ್ಕೊಳಗಾಗಿದ್ದ ಸಂದರ್ಭದಲ್ಲೇ ಸಾವಿಗೀಡಾಗಿದ್ದರಿಂದ ಸಾವಿನ ಕುರಿತು ಕುಟುಂಬಸ್ಥರು ಅನುಮಾನವನ್ನು ಹೊರಹಾಕಿದ್ದಾರೆ.

ಹೊಸಳ್ಳಿ ಹಾಡಿಯ ನಿವಾಸಿಯಾಗಿರುವ ಕರಿಯಪ್ಪ ಅವರನ್ನು ಕಳೆದ ಮೂರು ದಿನಗಳ ಹಿಂದ  ಜಿಂಕೆ ಮಾಂಸ ಮಾರಾಟ ಮಾಡಿದರೆಂದ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್‌ ಡಿ ಕೋಟೆ ತಾಲ್ಲೂಕಿನ ಎನ್‌ ಬೇಗೂರು ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಕರೆತಂದು ವಿಚಾರಣೆ ನಡೆಸಿ ಬಂಧಿಸಲಾಗಿತ್ತು. ಮಂಗಳವಾರ ತಡ ರಾತ್ರಿ ಕರಿಯಪ್ಪ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಕೂಡಲೇ ಅವರನ್ನು ಅರಣ್ಯಾಧಿಕಾರಿಗಳು ಮೈಸೂರಿನ ಕೆ ಆರ್‌ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ವೇಳೆಗ ಕರಿಯಪ್ಪ ನಿಧನರಾಗಿದ್ದಾರೆ. ಈ ಸಂಬಂಧ ಪೊಲೀಸಿನವರು ಆತನನ್ನು ವಿಚಾರಣೆಯ ನೆಪದಲ್ಲಿ ಹೊಡೆದು ಕೊಂದಿದ್ದಾರೆಂದು ಆತನ ತಾಯಿ ಮತ್ತು ಕುಟುಂಬದವರು ಆರೋಪಿಸಿದ್ದಾರೆ.

ಕರಿಯಪ್ಪ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿ ಕುಟುಂಬಸ್ಥರಿಗೆ ಒಪ್ಪಿಸಲಾಗಿದೆ. ಕರಿಯಪ್ಪ ಅವರ ತಲೆಗೆ ಏಟು ಬಿದ್ದಿದ್ದು ಇದರಿಂದಾಗಿಯೇ ಅವರು ಸಾಪನ್ನಪ್ಪಿದ್ದಾರೆ ಇದಕ್ಕೆ ಅರಣ್ಯಾಧಿಕಾರಿಗಳೇ ಕಾರಣವೆಂದು ಆರೋಪ ಮಾಡಿರುವ ಆತನ ಕುಟುಂಬದವರು ಶವವನ್ನು ವಲಯ ಅರಣ್ಯಾಧಿಕಾರಿ ಕಲಚೇರಿಯ ಮುಂದಿಟ್ಟು ಪ್ರತಿಭಟನೆಯನ್ನು ನಡೆಸಲು ಮುಂದಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!