Mysore
27
scattered clouds

Social Media

ಬುಧವಾರ, 25 ನವೆಂಬರ್ 2026
Light
Dark

ಓದುಗರ ಪತ್ರ: ಜನಸಾಮಾನ್ಯರಿಗೂ ಸಂವಿಧಾನದ ಮಹತ್ವ ತಿಳಿಯಬೇಕು

ಓದುಗರ ಪತ್ರ

ನವೆಂಬರ್ ೨೬ರಂದು ಆಚರಿಸಲಾಗುವ ಸಂವಿಧಾನ ದಿನಾಚರಣೆ ಕೇವಲ ಸರ್ಕಾರ, ರಾಜಕಾರಣಿಗಳು, ಜನಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳಿಗೆ ಸೀಮಿತವಾಗಬಾರದು. ಕಟ್ಟಕಡೆಯ ಸಾಮಾನ್ಯ ನಾಗರಿಕನಿಗೂ ಸಂವಿಧಾನದ ಮಹತ್ವ ತಿಳಿಯಬೇಕು. ನಮಗೆ ಸಿಕ್ಕಿರುವ ಸಮಾನತೆ, ಸ್ವಾತಂತ್ರ್ಯ, ನ್ಯಾಯ ಮತ್ತು ಸ್ವಾಭಿಮಾನದ ಬದುಕಿಗೆ ಸಂವಿಧಾನವೇ ಅಡಿಪಾಯ ಎಂಬ ಅರಿವು ಮೂಡಬೇಕು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಂವಿಧಾನದ ಮೌಲ್ಯಗಳು ಪ್ರತಿಯೊಬ್ಬರ ಬದುಕಿನಲ್ಲಿ ಅಳವಡಿಕೆಯಾಗಬೇಕು. ಕೇವಲ ಭಾಷಣ, ಪ್ರತಿಜ್ಞೆ, ಪುಷ್ಪಾರ್ಚನೆಗೆ ಸೀಮಿತವಾಗದೆ ಹಳ್ಳಿಯಿಂದ ನಗರದವರೆಗೆ ಜನಜಾಗೃತಿ ಮೂಡಿಸಬೇಕು. ಸಂವಿಧಾನ ಕೆಲವರ ಅಧಿಕಾರದ ದಾಖಲೆಯಾಗದೆ, ಪ್ರತಿಯೊಬ್ಬ ಸಾಮಾನ್ಯನ ಬದುಕಿನ ಭರವಸೆಯಾಗಲಿ. ಸಂವಿಧಾನದ ಅರಿವು ಅರಮನೆಯಿಂದ ಗುಡಿಸಲಿನವರೆಗೆ ತಲುಪಲಿ.

-ಮಹದೇವ ಎಂ. ಕರಿಯನಪುರ, ಕೊಳ್ಳೇಗಾಲ ತಾ.

 

Tags:
error: Content is protected !!