ಮೈಸೂರು ಜಿಲ್ಲೆಯ ಎಚ್. ಡಿ. ಕೋಟೆ ತಾಲ್ಲೂಕು ವನಸಿರಿ ನಾಡು ಎಂದೇ ಪ್ರಸಿದ್ಧಿ ಪಡೆದಿದೆ. ಹಾಗೆ ಹಲವು ದೇವಾಲಯಗಳ ಬೀಡು, ಈ ತಾಲ್ಲೂಕಿನಲ್ಲಿ ಕಬಿನಿ ಜಲಾಶಯ, ನಗು ಜಲಾಶಯ, ತಾರಕ ಜಲಾಶಯ, ಹೆಬ್ಬಾಳ್ ಜಲಾಶಯಗಳಿವೆ. ಇಷ್ಟೆ ಜಲಾಶಯಗಳು ಇದ್ದರೂ ಎಚ್. ಡಿ. ಕೋಟೆ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ಮಕ್ಕಳು ತೊಂದರೆಪಡುವಂತಾಗಿದೆ.
ಈ ಬಸ್ಸು ನಿಲ್ದಾಣದಿಂದ ದಿನನಿತ್ಯ ವಿದ್ಯಾರ್ಥಿಗಳು ಸೇರಿ ಸಾಕಷ್ಟು ಮಂದಿ ಪರಸ್ಥಳಗಳಿಗೆ ಓಡಾಡುತ್ತಾರೆ. ಆದರೆ ಇಂತಹ ಸ್ಥಳದಲ್ಲಿ ಅದೂ ಈಗಿನ ಕಾಲದಲ್ಲಿ ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲವೆಂದರೆ ಅಚ್ಚರಿ ಜತೆಗೆ ಬೇಸರ ಮೂಡಿಸುತ್ತದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರೆ ಅನುಕೂಲವಾಗುತ್ತದೆ. ಬೇಸಿಗೆ ಶುರುವಾಗಲು ಸಾಕಷ್ಟು ಸಮಯವಿದ್ದರೂ ಈಗ ಕಂಡುಬರುತ್ತಿರುವ ಬಿಸಿಲು ಬೇಸಿಗೆಯನ್ನೂ ನೆನಪಿಸುತ್ತದೆ. ಹಾಗಾಗಿ ಆದಷ್ಟು ಬೇಗ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಆಗಬೇಕಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ ಗ್ರಾಮ, ಹೆಚ್. ಡಿ. ಕೋಟೆ ತಾಲ್ಲೂಕು



