Mysore
23
overcast clouds

Social Media

ಭಾನುವಾರ, 09 ಆಗಸ್ಟ್ 2026
Light
Dark

ಕೊಡಗು ಜಿಲ್ಲೆಯಲ್ಲಿ ಈವರೆಗೆ 44 ಮನೆಗಳಿಗೆ ಹಾನಿ

ನವೀನ್ ಡಿಸೋಜ

ಮಳೆ ಅವಾಂತರದಿಂದ ಇಬ್ಬರು ಸಾವು, ೬ ಜಾನುವಾರುಗಳು ಬಲಿ; ಎನ್‌ಡಿಆರ್‌ಎಫ್ ಮಾನದಂಡದಂತೆ ಪರಿಹಾರ 

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದರೂ ಇಲ್ಲಿಯವರೆಗೆ ಸುರಿದ ಮಳೆಯಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ೬ ಜಾನುವಾರುಗಳು ಅಸುನೀಗಿದ್ದು, ಇದುವರೆಗೆ ೪೪ ಮನೆಗಳು ಹಾನಿಗೊಳಗಾಗಿವೆ ಎಂದು ಜಿಲ್ಲಾಡಳಿತದ ಅಂಕಿ-ಅಂಶ ಪ್ರಕಟಿಸಿದೆ.

ಜೂನ್ ೧ರಿಂದ ಲಭ್ಯವಿರುವ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ ೩೧ ಮನೆಗಳು ಮಳೆ ಹಾನಿಗೊಳಗಾಗಿವೆ. ಗ್ರಾಮೀಣ ಪ್ರದೇಶದಲ್ಲಿ ೨೯ ಹಾಗೂ ನಗರ ಪ್ರದೇಶದಲ್ಲಿ ೨ ಮನೆಗಳು ಹಾನಿಗೊಳಗಾಗಿವೆ. ಮಡಿಕೇರಿ ತಾಲ್ಲೂಕಿನಲ್ಲಿ ೩, ಕುಶಾಲನಗರ ತಾಲ್ಲೂಕಿನಲ್ಲಿ ೪, ಸೋಮವಾರಪೇಟೆ ತಾಲ್ಲೂಕಿನಲ್ಲಿ ೬, ವಿರಾಜಪೇಟೆ ತಾಲ್ಲೂಕಿನಲ್ಲಿ ೧೧, ಪೊನ್ನಂಪೇಟೆ ತಾಲ್ಲೂಕಿನಲ್ಲಿ ೫ ಮನೆಗಳಿಗೆ ಹಾನಿಯಾಗಿದ್ದರೆ, ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ೨ ಮನೆಗಳು ಹಾನಿಗೊಳಗಾಗಿವೆ. ಹೀಗಾಗಿ ಜೂನ್ ೧ರಿಂದ ಒಟ್ಟು ೩೧ ಮನೆಗಳು ಹಾನಿಗೊಳಗಾಗಿದ್ದು, ಈ ಎಲ್ಲ ಪ್ರಕರಣಗಳಿಗೆ ಸಂಬಂಽಸಿದಂತೆ ಎನ್‌ಡಿಆರ್‌ಎಫ್ ಮಾನದಂಡದಂತೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

ಮಳೆಗಾಲದ ಆರಂಭಕ್ಕೂ ಮುನ್ನ ಅಂದರೆ ಏಪ್ರಿಲ್ ೧ರಿಂದ ಮೇ ೩೧ರವರೆಗೆ ಜಿಲ್ಲೆಯಲ್ಲಿ ಒಟ್ಟು ೧೩ ಮನೆಗಳು ಹಾನಿಗೊಳಗಾಗಿದ್ದವು. ಈ ಎಲ್ಲವೂ ಗ್ರಾಮೀಣ ಪ್ರದೇಶದಲ್ಲಿನ ಮನೆಗಳಾಗಿವೆ. ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ೮, ಮಡಿಕೇರಿ ತಾಲ್ಲೂಕು ವ್ಯಾಪ್ತಿಯಲ್ಲಿ ೩, ವಿರಾಜಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿ ೨ ಮನೆಗಳಿಗೆ ಹಾನಿಯಾಗಿವೆ. ೧೩ ಮನೆಗಳಿಗೂ ಎನ್‌ಡಿಆರ್‌ಎಫ್ ಮಾನದಂಡದಂತೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ.

