Mysore
32
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಕಬಿನಿ ಪ್ರವಾಸಿಗರಿದ್ದ ಜೀಪ್ ಮೇಲೆ ಕಾಡಾನೆ ದಾಳಿ

ಮೈಸೂರು: ಎಚ್.ಡಿ. ಕೋಟೆಯ ಕಬಿನಿ ಹಿನ್ನೀರು ಪ್ರದೇಶದ ಸಫಾರಿ ಹಾದಿಯಲ್ಲಿ ಸಲಗವೊಂದು ಪ್ರವಾಸಿಗರ ವಾಹನವನ್ನು ಅಟ್ಟಿಸಿಕೊಂಡು ಬರುತ್ತಿರುವ ಘಟನೆ ವೈರಲ್ ಆಗಿದೆ.

ಗುರುವಾರ ಬೆಳಗ್ಗಿನ ಸಫಾರಿ ವೇಳೆ ಈ ಘಟನೆ ನಡೆದಿದೆ. ಜಂಗಲ್ ಲಾಡ್ಜಸ್ಗೆ ಸೇರಿದ ಈ  ವಾಹನದ ಚಾಲಕ ಪ್ರಕಾಶ್ ಅನುಭವಿಯಾಗಿದ್ದರಿಂದ ಸಮಯ ಪ್ರಜ್ಞೆ ಮೆರೆದು ಚಾಕಚಕ್ಯತೆಯಿಂದ ವಾಹನ ಚಲಾಯಿಸಿ ಅಪಾಯದಿಂದ ಪಾರಾಗಿದ್ದಾರೆ.

ಯಾವುದೋ ಕಾರಣಕ್ಕೆ ಕೋಪಗೊಂಡ ಸಲಗವು ಸಫಾರಿ ಹಾದಿಯಲ್ಲಿ ಬರುತ್ತಿದ್ದ ಜೀಪಿನ ಮೇಲೆ ದಾಳಿ ಮಾಡಲು ಮುಂದಾಗಿದೆ. ಮುಂದಿನಿಂದ ಅಟ್ಟಿಸಿಕೊಂಡು ಬರುತ್ತಿದ್ದ ಸಲಗವನ್ನುಕಂಡ ಚಾಲಕ ರಿವರ್ಸ್ ಡ್ರೈವ್ ಮಾಡಿಕೊಂಡು ಪಾರಾಗುವ ಪ್ರಯತ್ನ ನಡೆಸಿದ್ದಾರೆ.

ಸುಮಾರು 50-60 ಮೀಟರ್ ಗಳವರೆಗೆ ಸಲಗವು ಜೀಪನ್ನು ಅಟ್ಟಿಸಿಕೊಂಡು ಬಂದಿದೆ. ಕೊನೆಯಲ್ಲಿ  ಹಿಂದಕ್ಕೆ ಚಲಿಸಲಾಗದೆ ನಿಂತ ವಾಹನದ ಮೇಲೆ ದಾಳಿ ಮಾಡದೆ ಸಲಗ ಕಾಡಿನತ್ತ ಓಡಿ ಹೋಗಿದೆ. ಸ್ವಲ್ಪದರಲ್ಲೇ ಪ್ರವಾಸಿಗರು ಅಪಾಯದಿಂದ ಪಾರಾಗಿದ್ದಾರೆ. ಜೀಪು ಚಾಲಕನ ದೈರ್ಯಕ್ಕೆ ಎಲ್ಲೆಡೆ ಪ್ರಶಂಶೆ ವ್ಯಕ್ತವಾಗಿದೆ. ಡಿ.ಬಿ.ಕುಪ್ಪೆ ಅರಣ್ಯ ವಲಯದಲ್ಲಿ ನಡೆದ ಈ ಘಟನೆಯನ್ನು ವಲಯ ಅರಣ್ಯಾಧಿಕಾರಿ ಸಿದ್ದರಾಜು ಮತ್ತು ಕಾರಾಪುರ ಜಂಗಲ್ ಲಾಡ್ಜಸ್ ವ್ಯವಸ್ಥಾಪಕ ಅನಿಕೇತನ್ ಈ ಘಟನೆಯನ್ನು ಖಚಿತಪಡಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!