Mysore
23
overcast clouds

Social Media

ಶನಿವಾರ, 20 ಜೂನ್ 2026
Light
Dark

ಆರಂಭದಲ್ಲೇ ಮಕ್ಕಳಲ್ಲಿನ ಕ್ಯಾನ್ಸರ್ ಪತ್ತೆ ಹಚ್ಚಿದರೆ ಗುಣಪಡಿಸಬಹುದು: ಡಾ.ಶ್ರೀನಿವಾಸ್

ಮೈಸೂರು: ಮಕ್ಕಳು ಸೇರಿದಂತೆ ಎಲ್ಲ ವೋಂಮಾನದವರಿಗೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ, ಆದರೆ ಮಕ್ಕಳಲ್ಲಿ ಕ್ಯಾನ್ಸರ್ ಬರುವುದು ಅಪರೂಪವಾಗಿದ್ದು, ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದು. ಪ್ರತಿ ವರ್ಷ ವಿಶ್ವದಾದ್ಯಂತ ಸುಮಾರು ೩ ಲಕ್ಷ ಮಕ್ಕಳಲ್ಲಿ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ ಎಂದು ಭಾರತ್ ಆಸ್ಪತ್ರೆ ಮತ್ತು ಆಂಕೋಲಾಜಿ ಸಂಸ್ಥೆಯ ಸಲಹೆಗಾರ, ವೈದ್ಯಕೀಯ ಆಂಕೋಲಾಜಿಸ್ಟ್ ಡಾ.ಕೆ.ಜಿ.ಶ್ರೀನಿವಾಸ್ ಹೇಳಿದರು.

ಭಾರತ್ ಆಸ್ಪತ್ರೆ ಮತ್ತು ಆಂಕೋಲಾಜಿ ಸಂಸ್ಥೆಯಲ್ಲಿ ಬಾಲ್ಯದ ಕ್ಯಾನ್ಸರ್ ಜಾಗೃತಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದಲ್ಲಿ ಮಾತ್ರ ಪ್ರತಿ ವರ್ಷ ೧೫ ವರ್ಷಕ್ಕಿಂತ ಕಡಿಮೆ ವಯಸ್ಸಿನ ೫೦,೦೦೦ಕ್ಕೂ ಹೆಚ್ಚು ಬಾಲ್ಯದ ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹೇಳಿದರು.

ಮಕ್ಕಳಲ್ಲೂ ೧೦ಕ್ಕೂ ಹೆಚ್ಚು ರೀತಿಯ ಕ್ಯಾನ್ಸರ್‌ಗಳು ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ತೀವ್ರವಾದ ಲ್ಯುಕೇಮಿಯಾ, ಬ್ರೈನ್ ಟ್ಯೂಮರ್, ಲಿಂಫೋಮಾ, ನ್ಯೂರೋಬ್ಲಾಸ್ಟೊಮಾ, ರೆಟಿನೋಬ್ಲಾಸ್ಟೊಮಾ ಮತ್ತು ಮೃದು ಅಂಗಾಂಶದ ಸಾರ್ಕೋಮಾಗಳು ಸೇರಿವೆ. ಅವುಗಳಲ್ಲಿ ರಕ್ತದ ಕ್ಯಾನ್ಸರ್ ಅಥವಾ ಲ್ಯುಕೇಮಿಯಾವು ೧ರಿಂದ ೧೦ ವರ್ಷ ವಯಸ್ಸಿನ ಮಕ್ಕಳಲ್ಲಿ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಆಗಿದೆ, ಇದಕ್ಕೆ ಆರಂಭಿಕ ಹಂತದ ಚಿಕಿತ್ಸೆಯ ಅಗತ್ಯವಿದೆ. ಮೊದಲೇ ಕಾಯಿಲೆ ಪತ್ತೆ ಹಚ್ಚಿ ವಿಶೇಷ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಿದರೆ ಗುಣಪಡಿಸಬಹುದಾಗಿದೆ. ಮಕ್ಕಳಲ್ಲಿನ ಶೇ.೭೦ರಷ್ಟು ಕ್ಯಾನ್ಸರ್ ಪ್ರಕರಣಗಳನ್ನು ಗುಣಪಡಿಸಬಹುದು ಎಂದು ಹೇಳಿದರು.
ಒಂದು ತಿಂಗಳಿಗಿಂತ ಹೆಚ್ಚು ಕಾಲ ಜ್ವರ ಮತ್ತು ಮೂಳೆಗಳಲ್ಲಿ ನೋವು ಮತ್ತು ಸಾಮಾನ್ಯ ವೈರಲ್ ಕಾಯಿಲೆ, ದೌರ್ಬಲ್ಯ, ರಕ್ತಸ್ರಾವ, ಅಸಾಮಾನ್ಯ ಗಡ್ಡೆ, ಊತ, ದೇಹದ ಒಂದು ಭಾಗದಲ್ಲಿ ನೋವು, ಆಗಾಗ್ಗೆ ತಲೆನೋವು, ವಾಂತಿ ಮಕ್ಕಳು ನಿರಂತರವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ ಅದು ಕ್ಯಾನ್ಸರ್‌ನ ಲಕ್ಷಣವಾಗಿದೆ, ಇದನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಅಗತ್ಯವಿರುತ್ತದೆ ಎಂದು ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!