Mysore
30
clear sky

Social Media

ಶನಿವಾರ, 31 ಅಕ್ಟೋಬರ್ 2026
Light
Dark

ಓದುಗರ ಪತ್ರ: ಇಂತಹವರನ್ನು ಸರ್ಕಾರ ಗೌರವಿಸಬೇಕು

ಓದುಗರ ಪತ್ರ

ಮೈಸೂರು ನಗರದ, ಪ್ರತಿಷ್ಠಿತ ಔಷಧಿ ಸಂಸ್ಥೆಯಾದ ರಘುಲಾಲ್ ಅಂಡ್ ಕಂಪೆನಿಯ ಮಾಲೀಕರಾದ ರಾಘವನ್ ಅವರು ಮೈಸೂರು ನಗರವನ್ನು ಹಸಿರೀಕರಣ ಮಾಡಲು ಮೈಸೂರಿನ ಪ್ರಮುಖ ರಸ್ತೆಗಳು, ಖಾಲಿ ಜಗಗಳು ಉದ್ಯಾನವನಗಳಲ್ಲಿ ಸುಮಾರು ಒಂದು ಲಕ್ಷದಷ್ಟು ಗಿಡಗಳನ್ನು ನೆಟ್ಟು, ಅವಕ್ಕೆ ಟ್ರೀ ಗಾರ್ಡ್‌ಗಳನ್ನು ಹಾಕಿ, ಬೇಸಿಗೆಯಲ್ಲಿ ಟ್ರಾಕ್ಟರ್ ಗಳಿಂದ ನೀರು ಹಾಕಿ ಪೋಷಿಸುತ್ತಿದ್ದಾರೆ.

ಅಲ್ಲದೆ ಮೈಸೂರಿನ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವ ಸಾವಿರಾರು ಬಡ ವರ್ಗದ ವ್ಯಾಪಾರಿಗಳಿಗೆ ನೆರವು ನೀಡಿ, ನೆರಳಿಗಾಗಿ ಕ್ಯಾನೋಪಿಗಳನ್ನು ನೀಡಿದ್ದಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಐದು ವರ್ಷಗಳ ಹಿಂದೆ ದೇಶದಲ್ಲಿ ಕಾಣಿಸಿಕೊಂಡ, ಮಾರಣಾಂತಿಕ ಕೋವಿಡ್ ಸಂದರ್ಭದಲ್ಲಿ ಸುಮಾರು ಒಂದು ಕೋಟಿರೂ.ಗೂ ಹೆಚ್ಚು ಬೆಲೆಬಾಳುವ ಔಷಧಿಗಳು ಮತ್ತು ಆಕ್ಸಿಜನ್ ಸಿಲಿಂಡರ್‌ಗಳನ್ನು ಉಚಿತವಾಗಿ ಜಿಡಳಿತಕ್ಕೆ ಸ್ವಯಂ ಪ್ರೇರಣೆಯಿಂದ ನೀಡಿ ಕೊಡುಗೈ ದಾನಿ ಎನಿಸಿದ್ದಾರೆ. ಇವತ್ತಿಗೂ ಪ್ರತಿ ದಿನವೂ ನೂರಾರು ಬಡ ವರ್ಗದ ರೋಗಿಗಳಿಗೆ ಸಾವಿರಾರು ರೂಪಾಯಿಗಳ ಔಷಧಿಗಳನ್ನು ಉಚಿತವಾಗಿ ನೀಡುತ್ತಾ ಬಂದಿದ್ದಾರೆ. ಇಂತಹ ಸಮಾಜ ಸೇವಕರನ್ನು ಗುರುತಿಸಿ ಗೌರವಿಸುವುದು ರಾಜ್ಯ ಸರ್ಕಾರದ ಕರ್ತವ್ಯವೆಂದೇ ಹೇಳಬಹುದು.

-ಬೂಕನಕೆರೆ ವಿಜೇಂದ್ರ, ಮೈಸೂರು 

Tags:
error: Content is protected !!