Mysore
27
scattered clouds

Social Media

ಮಂಗಳವಾರ, 24 ನವೆಂಬರ್ 2026
Light
Dark

ಓದುಗರ ಪತ್ರ: ಹೋಟೆಲುಗಳಲ್ಲಿ ಬಾಟಲ್ ನೀರು ಖರೀದಿಸಲು ಬಲವಂತ ಸಲ್ಲದು

dgp murder case

ರಾಜ್ಯದ ಕೆಲವು ಹೋಟೆಲ್ಲುಗಳಲ್ಲಿ ಗ್ರಾಹಕರಿಗೆ ಕುಡಿಯಲು ನೀರು ಕೊಡದೇ ಬಾಟಲ್ ನೀರು ಖರೀದಿಸುವಂತೆ ಹೇಳುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಇಂತಹ ಪ್ರಕರಣವೊಂದರಲ್ಲಿ ಗ್ರಾಹಕರ ಆಯೋಗ, ಹೋಟೆಲ್‌ವೊಂದಕ್ಕೆ ೩೧,೦೦೦.೦೦ ರೂಪಾಯಿಗಳ ದಂಡ ವಿಧಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ.

ಹೋಟೆಲುಗಳಲ್ಲಿ ತಿಂಡಿ, ಊಟ ಬಯಸಿ ಬರುವವರಿಗೆ ಶುದ್ಧ ಕುಡಿಯುವ ನೀರನ್ನು ನೀಡುವುದು ಹಿಂದಿನಿಂದ ಬಂದಿರುವ ಪದ್ಧತಿಯಾಗಿದೆ. ಹೀಗಾಗಿ ಕುಡಿಯುವ ನೀರು ಕೊಡುವ ಬದಲು ಹಣ ನೀಡಿ ಬಾಟಲ್ ನೀರು ಖರೀದಿಸಿ ಎಂದು ಹೇಳುವುದು ಒಳ್ಳೆಯದಲ್ಲ.

-ಕೆ.ವಿ.ವಾಸು, ಮೈಸೂರು

Tags:
error: Content is protected !!