Mysore
25
mist

Social Media

ಶನಿವಾರ, 21 ನವೆಂಬರ್ 2026
Light
Dark

ಓದುಗರ ಪತ್ರ: ಆಶಾ ಕಾರ್ಯಕರ್ತೆಯರ ಶ್ರಮ ಸರ್ಕಾರ ಅರಿಯಲಿ

ತಮ್ಮ ಪ್ರಮುಖ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ಆಶಾ ಕಾರ್ಯಕರ್ತೆಯರು ಮುಷ್ಕರ ಮುಂದುವರಿಸಿರುವುದು ನೋವಿನ ವಿಚಾರವೇ ಸರಿ. ಹಲವಾರು ವರ್ಷಗಳಿಂದ ಇವರ ಮೇಲೆ ಕೆಲಸಗಳ ಹೊರೆ ಹೊರಿಸಿ ಸರ್ಕಾರ ದುಡಿಸಿಕೊಳ್ಳು ತ್ತಿದೆ. ಗ್ರಾಮೀಣ ಪ್ರದೇಶ ಗಳಲ್ಲಿ ಇವರು ಪ್ರಮುಖ ಆರೋಗ್ಯ ಕಾರ್ಯಕರ್ತರಾಗಿ, ಗರ್ಭಿಣಿಯರ ಆರೈಕೆಗಾಗಿ ಸಮಯದ ಪರಿವೇ ಇಲ್ಲದೆ ದುಡಿಯುತ್ತಿದ್ದಾರೆ.

ಆಶಾ ಕಾರ್ಯಕರ್ತೆಯರು ಮಾಸಿಕ ವೇತನ ೧೫ ಸಾವಿರರೂ. ಕೇಳುವುದರಲ್ಲಿ ಅರ್ಥವಿದೆ.ಒಬ್ಬ ಹೆಂಗಸು ದಿನದ ಕೂಲಿಗೆ ಹೋದರೂ ದಿನ ಕೂಲಿ ಪಡೆಯುವುದನ್ನು ಲೆಕ್ಕ ಹಾಕಿದರೆ ಆಶಾ ಕಾರ್ಯಕರ್ತೆಯರಿಗಿಂತ ಹೆಚ್ಚಾಗಿ ಸಿಗುತ್ತದೆ ಎಂಬುದು ಒಂದು ಅಂದಾಜು. ಹೀಗಿರಬೇಕಾದರೆ ತಿಂಗಳಿಗೆ ೧೫ ಸಾವಿರರೂ. ವೇತನ ಕೇಳುತ್ತಿರುವುದು ನ್ಯಾಯಯುತವಾಗಿದೆ.

ಸರ್ಕಾರವು ಆಶಾ ಕಾರ್ಯಕರ್ತೆಯರನ್ನು ಕೂಲಿ ಕಾರ್ಮಿಕರಿಗಿಂತಲೂ ಕಡೆಯಾಗಿ ಕಾಣುತ್ತಿದೆ ಎಂದು ಬೇಸರದಿಂದಲೇ ಹೇಳಬೇಕಾಗುತ್ತದೆ. ಇನ್ನಾದರೂ ಇವರಿಗೆ ಕನಿಷ್ಠ ಏನು ಸಿಗಬೇಕೋ ಅದನ್ನು ಕೊಡುವತ್ತ ಸರ್ಕಾರ ಮುಂದಾಗಲಿ.

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!