ರಾಜ್ಯ ಸರ್ಕಾರದ ವತಿಯಿಂದ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದ ಹೆಸರಿನಲ್ಲಿ ಮೈಸೂರು ನಗರದ ಹಲವು ಪ್ರಮುಖ ರಸ್ತೆಗಳಲ್ಲಿ ಕಾಂಗ್ರೆಸ್ ಪಕ್ಷದ ರಾಜಕೀಯ ನಾಯಕರ ದೊಡ್ಡ ದೊಡ್ಡ ಫ್ಲೆಕ್ಸ್, ಬ್ಯಾನರ್ ಅಳವಡಿಸಿದ್ದನ್ನು ಗಮನಿಸಿದರೆ ಇದು ಸಂವಿಧಾನ ದಿನಾಚರಣೆಯೇ ಅಥವಾ ಫ್ಲೆಕ್ಸ್, ಬ್ಯಾನರ್ ಹಾಕಲು ನಡೆದ ಸಮಾರಂಭವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ಸಮಾರಂಭ ನಡೆಯುವ ಮೈದಾನದಲ್ಲಿ ಫ್ಲೆಕ್ಸ್, ಬ್ಯಾನರ್ಗಳನ್ನು ಹಾಕಿಕೊಳ್ಳಲಿ. ಆದರೆ ದಸರಾ ವೇಳೆ ರಸ್ತೆ, ವೃತ್ತಗಳಲ್ಲಿ ದೀಪಾಲಂಕಾರ ಮಾಡುವಂತೆ ಫ್ಲೆಕ್ಸ್, ಬ್ಯಾನರ್ಗಳನ್ನು ಅಳವಡಿಸುವ ಅಗತ್ಯವೇನು? ಈ ಹಿಂದೆ ದಸರಾ ಮಹೋತ್ಸವದ ಅಂಗವಾಗಿ ಮೈಸೂರಿಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ಕಾರ್ಯಕರ್ತರಾಗಲಿ ಅಥವಾ ನಾಯಕರಾಗಲಿ ಸಾರ್ವಜನಿಕ ರಸ್ತೆಗಳಲ್ಲಿ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಆದರೆ ಸಂವಿಧಾನ ದಿನಾಚರಣೆ ಹೆಸರಿನಲ್ಲಿ ಹಿಂದಿನ ದಿನವೇ ರಾಜಕಾರಣಿಗಳ ಬೃಹತ್ ಫ್ಲೆಕ್ಸ್ , ಬ್ಯಾನರ್ಗಳನ್ನೇ ಹೆಚ್ಚಾಗಿ ರಾಜಜಿಸುವಂತೆ ನಗರದಲ್ಲಿ ಮಾಡಿರುವುದಕ್ಕೆ ಕ್ರಮವಿಲ್ಲವೇ…? ಸಂಬಂಧಪಟ್ಟ ಅಧಿಕಾರಿಗಳು ಮುಖ್ಯಮಂತ್ರಿಗಳ ಮಾತನ್ನು ಗೌರವಿಸಲು ಫ್ಲೆಕ್ಸ್, ಬ್ಯಾನರ್, ಅಳವಡಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು



