ರಾಜ್ಯದಲ್ಲಿ ನಗರೀಕರಣದ ವೇಗದಿಂದಾಗಿ ಕೃಷಿ ಭೂಮಿಯ ವಿಸ್ತೀರ್ಣ ಸುಮಾರು ಶೇ. ೧೩ರಷ್ಟು ಕುಸಿದಿದೆ ಎಂದು ವರದಿಗಳು ಹೇಳಿವೆ. ಮೂಲಸೌಕರ್ಯಗಳ ಹೆಸರಿನಲ್ಲಿ ಪ್ರತಿವರ್ಷ ಸಾವಿರಾರು ಎಕರೆ ಫಲವತ್ತಾದ ಭೂಮಿ ನಾಶವಾಗುತ್ತಿರುವುದು ಆತಂಕಕಾರಿ. ಇದಕ್ಕೆ ಪರಿಹಾರವಾಗಿ ಕೃಷಿ ಭೂಮಿ ಬ್ಯಾಂಕಿಂಗ್ ಮತ್ತು ಸಾವಯವ ಒಕ್ಕೂಟದಂತಹ ನೂತನ ಪರಿಕಲ್ಪನೆಗಳನ್ನು ಜರಿಗೆ ತರಬೇಕು. ಧಾರ್ಮಿಕ ಸಂಸ್ಥೆಗಳು ತಮ್ಮ ಮಠದ ಜಮೀನುಗಳಲ್ಲಿ ಮಾದರಿ ಸಾವಯವ ತಂತ್ರeನ ಕೇಂದ್ರಗಳನ್ನು ಸ್ಥಾಪಿಸಿ ಶೇ.೧೦೦ರಷ್ಟು ನೈಸರ್ಗಿಕ ಕೃಷಿಗೆ ಪ್ರೇರಣೆ ನೀಡಬಹುದು. ಕೃಷಿ ಭೂಮಿಯನ್ನು ರಸ್ತೆ ಅಥವಾ ಯೋಜನೆಗಳಿಗೆ ವಶಪಡಿಸಿಕೊಳ್ಳುವ ಮುನ್ನ ಪರಿಸರ-ಸಾಮಾಜಿಕ ಆಡಿಟ್ ಕಡ್ಡಾಯವಾಗಬೇಕು. ಧಾರ್ಮಿಕ ಮುಖಂಡರು ಮತ್ತು ಸಾಮಾಜಿಕ ಹೋರಾಟಗಾರರು ರೈತರ ಬೆನ್ನಿಗೆ ನಿಂತಾಗ ಮಾತ್ರ ರಾಜ್ಯದ ಆಹಾರ ಭದ್ರತೆ ಮತ್ತು ಪರಿಸರ ಉಳಿಯಲು ಸಾಧ್ಯ.
-ಡಾ.ಎಚ್.ಕೆ.ವಿಜಯಕುಮಾರ್, ಬೆಂಗಳೂರು




