ನಂಜನಗೂಡು ತಾಲ್ಲೂಕು ಕೂಡ್ಲಾಪುರ ಗ್ರಾಮದ ರಸ್ತೆಯು ತೀರ ಹದಗೆಟ್ಟಿರುತ್ತದೆ. ಡಾಂಬರು ಇಲ್ಲದೆ ಕಲ್ಲುಮಣ್ಣುಗಳಿಂದ ಕೂಡಿದ್ದು ಸಂಚಾರ ದುರ್ಲಭವೆನಿಸಿದೆ. ಕಚ್ಚಾ ರಸ್ತೆಯಂತಿರುವ ಇಲ್ಲಿ ಎಲ್ಲ ರೀತಿಯ ವಾಹನಗಳೂ ಸಂಚರಿಸುತ್ತವೆ. ಇದರಿಂದ ದೂಳು ಯಾವ ರೀತಿ ಏಳುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಜತೆಗೆ ಈ ರಸ್ತೆ ಕಿರಿದಾಗಿದೆ.
ಈ ರಸ್ತೆ ಬದಿಯಲ್ಲಿ ಪರಿಶಿಷ್ಟ ಜಾತಿಯ ಸಾಕಷ್ಟು ಕುಟುಂಬಗಳು ವಾಸ ಮಾಡುತ್ತಿವೆ. ಈಗ ತುರ್ತಾಗಿ ಆಗಬೇಕಾಗಿರುವುದೆಂದರೆ ರಸ್ತೆ ಅಗಲೀಕರಣದ ಜತೆಗೆ ಡಾಂಬರು ಹಾಕುವುದು. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು. ಈ ಕ್ಷೇತ್ರದ ಶಾಸಕರು ಮನಸ್ಸು ಮಾಡಿದರೆ ಕೆಲಸ ಆಗುವುದು ಕಷ್ಟವೇನಲ್ಲ.
-ಕೆ.ಪಿ. ಬಸವಯ್ಯ, ಮೈಸೂರು





