Mysore
29
broken clouds

Social Media

ಬುಧವಾರ, 04 ನವೆಂಬರ್ 2026
Light
Dark

ಓದುಗರ ಪತ್ರ: ಈ ವಿದ್ಯಾರ್ಥಿನಿಯರ ಸಂಕಷ್ಟಕ್ಕೆ ಸ್ಪಂದಿಸಿ

ಓದುಗರ ಪತ್ರ

ಮೈಸೂರಿನ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಗರದ ಹೊರಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಪ್ರತಿನಿತ್ಯ ಕಾಲೇಜಿಗೆ ತೆರಳಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಅಕ್ಕಪಕ್ಕದ ಊರುಗಳಿಂದ ಬರುವ ವಿದ್ಯಾರ್ಥಿನಿಯರು ಜನದಟ್ಟಣೆಯ ಬಸ್‌ಗಳಲ್ಲಿ ಪ್ರಯಾಣಿಸಿ, ಮಾನಸ ಗಂಗೋತ್ರಿಯ ತಿಪ್ಪೇಸ್ವಾಮಿ ವೃತ್ತದ ಬಳಿ ಇಳಿಯಬೇಕಾಗಿದೆ. ಅಲ್ಲಿಂದ ಕಾಲೇಜು ಸುಮಾರು ಎರಡು-ಮೂರು ಕಿಲೋ ಮೀಟರ್ ದೂರದಲ್ಲಿರುವುದರಿಂದ ಮಳೆ, ಬಿಸಿಲೆನ್ನದೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಇದೆ.

ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿನಿಯರು ಬೆಳಿಗ್ಗೆಯೇ ಮನೆಯಿಂದ ಹೊರಡಬೇಕಾಗುತ್ತದೆ. ಕೆಲವೊಮ್ಮೆ ಸಮಯದ ಅಭಾವದಿಂದ ಅಲ್ಪಸ್ವಲ್ಪ ಉಪಾಹಾರ ತಿಂದು ಬರುವುದರಿಂದ ದೈಹಿಕ ಆಯಾಸ ಉಂಟಾಗುವ ಸಾಧ್ಯತೆಯಿದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕಾಲೇಜು ಆಡಳಿತ ಮಂಡಳಿ, ಸ್ಥಳೀಯ ಶಾಸಕರು ಹಾಗೂ ಸಂಸದರು ಕಾಳಜಿ ವಹಿಸಬೇಕು. ಸಂಬಂಧಪಟ್ಟ ಸಾರಿಗೆ ಸಂಸ್ಥೆಯ ಸಹಯೋಗದೊಂದಿಗೆ, ನಿಯಮಾನುಸಾರ ಲಭ್ಯವಿರುವ ಅಭಿವೃದ್ಧಿ ನಿಧಿಯ ನೆರವು ಪಡೆದು ತಿಪ್ಪೇಸ್ವಾಮಿ ವೃತ್ತದ ಬಳಿ ಇಳಿಯುವ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತೆ ನೇರ ಬಸ್ ವ್ಯವಸ್ಥೆ ಮಾಡಿದರೆ ಅವರಿಗೆ ಬಹಳಷ್ಟು ಅನುಕೂಲವಾಗಲಿದೆ.

-ಬಿ.ಗಣೇಶ್, ಮೈಸೂರು

Tags:
error: Content is protected !!