Mysore
27
broken clouds

Social Media

ಗುರುವಾರ, 26 ನವೆಂಬರ್ 2026
Light
Dark

ತಿತಿಮತಿ ಸಮೀಪ ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಹುತ್ತರಿ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಶೋಕ!

ಕೊಡಗು:  ಹುತ್ತರಿ ಹಬ್ಬದ ಬಳಿಕ ತೋಟಕ್ಕೆ ಕದಿರು ಕಟ್ಟಲು ತೆರಳಿದ್ದ ವ್ಯಕ್ತಿಯೊಬ್ಬರು ಕಾಡಾನೆ ದಾಳಿಗೆ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆಯ ತಿತಿಮತಿ ಸಮೀಪದ ಅಬ್ಬೂರು ತಾರಿಕಟ್ಟೆಯಲ್ಲಿ ಘಟನೆ ನಡೆದಿದೆ.

ಮೃತರನ್ನು 55 ವರ್ಷದ ಕೇಶವ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 7:30ರ ವೇಳೆಗೆ ತೋಟಕ್ಕೆ ತೆರಳಿದ್ದಾಗ, ಏಕಾಏಕಿ ಎದುರಾದ ಕಾಡಾನೆ ದಾಳಿ ನಡೆಸಿದೆ. ದಾಳಿಯಿಂದ ಕೇಶವ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಹುತ್ತರಿ ಹಬ್ಬದ ಸಂಭ್ರಮದಲ್ಲಿದ್ದ ಗ್ರಾಮದಲ್ಲಿ ಶೋಕ ಆವರಿಸಿದ್ದು, ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ.

Tags:
error: Content is protected !!