ಏಪ್ರಿಲ್-ಮೇ ಅವಧಿಯಲ್ಲಿ ದಾಖಲಾಗಿರುವ ೧೩ ಮನೆಗಳು ಹಾಗೂ ಜೂನ್ ೧ರಿಂದ ದಾಖಲಾಗಿರುವ ೩೧ ಮನೆಗಳನ್ನು ಒಟ್ಟುಗೂಡಿಸಿದರೆ, ೨೦೨೬-೨೭ನೇ ಸಾಲಿನಲ್ಲಿ ಇದುವರೆಗೆ ಕೊಡಗು ಜಿಲ್ಲೆಯಲ್ಲಿ ಕನಿಷ್ಠ ೪೪ ಮನೆಗಳು ಮಳೆ ಹಾನಿಗೊಳಗಾಗಿರುವುದು ಅಂಕಿ-ಅಂಶಗಳಿಂದ ಕಂಡುಬಂದಿದೆ. ಮನೆ ಹಾನಿಯಲ್ಲಿ ವಿರಾಜಪೇಟೆ ತಾಲ್ಲೂಕು ೧೧ ಪ್ರಕರಣಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಸೋಮವಾರಪೇಟೆ ೬, ಪೊನ್ನಂಪೇಟೆ ೫, ಕುಶಾಲನಗರ ೪ ಹಾಗೂ ಮಡಿಕೇರಿ ೩ ಪ್ರಕರಣಗಳನ್ನು ಹೊಂದಿವೆ. ನಗರ ಪ್ರದೇಶದಲ್ಲಿ ಕೇವಲ ೨ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಹಾನಿ ಗ್ರಾಮೀಣ ಪ್ರದೇಶದಲ್ಲೇ ಸಂಭವಿಸಿದೆ.

ಕೊಡಗು ಜಿಲ್ಲೆಯಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮನೆ ಹಾನಿ, ಭೂಕುಸಿತ, ರಸ್ತೆ ಸಂಪರ್ಕ ಕಡಿತ ಹಾಗೂ ಕೃಷಿ ಮತ್ತು ಜಾನುವಾರು ಸಾವಿನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲಾಡಳಿತವು ಹಾನಿಗೊಳಗಾದ ಮನೆಗಳು ಹಾಗೂ ಇತರ ಆಸ್ತಿಗಳ ನಷ್ಟವನ್ನು ದಾಖಲಿಸಿ, ಸರ್ಕಾರದ ನಿಯಮಾನುಸಾರ ಪರಿಹಾರ ಒದಗಿಸುವ ಪ್ರಕ್ರಿಯೆ ಕೈಗೊಂಡಿದೆ. ಇಬ್ಬರು ಸಾವು, ಅಸುನೀಗಿದ ೬ ಜಾನುವಾರುಗಳು ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮಾನವ ಜೀವಹಾನಿಗೆ ಸಂಬಂಽಸಿದಂತೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಏಪ್ರಿಲ್ ೧ರಿಂದ ಇದುವರೆಗೆ ಜಿಲ್ಲೆಯಲ್ಲಿ ಒಟ್ಟು ೬ ಜಾನುವಾರುಗಳು ಮೃತಪಟ್ಟಿವೆ.

ಸೋಮವಾರಪೇಟೆ ತಾಲ್ಲೂಕಿನಲ್ಲಿ ೩, ವಿರಾಜಪೇಟೆ ತಾಲ್ಲೂಕಿನಲ್ಲಿ ೧, ಪೊನ್ನಂಪೇಟೆ ತಾಲ್ಲೂಕಿನಲ್ಲಿ ೨ ಜಾನುವಾರುಗಳು ಮೃತಪಟ್ಟಿವೆ. ಈ ಪೈಕಿ ಒಟ್ಟು ೬ ಪ್ರಕರಣಗಳಿಗೆ ಎಸ್‌ಡಿಆರ್‌ಎಫ್ ಮಾನದಂಡದಂತೆ ಆರ್ಥಿಕ ನೆರವು ನೀಡಲಾಗಿದೆ.

” ಈ ಬಾರಿ ಪೂರ್ವ ಮುಂಗಾರು ಸಂದರ್ಭದಲ್ಲಿ ೧೩ ಮತ್ತು ಮುಂಗಾರಿನಲ್ಲಿ ೩೧ ಸೇರಿ ಒಟ್ಟು ೪೪ ಮನೆಗಳಿಗೆ ಹಾನಿಯಾಗಿದೆ. ಈ ಪ್ರಕರಣಕ್ಕೆ ಎನ್‌ಡಿಆರ್ ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ. ಮುಂಗಾರು ಸಂದರ್ಭದಲ್ಲಿ ಇಬ್ಬರು ಮೃತಪಟ್ಟಿದ್ದು, ಅವರಿಗೆ ಸರ್ಕಾರದ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲಾಗಿದೆ.”

ಎಸ್.ಜೆ. ಸೋಮಶೇಖರ್, ಕೊಡಗು ಜಿಲ್ಲಾಧಿಕಾರಿ

 

 

Tags:
error: Content is protected !!