Mysore
29
broken clouds

Social Media

ಬುಧವಾರ, 04 ನವೆಂಬರ್ 2026
Light
Dark

ಓದುಗರ ಪತ್ರ: ಕಾಫಿ/ಟೀ ದರ ೫ರೂ. ಹೆಚ್ಚಳ ಸರಿಯಲ್ಲ

dgp murder case

ನವೆಂಬರ್ ಒಂದರಿಂದ ರಾಜ್ಯ ಸರ್ಕಾರ ಪ್ರತಿ ಲೀಟರ್ ಹಾಲಿನ ದರವನ್ನು ಎಂಟು ರೂಪಾಯಿಗಳನ್ನು ಹೆಚ್ಚು ಮಾಡಿ, ಇದರಲ್ಲಿ ಏಳು ರೂಪಾಯಿಗಳನ್ನು ರೈತರಿಗೆ ನೀಡುವುದಾಗಿ ಹೇಳಿದೆ. ಪ್ರತಿ ಲೀಟರ್ ಹಾಲಿನ ಬೆಲೆ ಇಷ್ಟು ಹೆಚ್ಚಾಗಿರುವುದು ರಾಜ್ಯದ ಇತಿಹಾಸದ ಮೊದಲ ಬಾರಿಗೆ, ಅದರೂ ರೈತರಿಗೆ ಅನುಕೂಲವಾಗಬಹುದು ಎಂಬ ಒಂದೇ ಕಾರಣಕ್ಕೆ ಗ್ರಾಹಕರಾರೂ ಪ್ರತಿರೋಧ ವ್ಯಕ್ತಪಡಿಸಲಿಲ್ಲ, ಆದರೆ ಇದು ಹೆಚ್ಚು ಅನುಕೂಲವಾಗಿರುವುದು ಹೋಟೆಲ್ ನಡೆಸುವವರಿಗೆ.

ಒಂದು ಲೀಟರ್ ಹಾಲಿನಲ್ಲಿ ಕನಿಷ್ಠ ೧೦ ರಿಂದ ೧೨ ಲೋಟ ಕಾಫಿ/ಟೀ ಮಾಡಬಹುದು.ನವೆಂಬರ್ ಒಂದರಿಂದಲೇ ಸಣ್ಣಪುಟ್ಟ ಹೊಟೇಲ್‌ಗಳು ಸೇರಿದಂತೆ ಎಲ್ಲ ರೀತಿಯ ಹೋಟೆಲ್ ಮಾಲೀಕರು, ಒಂದು ಲೋಟ ಕಾಫಿ/ಟೀ ಬೆಲೆಯನ್ನು ಐದು ರೂಪಾಯಿಗೆ ಹೆಚ್ಚಿಸುವ ಮೂಲಕ ಕಾಫಿ/ ಟೀ ಪ್ರಿಯರಿಗೆ ಬರೆಹಾಕಿದ್ದಾರೆ.

ಇದೊಂದು ಹೋಟೆಲ್ ಮಾಲೀಕರ ಹಗಲು ದರೋಡೆ ಎನ್ನದೇ ವಿಧಿಯಿಲ್ಲ. ಹಾಲಿನ ಬೆಲೆಯೊಂದನ್ನೇ ಬಂಡವಾಳ ಮಾಡಿಕೊಂಡು ಪ್ರತಿ ಲೋಟ ಕಾಫಿ /ಟೀ ಗೆ, ಐದು ರೂಪಾಯಿ ಹೆಚ್ಚು ಮಾಡಿರುವುದು ಒಂದು ರೀತಿಯಲ್ಲಿ ಗ್ರಾಹಕರನ್ನು ಶೋಷಣೆ ಮಾಡಿದಂತೆ. ಗ್ರಾಹಕರ ಹಿತದೃಷ್ಟಿಯಿಂದ ಹೋಟೆಲ್ ಮಾಲೀಕರು ಇದನ್ನು ಪರಿಷ್ಕರಿಸಬೇಕು, ಯಾವುದೇ ಬೆಲೆ ಏರಿಕೆಯ, ಬಿಸಿ ತಕ್ಷಣವೇ ತಟ್ಟುವುದು ಮಧ್ಯಮ ವರ್ಗದ ಜನರಿಗೆ ಅಲ್ಲವೇ?

-ಬೂಕನಕೆರೆ ವಿಜೇಂದ್ರ, ಮೈಸೂರು

Tags:
error: Content is protected !!