Mysore
23
overcast clouds

Social Media

ಭಾನುವಾರ, 30 ಆಗಸ್ಟ್ 2026
Light
Dark

ಓದುಗರ ಪತ್ರ: ಈ ‘ಕೆಲಸ’ ಮುಂಚೆಯೇ ಆಗಬೇಕಿತ್ತು

ಓದುಗರ ಪತ್ರ

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರುಪಯೋಗ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡಿದ್ದಾರೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕೂಡ ಅವರು ರಾಜೀನಾಮೆ ನೀಡಿದ್ದರು. ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರೊಬ್ಬರು ಎರಡು ಬಾರಿ ರಾಜೀನಾಮೆ ನೀಡಿರುವುದು ಒಂದು ಅಪರೂಪದ ಪ್ರಕರಣವೆನ್ನಬಹುದು. ಅವರ ರಾಜೀನಾಮೆಗೆ ಒತ್ತಾಯಿಸಿ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಪಕ್ಷಗಳು ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನದಲ್ಲಿ ಸಾಕಷ್ಟು ಪ್ರತಿಭಟನೆ ನಡೆಸಿದ್ದವು. ನಾಗೇಂದ್ರರವರ ರಾಜೀನಾಮೆ ಯನ್ನು ಮುಖ್ಯಮಂತ್ರಿಗಳು ಆಗಲೇ ಪಡೆದಿದ್ದರೆ, ರಾಜ್ಯ ಸರ್ಕಾರ ಎದುರಿಸಿತ್ತಿದ್ದ ಮುಜುಗರ ಪ್ರಮಾಣ ಕಡಿಮೆಯಾಗುತ್ತಿತ್ತು. ಅದೇನೇ ಇರಲಿ, ಪ್ರಕರಣದ ತನಿಖೆ ಮುಕ್ತಾಯಗೊಂಡು, ಅವರು ನಿರಪರಾಧಿ ಎಂದು ಸಾಬೀತಾದಲ್ಲಿ ಅವರು ಮತ್ತೆ ಸಂಪುಟ ಸೇರಬಹುದು. ಇಂದಿನ ರಾಜಕಾರಣದಲ್ಲಿ ಯಾರೂ ಸಾಚಾ ಅಲ್ಲ. ಬಿಜೆಪಿ ಆಳ್ವಿಕೆಯ ಕಾಲದಲ್ಲಿ ಕೂಡ ಸಾಕಷ್ಟು ಹಗರಣಗಳು ನಡೆದಿವೆ. ಒಟ್ಟಿನಲ್ಲಿ ಇಂದಿನ ರಾಜಕಾರಣ ಗಬ್ಬೆದ್ದು ಹೋಗಿರುವುದು ಪ್ರಜ್ಞಾವಂತರಲ್ಲಿ ಬೇಸರ ಮೂಡಿಸಿದೆ.

-ಕೆ.ವಿ.ವಾಸು, ಮೈಸೂರು

Tags:
error: Content is protected !!